ಡಿಸ್ಪುರ್: ಸ್ವಲ್ಪ, ಸ್ವಲ್ಪ ಹಣವನ್ನು ಜೋಡಿಸಿ ತಮ್ಮ ಆಸೆಯನ್ನು ನೆರೆವೇರಿಸಿಕೊಳ್ಳಬೇಕು ಎನ್ನುವ ಕನಸು ಪ್ರತಿಯೊಬ್ಬರಿಗೂ ಇರುತ್ತದೆ. ಹೀಗಿರುವಾಗ ಇಲ್ಲೊಬ್ಬ ವ್ಯಕ್ತಿ ವಾಹನ ಖರೀದಿ ಮಾಡುವಾಗ ಬುಟ್ಟಿಯಲ್ಲಿ ನಾಣ್ಯಗಳನ್ನು ನೀಡಿ ಸ್ಕೂಟರ್ ಖರೀದಿಸಿರುವುದು ಎಲ್ಲೆಡೆ ಸುದ್ದಿಯಾಗಿದೆ.
Advertisement
ಅಸ್ಸಾಂ ಮೂಲದ ವ್ಯಕ್ತಿಯೊಬ್ಬರು ಸಣ್ಣ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಾ ಜೀವನ ನಡೆಸುತ್ತಿದ್ದರು. ತನ್ನ ದುಡಿಮೆಯ ಒಂದೊಂದು ರೂಪಾಯಿ ಹಣವನ್ನೂ ಕೂಡಿಸಿಟ್ಟು ಸ್ಕೂಟರ್ ಖರೀದಿಸಿದ್ದಾರೆ. ಬ್ರಾಂಡ್ ಮೊಬಿಲಿಟಿ ಸ್ಕೂಟರ್‌ನ್ನು ಖರೀದಿಸಿದ್ದಾರೆ. ಬುಟ್ಟಿಯಲ್ಲಿ ಚಿಲ್ಲರೆಯನ್ನು ತೆಗೆದುಕೊಂಡು ಹೋಗಿ ಶೋರೂಮ್‍ಗೆ ನೀಡಿ ಗಾಡಿಯನ್ನು ಖರೀದಿಸಿದ್ದಾರೆ. ಈ ಫೋಟೋ ಹಾಗೂ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕನಸನ್ನು ನನಸಾಗಿಸಲು ಸಾಕಷ್ಟು ಹಣ ಬೇಕಾಗುತ್ತದೆ. ಅದು ಸಣ್ಣ ಸಣ್ಣ ಉಳಿತಾಯದಿಂದಲೂ ಸಾಧ್ಯವಾಗುತ್ತದೆ ಎಂದು ಕ್ಯಾಪ್ಷನ್ ನೀಡಲಾಗಿದೆ. ಇದನ್ನೂ ಓದಿ:ಸಿಎಂ ಜಗನ್ ಆದೇಶಕ್ಕೆ ನಿಟ್ಟುಸಿರಿಟ್ಟ ತೆಲುಗು ಚಿತ್ರರಂಗ
Advertisement
Advertisement
ಸ್ವಂತ ಹಣದಲ್ಲಿ ವಾಹನವನ್ನು ಖರೀದಿಸಬೇಕು ಎನ್ನುವ ಆಸೆ ಇರುತ್ತದೆ. ಇಲ್ಲಿ ಅಸ್ಸಾಂನ ಮಧ್ಯಮ ವರ್ಗದ ವ್ಯಕ್ತಿಯೊಬ್ಬ ತನ್ನ 8 ತಿಂಗಳ ಸಂಪಾದನೆಯನ್ನು ಉಳಿಸಿ ಸ್ವಂತ ಸ್ಕೂಟಿಯನ್ನು ಖರೀದಿಸಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಡಾ.ವಿಷ್ಣು ಪುತ್ಥಳಿ ಅನಾವರಣಕ್ಕೆ ಹಿಜಬ್ -ಕೇಸರಿ ವಿವಾದ ಅಡ್ಡಿ