ಹುಬ್ಬಳ್ಳಿ: ಚಂದ್ರಶೇಖರ ಗುರೂಜಿ (Chandrashekhar Guruji) ಹತ್ಯೆಯ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಮುಖ್ಯ ತನಿಖಾಧಿಕಾರಿ ಎಸಿಪಿ ವಿನೋದ ಮುಕ್ತೇದಾರ ನೇತೃತ್ವದಲ್ಲಿ ಐದು ತನಿಖಾ ತಂಡ ರಚಿಸಲಾಗಿತ್ತು. ಸದ್ಯ ನ್ಯಾಯಾಲಯಕ್ಕೆ 800ಕ್ಕೂ ಅಧಿಕ ದೋಷಾರೋಪಣೆ ಪುಟಗಳನ್ನು ಅಧಿಕಾರಿಗಳು ಸಲ್ಲಿಸಿದ್ದಾರೆ. ಹಣ, ಬೇನಾಮಿ ಆಸ್ತಿ, ಮತ್ತು ಹಂತಕರಿಗೆ ಗುರೂಜಿಯಿಂದ ಹಂತಕರಿಗೆ ಮಾನಸಿಕ ಕಿರಿಕಿರಿ ಕೊಲೆಗೆ ಮುಖ್ಯ ಕಾರಣ ಎಂಬ ಪ್ರಮುಖ ಅಂಶಗಳು ಜಾರ್ಜ್ ಶೀಟ್ (ChargeSheet) ನಲ್ಲಿ ದಾಖಲಾಗಿವೆ.
Advertisement
ಹುಬ್ಬಳ್ಳಿಯ ಖಾಸಗಿ ಹೋಟೆಲ್‍ನಲ್ಲಿ ನಡೆದ ಪ್ರಖ್ಯಾತ ಸರಳವಾಸ್ತು ಗುರೂಜಿಯ ಹತ್ಯೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಹತ್ಯೆಗೆ ಕಾರಣ ತಿಳಿಯಲು ಮುಖ್ಯ ತನಿಖಾಧಿಕಾರಿ ಎಸಿಪಿ ವಿನೋದ ಮುಕ್ತೇದಾರ ನೇತೃತ್ವದಲ್ಲಿ ಐದು ತನಿಖಾ ತಂಡ ರಚಿಸಲಾಗಿತ್ತು. ಸದ್ಯ ಪೊಲೀಸ್ ಅಧಿಕಾರಿಗಳು ನ್ಯಾಯಾಲಯಕ್ಕೆ 800 ಪುಟಗಳ ಚಾರ್ಜ್‍ಶೀಟ್ ಸಲ್ಲಿಸಿದ್ದಾರೆ.
Advertisement
Advertisement
ಚಂದ್ರಶೇಖರ ಗುರೂಜಿ ಹತ್ಯೆಗೆ ಕಾರಣಗಳು: ಹಂತಕನ ಹೆಸರಿನಲ್ಲಿದ್ದ 10 ಕೋಟಿ ಬೇನಾಮಿ ಜಮೀನಿ (Property) ನ ವ್ಯಾಜ್ಯವೇ ಹತ್ಯೆಗೆ ಕಾರಣ ಎಂಬುದಾಗಿ ಉಲ್ಲೇಖಿಸಲಾಗಿದೆ. ವಿಚಾರಣೆ ವೇಳೆ ಬೇನಾಮಿ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆ ಪತ್ತೆಯಾಗಿದೆ. ಹುಬ್ಬಳ್ಳಿಯ ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿರುವ 10 ಕೋಟಿ ರೂಪಾಯಿ ಮೌಲ್ಯದ 4.5 ಎಕರೆ ಜಮೀನು ಇದೆ. ಇದನ್ನು ಬೇನಾಮಿಯಾಗಿ ಗುರೂಜಿ ಹಂತಕ ಮಹಾಂತೇಶ ಹೆಸರಿಗೆ ಮಾಡಿದ್ದರು. ಈ ಜಮೀನನ್ನು ಮಹಾಂತೇಶ ಗುರೂಜಿಗೆ ತಿಳಿಯದಂತೆ ಮಾರಿದ್ದ. ಈ ವಿಚಾರವಾಗಿ ಗುರೂಜಿ, ಮಹಾಂತೇಶ ಕೋರ್ಟ್ ಮೆಟ್ಟಿಲೇರಿದ್ದರು.
Advertisement
ರೆವಿನ್ಯೂ ಕೋರ್ಟ್ (Revenue Court) ನಲ್ಲಿ ಕೇಸ್ ಮಹಾಂತೇಶ್ ಪರವಾಗಿತ್ತು. ಈ ತೀರ್ಪು ಪ್ರಶ್ನಿಸಿ ಗುರೂಜಿ ಸಿವಿಲ್ ಕೋರ್ಟ್ (Civil Court) ಗೆ ಹೋಗಿದ್ದರು. ಈ ವಿಚಾರ ಮಹಾಂತೇಶ್ ಮತ್ತು ಗುರೂಜಿ ನಡುವೆ ಕಲಹಕ್ಕೆ ಕಾರಣವಾಗಿತ್ತು. ಅಲ್ಲದೆ ಹಂತಕರು ಸರಳವಾಸ್ತು ಸಂಸ್ಥೆಗೆ ವಿರುದ್ಧವಾಗಿ ಮತ್ತೊಂದು ಸಂಸ್ಥೆ ಕಟ್ಟಿದ್ರು. ತನ್ನ ಪ್ರಾಪರ್ಟಿಯನ್ನು ಮಹಾಂತೇಶ ಕಬಳಿಸಿದ್ದಕ್ಕೆ ಗುರೂಜಿ ಸಿಟ್ಟಾಗಿದ್ದರು. ಕೋಪಗೊಂಡಿದ್ದ ಗುರೂಜಿ ಇವರಿಗೆ ಹಿನ್ನಡೆ ಆಗುವಂತೆ ಮಾಡಿದ್ರು. ಇದಕ್ಕೆ ಹಂತಕರು ಗುರೂಜಿ ಅಪಾರ್ಟ್‍ಮೆಂಟ್‍ನಲ್ಲಿ ರೂಲ್ಸ್ ಬ್ರೇಕ್ ಆಗ್ತಿದೆ ಅಂತ ದೂರು ಕೊಟ್ಟಿದ್ರು.
ಕಾನೂನುಗಳು ಉಲ್ಲಂಘನೆಯಾಗುತ್ತಿವೆ ಅಂತ ಗ್ರಾಹಕರ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಈ ದೂರನ್ನು ಹಿಂಪಡೆಯುವಂತೆ ಗುರೂಜಿಯೇ ಹಂತಕರಿಗೆ ಒತ್ತಡ, ಮಾನಸಿಕ ಕಿರಿಕಿರಿ ನೀಡಿದ್ದರು ಎಂದು ಚಾರ್ಜ್‍ಶೀಟ್‍ನಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ. ಇಷ್ಟೆಲ್ಲ ಆದ್ಮೇಲೆ ಈ ಹಂತಕರು ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿಯವರನ್ನು ಹತ್ಯೆ ಮಾಡಲು ಪೂರ್ವ ತಯಾರಿ ನಡೆಸಿದ್ರು.
ಹತ್ಯೆಗೆ ಪ್ರೀಪ್ಲಾನ್..!: ಗುರೂಜಿ ಹತ್ಯೆಗೆ ಮೂರು ತಿಂಗಳಿನಿಂದ ಹಂತಕರಿಂದ ಸ್ಕೆಚ್ ಹಾಕಿದ್ದರು. ಸಾರ್ವಜನಿಕವಾಗಿ ಗುರೂಜಿ ಕೊಲ್ಲಲು ಪ್ಲಾನ್ ಮಾಡಿದ್ರು. ಆದರೆ ಅದು ಸಫಲವಾಗಿರಲಿಲ್ಲ. ತಮ್ಮ ಮೊಮ್ಮಗನ ಸಾವಿನಿಂದ ಗುರೂಜಿ ಹುಬ್ಬಳ್ಳಿಗೆ ಬಂದಿದ್ದ ವಿಷಯ ತಿಳಿದ ಆರೋಪಿಗಳು, ಗುರೂಜಿ ಬಂದ ದಿನವೇ ಖಾಸಗಿ ಹೋಟೆಲ್‍ನಲ್ಲಿ ರೂಂ ಪಡೆದು ಹತ್ಯೆಗೆ ಮಾಸ್ಟರ್ ಪ್ಲಾನ್ ಹೂಡಿದ್ದರು. ಇದನ್ನೂ ಓದಿ: ದಸರಾ ಮೆರವಣಿಗೆ ವೇಳೆ ಮದರಸಾಗೆ ನುಗ್ಗಿ ಪೂಜೆ – 9 ಜನರ ವಿರುದ್ಧ ಎಫ್‌ಐಆರ್
ಹತ್ಯೆ ಹಿಂದಿನ ದಿನ ಗುರೂಜಿಗೆ ಕರೆ ಮಾಡಿ ಮಾತಾಡಿ ಸಮಸ್ಯೆ ಬಗೆಹರಿಸಿಕೊಳ್ಳೋಣ ಎಂದು ನಾಟಕ ಮಾಡಿದರು. ಹಂತಕರ ಮಾತು ನಂಬಿದ್ದ ಗುರೂಜಿ ಭೇಟಿಗೆ ಒಪ್ಪಿ ಬರಲು ತಿಳಿಸಿದ್ದಾರೆ. ಗುರೂಜಿ ಭೇಟಿಗೆ ಹೋಟೆಲ್‍ಗೆ ಹೋಗಿದ್ದ ಹಂತಕರು, ಬೇನಾಮಿ ಆಸ್ತಿ ಪತ್ರ ಮತ್ತು ಹತ್ಯೆಗಾಗಿ ಚಾಕುವನ್ನು ಒಂದೇ ಕವರ್ ನಲ್ಲಿ ತಂದಿದ್ದರು. ಪ್ರೆಸಿಡೆಂಟ್ ಹೋಟೆಲ್‍ಗೆ ತೆಗೆದುಕೊಂಡು ಹೋಗಿದ್ದರು. ಮೊದಲು ದಾಖಲೆ ಪತ್ರ ತೆಗೆಯುವಂತೆ ನಾಟಕವಾಡಿ ಬಳಿಕ ಚಾಕು ತೆಗೆದು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖಿಸಿದ್ದಾರೆ.
ಒಟ್ಟಾರೆ ಚಂದ್ರಶೇಖರ್ ಗುರೂಜಿ ಹತ್ಯೆ ನಡೆದು 3 ತಿಂಗಳು ಕಳೆದ ಮೇಲೆ ಚಾರ್ಜ್‍ಶೀಟ್ ದಾಖಲಾಗಿದ್ದು. ಹಂತಕರಿಗೆ ಯಾವ ಶಿಕ್ಷೆ ಆಗಲಿದೆ ಎಂಬುದು ಮುಂದೆ ಗೊತ್ತಾಗಲಿದೆ.