ಬೀಜಿಂಗ್: ಶಾಂಘೈ ಸಹಕಾರ ಶೃಂಗಸಭೆಗೆ (SCO Summit) ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ (Xi Jinping) ಅವರ ನೆಚ್ಚಿನ ಹಾಂಗ್ಕಿ ಕಾರನ್ನು (Hongqi Car) ನೀಡಲಾಗಿದೆ.
ಪ್ರಧಾನಿ ಮೋದಿ ಅವರು ಎರಡು ದಿನಗಳ ಕಾಲ ಟಿಯಾಂಜಿನ್‌ನಲ್ಲಿ ಈ ಕಾರಿನಲ್ಲೇ ಸಂಚರಿಸಲಿದ್ದಾರೆ.
ರೆಡ್ ಫ್ಲ್ಯಾಗ್ ಎಂದೂ ಕರೆಯಲ್ಪಡುವ ಹಾಂಗ್ಕಿ L5 ಕಾರನ್ನು ಕ್ಸಿ ಅವರು 2019 ರಲ್ಲಿ ತಮಿಳುನಾಡಿನ ಮಹಾಬಲಿಪುರಂನಲ್ಲಿ (Mahabalipuram) ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದಾಗ ಬಳಸಿದ್ದರು. ಇದನ್ನೂ ಓದಿ:ಚೀನಾ ಕಮ್ಯುನಿಸ್ಟ್ ಪಕ್ಷದ ಪ್ರಬಲ ನಾಯಕ, ಜಿನ್‌ಪಿಂಗ್ ಆಪ್ತಮಿತ್ರನನ್ನ ಭೇಟಿಯಾದ ಮೋದಿ
#SCOSummit2025 | 𝐏𝐫𝐞𝐬𝐢𝐝𝐞𝐧𝐭 𝐗𝐢 𝐉𝐢𝐧𝐩𝐢𝐧𝐠’𝐬 𝐩𝐫𝐞𝐟𝐞𝐫𝐫𝐞𝐝 𝐇𝐨𝐧𝐠𝐪𝐢 𝐜𝐚𝐫 𝐢𝐬 𝐏𝐌 𝐌𝐨𝐝𝐢’𝐬 𝐝𝐞𝐬𝐢𝐠𝐧𝐚𝐭𝐞𝐝 𝐯𝐞𝐡𝐢𝐜𝐥𝐞 𝐝𝐮𝐫𝐢𝐧𝐠 𝐂𝐡𝐢𝐧𝐚 𝐯𝐢𝐬𝐢𝐭
The Chinese govt has provided Prime Minister @narendramodi with the country’s symbolic… pic.twitter.com/AaQP4iW1Eo
— IndiaToday (@IndiaToday) August 31, 2025
1958 ರಲ್ಲಿ ಹಾಂಗ್ಕಿ ಮೊದಲ ಕಾರು ನಿರ್ಮಾಣವಾಗಿತ್ತು. ಚೀನಾದ ಕಮ್ಯೂನಿಸ್ಟ್ ಪಾರ್ಟಿಯ ಗಣ್ಯರಿಗಾಗಿ ಸರ್ಕಾರಿ ಸ್ವಾಮ್ಯದ ಫಸ್ಟ್ ಆಟೋಮೋಟಿವ್ ವರ್ಕ್ಸ್ ಈ ಕಾರನ್ನು ಉತ್ಪಾದಿಸಿತ್ತು.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರು ಚೀನಾದ ರಾಜತಾಂತ್ರಿಕ ಪರವಾನಗಿ ಫಲಕಗಳನ್ನು ಹೊಂದಿರುವ ತಮ್ಮ ಅಧ್ಯಕ್ಷೀಯ ʼಔರಸ್ʼ ಕಾರನ್ನು ನೀಡಲಾಗಿದೆ. ಔರಸ್ ರಷ್ಯಾದ ವಾಹನ ತಯಾರಕ ಔರಸ್ ಮೋಟಾರ್ಸ್ ತಯಾರಿಸಿದ ರೆಟ್ರೋ-ಶೈಲಿಯ ಐಷಾರಾಮಿ ವಾಹನವಾಗಿದೆ. ಇದನ್ನೂ ಓದಿ:ಪಾಕಿಸ್ತಾನ ಮ್ಯಾಪ್ ವಿಚಾರಕ್ಕೆ ಸಿಟ್ಟಾಗಿSCOಸಭೆಯಿಂದ ಎದ್ದು ಹೊರಬಂದಿದ್ದ ಅಜಿತ್ ದೋವಲ್
ದ್ವಿಪಕ್ಷೀಯ ಸಭೆಯಲ್ಲಿ, ಕ್ಸಿ ಜಿನ್‌ಪಿಂಗ್ ಪ್ರಧಾನಿ ಮೋದಿಗೆ ಡ್ರ್ಯಾಗನ್ ಮತ್ತು ಆನೆ ಒಟ್ಟಿಗೆ ಸೇರುವುದು ಮತ್ತು ಸ್ನೇಹಿತರಾಗುವುದು ಅತ್ಯಗತ್ಯ ಎಂದು ಹೇಳಿದರು.