ಟಾಲಿವುಡ್ ನಟ ನಾನಿ (Nani) ಮತ್ತು ಶ್ರೀನಿಧಿ ಶೆಟ್ಟಿ ನಟನೆಯ ‘ಹಿಟ್ 3’ (Hit 3) ಸಿನಿಮಾ ಇದೇ ಮೇ 1ರಂದು ರಿಲೀಸ್‌ಗೆ ಸಜ್ಜಾಗಿದೆ. ಇದೀಗ ಸಂರ್ದಶವೊಂದರಲ್ಲಿ ನಾನಿ ಇಂಟ್ರೆಸ್ಟಿಂಗ್ ವಿಚಾರವೊಂದನ್ನು ರಿವೀಲ್ ಮಾಡಿದ್ದಾರೆ. ಸುದೀಪ್ ಪುತ್ರಿ ಸಾನ್ವಿ ‘ಹಿಟ್ 3’ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಈ ಬಗ್ಗೆ ನಾನಿ ಬಿಗ್ ನ್ಯೂಸ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:‘ಮ್ಯಾಕ್ಸ್’ ಖ್ಯಾತಿಯ ಶ್ರೀಧರ್‌ಗೆ ಅನಾರೋಗ್ಯ- ಚಿಕಿತ್ಸೆಗೆ ಸಹಾಯ ಕೋರಿದ ನಟ
ಸಂದರ್ಶನವೊಂದರಲ್ಲಿ ಸುದೀಪ್ ಜೊತೆಗಿನ ಒಡನಾಟದ ಬಗ್ಗೆ ಬಿಚ್ಚಿಟ್ಟಿದ್ದಾರೆ. ಸುದೀಪ್ ಅವರು ನನ್ನ ಕುಟುಂಬ. ನಿನ್ನೆಯಷ್ಟೇ ನಾವು ಭೇಟಿಯಾಗಿದ್ದೇವು. ಆ ನಂತರ ಅವರು ‘ಬಿಲ್ಲಾ ರಂಗ ಭಾಷಾ’ ಶೂಟಿಂಗ್‌ಗೆ ತೆರಳಿದರು ಎಂದು ಮಾತನಾಡಿದ್ದಾರೆ. ಈ ವೇಳೆ, ನಿರೂಪಕಿಗೆ ನೀವು ‘ಹಿಟ್ 3’ ಟ್ರೈಲರ್ ನೋಡಿದ್ರಾ ಅದರಲ್ಲಿ ಗಾಯಕಿಯ ಧ್ವನಿ ಕೇಳಿಸುತ್ತದೆ. ಅದು ಸಾನ್ವಿಯ (Sanvi Sudeep) ವಾಯ್ಸ್ ಎಂದು ನಾನಿ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ:ಪೊರಕೆ ಹಿಡಿದು ಹೊಸ ಅವತಾರದಲ್ಲಿ ಯುವ ಎಂಟ್ರಿ- ‘ಎಕ್ಕ’ ಚಿತ್ರದ ಟೀಸರ್ ಔಟ್
ನಾನು ಸಾನ್ವಿ ವಾಯ್ಸ್‌ಗೆ ಅಭಿಮಾನಿ, ಆಕೆ ಅದ್ಭುತ ಹಾಡುಗಾರ್ತಿ ಎಂದು ನಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾನಿ ಅವರ ಮೆಚ್ಚುಗೆ ಮಾತುಗಳು ಕಿಚ್ಚನ ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ. ‘ಹಿಟ್ 3’ ಸಿನಿಮಾ ನೋಡಲು ಕಾತರದಿಂದ ಫ್ಯಾನ್ಸ್ ಕಾಯುತ್ತಿದ್ದಾರೆ.
ಅಂದಹಾಗೆ, 2012ರಲ್ಲಿ ನಾನಿ ಹಾಗೂ ಸಮಂತಾ ನಟನೆಯ ‘ಈಗ’ ಸಿನಿಮಾದಲ್ಲಿ ಸುದೀಪ್ (Sudeep) ನಟಿಸಿದ್ದರು. ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಿದ್ದರು. ಹಾಗಾಗಿ ಸುದೀಪ್ ಜೊತೆ ನಾನಿಗೆ ಉತ್ತಮ ಒಡನಾಟವಿದೆ.