ಮೈಸೂರು: ಸದ್ಯ ರಾಜ್ಯ ರಾಜಕೀಯ ಹಾಗೂ ಅಪರಾಧ ರಂಗದಲ್ಲಿ ಭಾರೀ ಸುದ್ದಿಯಲ್ಲಿರುವ ಸ್ಯಾಂಟ್ರೋ ರವಿಯ (Santro Ravi) ಮತ್ತೊಂದು ಕೃತ್ಯ ಬೆಳಕಿಗೆ ಬಂದಿದೆ. ಈತ ಹಣಕಾಸು ವಿಚಾರಕ್ಕೆ ಹೆಂಡತಿಯನ್ನೇ ಹತ್ಯೆ ಮಾಡಿದ್ದ ಎಂಬ ಆರೋಪ ಕೇಳಿಬಂದಿದೆ.
2006 ರಲ್ಲಿ ಪತ್ನಿ ಚಂದ್ರಿಕಾಳನ್ನು ಹತ್ಯೆಗೈದು ನಾಪತ್ತೆಯಾಗಿದ್ದಾಳೆ ಅಂತಾ ಪೊಲೀಸರಿಗೆ ಕಥೆ ಕಟ್ಟಿದ್ದ ಎನ್ನಲಾಗಿದೆ. ಪತ್ನಿ ನಾಪತ್ತೆಯಾಗಿದ್ದಾಳೆ ಎಂದು 2006ರ ನವೆಂಬರ್ 3ರಂದು ಮೈಸೂರಿನ (Mysuru) ಎನ್.ಆರ್. ಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಇದನ್ನೂ ಓದಿ: ಸ್ಯಾಂಟ್ರೋ ರವಿ ವಿರುದ್ಧ ತನಿಖೆಯಿಂದ ಕಾಂಗ್ರೆಸ್‌ಗೆ ನಡುಕ – ಕೈಪಡೆಗೆ ಬಿಜೆಪಿ ಗುದ್ದು
ನಾಲೆಯಲ್ಲಿ ಮೃತದೇಹ ಪತ್ತೆ
ನ.9ರಂದು ಪಾಂಡವಪುರದ ಎ.ಸಿ. ನಾಲೆಯಲ್ಲಿ ಮುಖ, ತಲೆಗೆ ಆ್ಯಸಿಡ್ ಹಾಕಿದ, ಅರ್ಧ ದೇಹವೇ ಸೀಳಲ್ಪಟ್ಟ ಹೆಣವೊಂದು ಪತ್ತೆಯಾಗಿತ್ತು. ಎರಡು ತೋಳುಗಳಲ್ಲಿ ಹರೀಶ್, ರವಿ ಅಂತಾ ಹಚ್ಚೆ ಗುರುತು ಇತ್ತು. ಇದನ್ನು ನೋಡಿದ ಪೊಲೀಸರು, ಸ್ಯಾಂಟ್ರೋ ರವಿಯನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ಆಗ ಮೃತದೇಹ ನನ್ನ ಹೆಂಡತಿಯದ್ದಲ್ಲ ಎಂದು ರವಿ ಹೇಳಿದ್ದ. ಬಳಿಕ ಚಂದ್ರಿಕಾ ತಾಯಿ ಮತ್ತು ತಂಗಿ, ಈ ದೇಹ ಚಂದ್ರಿಕಾಳದ್ದೇ ಎಂದು ಸ್ಪಷ್ಟಪಡಿಸಿದ್ದರು.
ಅಷ್ಟರಲ್ಲೇ ನಿರೀಕ್ಷಣಾ ಜಾಮೀನು ಪಡೆದುಕೊಂಡು ಪೊಲೀಸರ ಮುಂದೆ ಸ್ಯಾಂಟ್ರೋ ರವಿ ಹಾಜರಾಗಿದ್ದ. 2008ರಲ್ಲಿ ಸಿ ರಿಪೋರ್ಟ್ ಹಾಕಿ ಪಾಂಡವಪುರ ಪೊಲೀಸರು ಕೇಸ್ ಕ್ಲೋಸ್ ಮಾಡಿದ್ದರು. ಇದನ್ನೂ ಓದಿ: ಸ್ಯಾಂಟ್ರೋ ರವಿಯಂತಹ ತಲೆಹಿಡುಕರು ಬಿಜೆಪಿಯಲ್ಲಿ ಮಾತ್ರ ಇರಲು ಸಾಧ್ಯ: ದಿನೇಶ್ ಗುಂಡೂರಾವ್
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k