ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮೇಲಿಂದ ಮೇಲೆ ಹೊಸ ಹೊಸ ಬಾಂಬ್ ಒಗೆಯುತ್ತಿರುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವ್ಯಂಗ್ಯವಾಡಿದರು.
ಕಾಂಗ್ರೆಸ್ ಬಿಟ್ಟು 16 ಜನ ಬಿಜೆಪಿಗೆ ಬರುತ್ತಾರೆ ಎಂಬ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ 120 ಸೀಟ್ ಇವೆ. ಆ ಸೀಟ್‍ಗಳು ಸಹ ಈಗಾಗಲೇ ಹೌಸ್ ಫುಲ್ ಆಗಿವೆ. ನೀವು ಇನ್ನೂ 16 ಜನರನ್ನು ಎಲ್ಲಿ ಕೂರಿಸುತ್ತೀರಿ. ಅವರನ್ನು ಟಾಪ್ ಮೇಲಾ, ಕೆಳಗಾ ಅಥವಾ ಡಿಕ್ಕಿಯಲ್ಲಾ ಎಲ್ಲಿ ಕೂರಿಸುತ್ತೀರಿ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಚೀನಾದಿಂದ ಅರುಣಾಚಲ ಪ್ರದೇಶದ ಹುಡುಗನ ಅಪಹರಣ – ಪ್ರಧಾನಿ ವಿರುದ್ಧ ರಾಗಾ ಕಿಡಿ
ರಮೇಶ್ ಜಾರಕಿಹೊಳಿ ಮೇಲಿಂದ ಮೇಲೆ ಹೊಸ ಹೊಸ ಬಾಂಬ್ ಒಗೆಯುತ್ತಿರುತ್ತಾರೆ. ಕೆಲವು ಬಾಂಬ್ ಹಾರುತ್ತೆ ಕೆಲವು ಹಾಗೇ ಹಾರುವುದಿಲ್ಲ. ಅವರು ಬಾಂಬ್ ಹಾರುತ್ತೇ ಅಂತಾ ಕಿವಿ ಮುಚ್ಚಿಕೊಂಡು ನಿಲ್ಲಬೇಕಾಗುತ್ತೆ. ಅವರು ಟೈಮ್ ಪಾಸ್ ಮಾಡ್ತಿರುತ್ತಾರೆ ಅಷ್ಟೇ. ರಮೇಶ್ ಮತ್ತು ಲಖನ್ ಜಾರಕಿಹೊಳಿ ರಾಜಕೀಯ ವ್ಯಾಪಾರ ಮಾಡುತ್ತಾ ಕೂರುವವರು. ಇವರೇನೂ ಸಮಾಜ ಸೇವೆ ಮಾಡುವವರು ಅಲ್ಲಾ. ಬಿಜೆಪಿಗೆ ಹೋಗುತ್ತೇವೆ ಅಂತಾ ಕಾಂಗ್ರೆಸ್ ನವರಿಗೆ ಬ್ಲ್ಯಾಕ್ ಮೇಲ್ ಮಾಡುತ್ತಾರೆ. ಕಾಂಗ್ರೆಸ್‍ಗೆ ಹೋಗುತ್ತೇವೆ ಅಂತಾ ಬಿಜೆಪಿಯವರಿಗೆ ಬ್ಲ್ಯಾಕ್ ಮೇಲ್ ಮಾಡುತ್ತಾರೆ. 6 ತಿಂಗಳ ನಂತರ ಆಕಡೆಯಿಂದ ಈಕಡೆ ಹೋಗೊದು ಎಲ್ಲವೂ ನಡೆಯುತ್ತೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಭಟ್ಕಳದಲ್ಲಿ ಪಾಕಿಸ್ತಾನಿ ಮಹಿಳೆಗೆ ಆಧಾರ್ ಕಾರ್ಡ್ – ಚುನಾವಣೆ ಆಯೋಗದಿಂದ 100ಕ್ಕೂ ಹೆಚ್ಚು ಅರ್ಜಿಗಳು ವಜಾ
ಕಾಂಗ್ರೆಸ್ ನವರು ಬಿಜೆಪಿಗೆ ಹೋಗುವ ಪರಿಸ್ಥಿತಿಯಲ್ಲಿ ಇಲ್ಲ. ಜೆಡಿಎಸ್, ಬಿಜೆಪಿಯವರು ನಮ್ಮ ಪಕ್ಷಕ್ಕೆ ಖಂಡಿತವಾಗಿ ಬರುತ್ತಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಹಾಗೂ ನಮ್ಮ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳುವುದು ಸತ್ಯ. ನಮ್ಮ ಕಾಂಗ್ರೆಸ್ ನಿಂದ ಬಿಜೆಪಿಗೆ ಹೋದವರು ಸಂಪರ್ಕದಲ್ಲಿದ್ದಾರೆ. ಕೆಲವು ಸಚಿವರು ಮತ್ತು ಜೆಡಿಎಸ್ ನವರು ಸಂಪರ್ಕದಲ್ಲಿದ್ದಾರೆ. ಕಾಂಗ್ರೆಸ್ ನಿಂದ ಬಿಜೆಪಿಗೆ ಹೋದವರು ಮತ್ತೆ ಕಾಂಗ್ರೆಸ್‍ಗೆ ಬಂದೇ ಬರುತ್ತಾರೆ. ಯಾರು ಕಾಂಗ್ರೆಸ್‍ಗೆ ಬರುತ್ತಾರೆ ಅನ್ನುವುದು ಸಿದ್ದರಾಮಯ್ಯ, ಡಿಕೆಶಿ ಅವರಿಗೆ ಗೊತ್ತು ಎಂದರು.