ಬೆಳಗಾವಿ: ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಪ್ರಮುಖ ಕಡತಗಳೇ ಕಳುವಾಗಿವೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ (Police Station) ದೂರು ನೀಡುವಂತೆ ಪಾಲಿಕೆ ಆಯುಕ್ತರಿಗೆ ಸೂಚನೆ ಕೊಟ್ಟಿದ್ದೇನೆ. ಇದರಲ್ಲಿ ಬಿಜೆಪಿಯರು (BJP) ಹೆಜ್ಜೆ ಹೆಜ್ಜೆಗೂ ತಪ್ಪು ಮಾಡಿದ್ದು, ನಮ್ಮವರೂ ಇದ್ದಾರೆಂಬ ಸಂಶಯವಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ (Satish Jarakiholi) ತಿಳಿಸಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ (Belagavi Municipal Corporation) ಪ್ರಮುಖ ಕಡತ ಕಳವು (File Theft) ವಿಚಾರಕ್ಕೆ ಉಸ್ತುವಾರಿ ಸಚಿವರು ಪ್ರತಿಕ್ರಿಯೆ ನೀಡಿದ್ದು, ಮೇಯರ್ ಅವರು ಸಹಿ ಮಾಡಿರುವ ಕಡತಗಳೇ ಕಾಣೆಯಾಗಿವೆ. ಮಿಸ್ಸಿಂಗ್ ಮಾಡಿದವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಆಯುಕ್ತರಿಗೆ ಹೇಳಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಸೋಲಿನ ಸಂಪೂರ್ಣ ಹತಾಶೆಯಿಂದ ಬಿಜೆಪಿ ನನ್ನ ರಾಜೀನಾಮೆ ಕೇಳುತ್ತಿದೆ: ಡಾ.ಶರಣಪ್ರಕಾಶ್ ಪಾಟೀಲ್
Advertisement
Advertisement
ನಮ್ಮವರೂ ಕೃತ್ಯದಲ್ಲಿ ಭಾಗಿಯಾಗಿರಬಹುದು:
ದೂರು ನೀಡುವ ವಿಚಾರ ಬಗ್ಗೆ ಚರ್ಚೆಯಾಗುತ್ತಿದೆ. ಅದು ಆಯುಕ್ತರ ಜವಾಬ್ದಾರಿಯೂ ಹೌದು. ಕಡತಗಳು ಕಾರ್ಯದರ್ಶಿಗಳ ಬಳಿ ಇರಬೇಕಿತ್ತು. ಆದರೀಗ ಮೇಯರ್ ಸಹಿ ಮಾಡಿರುವ ಒರಿಜಿನಲ್ ಪ್ರತಿಗಳೇ ಕಳವು ಆಗಿದೆ. ಅದೇ ವಿಚಾರ ಇಟ್ಟುಕೊಂಡು ಬಿಜೆಪಿಯವರು ಆಯುಕ್ತರ ವಿರುದ್ಧ ಆರೋಪ ಮಾಡ್ತಿದ್ದಾರೆ. ಮೊದಲು ತಾವೇ ಸಹಿ ಮಾಡಿದ್ದ ಮಾಡಿರುವುದಾಗಿ ಹೇಳಿದ್ದ ಆಯುಕ್ತರು ಈಗ ಅವರೇ ನಮ್ಮನ್ನು ದೂರುತ್ತಿದ್ದಾರೆ. ಹಾಗಾಗಿ ನಮ್ಮವರೂ ಸಹ ಕೃತ್ಯದಲ್ಲಿ ಭಾಗಿಯಾಗಿರುವ ಸಂಶಯ ಬರುತ್ತಿದೆ. ಆದ್ದರಿಂದ ದೂರು ನೀಡಲು ಹೇಳಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಕ್ರಮ ಮರಳು ದಂಧೆ ಪ್ರಶ್ನಿಸಿದ್ದಕ್ಕೆ ಮಾರಣಾಂತಿಕ ಹಲ್ಲೆ – ನದಿಗೆ ಎಸೆಯಲು ಪ್ಲಾನ್
Advertisement
Advertisement
ಪಾಲಿಕೆ ರದ್ದು ಮಾಡಲು ಅವಕಾಶವಿದೆ: ನಗರಪಾಲಿಕೆಯಲ್ಲಿ ಸೂಪರ್ ಸೀಡಿಂಗ್ ಮಾಡುವ ಅವಶ್ಯಕತೆ ಇಲ್ಲ. ಕಾನೂನು ಏನಿದೆ ಅದನ್ನ ತಿಳಿದುಕೊಂಡು ಎಲ್ಲರೂ ಹೋಗಬೇಕು. ಬಿಜೆಪಿಯವರು ನಾವು ಗೆದ್ದು ಬಂದಿದ್ದೇವೆ ಅನೋ ಭ್ರಮಯಲ್ಲಿ ಇದ್ದಾರೆ. ಹೆಜ್ಜೆ ಹೆಜ್ಜೆಗೂ ತಪ್ಪು ಮಾಡಿದ್ದಾರೆ. ಬೆಳಗಾವಿ ಪಾಲಿಕೆ ರದ್ದು ಮಾಡಲು ಸಾಕಷ್ಟು ಅವಕಾಶ ಇದೆ, ಆದ್ರೆ ಅದು ಸೂಕ್ತವಲ್ಲ. ಪೊಲೀಸ್ ತನಿಖೆಯಲ್ಲಿ ಎಲ್ಲವೂ ಗೊತ್ತಾಗುತ್ತೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹೆಬ್ಬಾಳ್ಕರ್, ಜಾರಕಿಹೊಳಿ ಮಧ್ಯೆ ಭಿನ್ನಾಭಿಪ್ರಾಯ – ಸ್ಥಳೀಯ ನಿಗಮಗಳ ವಿಚಾರಕ್ಕೇ ಗುದ್ದಾಟ
Web Stories