ಮುಂಬೈ: ಬಾಲಿವುಡ್ ನಟಿ ಸಾರಾ ಅಲಿ ಖಾನ್ ಸಹೋದರ ಇಬ್ರಾಹಿಂ ಅಲಿ ಖಾನ್ ಜೊತೆಗೆ ಕಾಶ್ಮೀರ ಟ್ರಿಪ್ ಹೊಡೆಯುವುದರಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.
ಸದ್ಯ ಕಾಶ್ಮೀರದಲ್ಲಿ ಸಖತ್ ಎಂಜಾಯ್ ಮಾಡುತ್ತಿರುವ ಸಾರಾ ಅಲಿ ಖಾನ್ ಅಲ್ಲಿ ಕೆಲವೊಂದಷ್ಟು ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಹೊಸ ನೋಟ ಪಡೆಯಿತು ರಾಜ್ ಕುಂದ್ರಾ ಇನ್ಸ್ಟಾಗ್ರಾಮ್ ಪ್ರೊಫೈಲ್
ಫೋಟೋದಲ್ಲಿ ಸಾರಾ ಅಲಿ ಖಾನ್ ಹಾಗೂ ಇಬ್ರಾಹಿಂ ಹಿಂದೆ ಹಿಮದ ಗಡ್ಡೆ ಇರುವುದನ್ನು ಕಾಣಬಹುದಾಗಿದೆ. ಅಲ್ಲದೇ ವೀಡಿಯೋವೊಂದರಲ್ಲಿ ಇಬ್ರಾಹಿಂ ಅಲಿ ಖಾನ್ ಐಸ್ ಮೇಲೆ ಸ್ಕೇಟಿಂಗ್ ಆಡಿರುವುದನ್ನು ಕಾಣಬಹುದಾಗಿದೆ. ವಿಶೇಷವೆಂದರೆ ಈ ಫೋಟೋಗಳ ಜೊತೆಗೆ ಕ್ಯಾಪ್ಷನ್ನಲ್ಲಿ ಸಹೋದರ ಎಲ್ಲಿರುತ್ತಾನೋ ಅದೇ ಮನೆಯಾಗಿರುತ್ತದೆ ಎಂದು ಪ್ರೀತಿಯಿಂದ ಸಾರಾ ಕ್ಯಾಪ್ಷನ್ನಲ್ಲಿ ಬರೆದುಕೊಂಡಿದ್ದಾರೆ.
View this post on Instagram
ಸಾರಾ ಶೇರ್ ಮಾಡಿರುವ ಮೊದಲ ಫೋಟೋದಲ್ಲಿ ಇಬ್ರಾಹಿಂ ಜೊತೆ ಕಾರಿನ ಮೇಲೆ ಕುಳಿತುಕೊಂಡಿದ್ದಾರೆ, ಎರಡನೇ ಫೋಟೋದಲ್ಲಿ ಪಿಂಕ್ ಕಲರ್ ಟೋಪಿ ತೊಟ್ಟು ಫೋಟೋಗೆ ಪೋಸ್ ನೀಡಿದ್ದಾರೆ. ಮತ್ತೊಂದರಲ್ಲಿ ಸ್ನೇಹಿತರೊಂದಿಗೆ ಮಂಜು ಗಡ್ಡೆಯಿಂದ ಹಿಮಮಾನವನನ್ನು ನಿರ್ಮಿಸುತ್ತಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ದೇವರು ನನ್ನ ಬ್ರಾ ಸೈಜ್ ತೆಗೆದುಕೊಳ್ತಿದ್ದಾರೆ ಎಂದಿದ್ದ ನಟಿ ಕ್ಷಮೆ
ಒಟ್ಟಾರೆ ಹಲವಾರು ಫೋಟೋ ಹಾಗೂ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಸಾರಾ ಅಲಿ ಖಾನ್ ಅವರು ಕಾಶ್ಮೀರದಲ್ಲಿನ ತಾಪಮಾನ ಮೈನಸ್ 7ಡಿಗ್ರಿ ಇತ್ತು ಎಂದು ತಿಳಿಸಿದ್ದಾರೆ. ಸದ್ಯ ಈ ಫೋಟೋಗಳಿಗೆ ಅಭಿಮಾನಿಗಳಿಂದ ಹಲವಾರು ಲೈಕ್ಸ್ಗಳು ಹರಿದುಬರುತ್ತಿದ್ದು, ಅಭಿಮಾನಿಗಳು ಸಾರಾ ಹಾಗೂ ಇಬ್ರಾಹಿಂ ಇಬ್ಬರೂ ಸುರಕ್ಷಿತವಾಗಿರಿ ಮತ್ತು ಅದ್ಭುತವಾದಂತಹ ಸಮಯ ಕಳೆಯಿರಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.