ಮುಂಬೈ: ಪಾಲಿಕೆ ಚುನಾವಣೆಯಲ್ಲಿ ಶಿವಸೇನೆ ಉದ್ಧವ್ ಠಾಕ್ರೆ (Uddhav Thackeray) ಬಣ ಏಕಾಂಗಿಯಾಗಿ ಸ್ಪರ್ಧಿಸುವ ಬಗ್ಗೆ ಸಂಜಯ್ ರಾವತ್ (Sanjay Raut) ಸುಳಿವು ನೀಡಿದ್ದಾರೆ.
ಬೃಹತ್ ಮುಂಬೈ ಮಹಾನಗರ ಪಾಲಿಕೆ (BMC) ಚುನಾವಣೆಯಲ್ಲಿ ತಮ್ಮ ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸಬಹುದು. ಕಾರ್ಯಕರ್ತರು ಏಕಾಂಗಿ ಹೋರಾಟ ಬಯಸಿದ್ದಾರೆ ಎಂದು ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವತ್ ಹಿಂಟ್ ಕೊಟ್ಟಿದ್ದಾರೆ. ಇದನ್ನೂ ಓದಿ: ಅಮಿತ್ ಶಾ ಹೇಳಿಕೆಗೆ ತಿರುಗೇಟು – ಅಂಬೇಡ್ಕರ್ ಹೆಸರಿನಲ್ಲಿ ಸ್ಕಾಲರ್‌ಶಿಪ್ ಯೋಜನೆ ಘೋಷಿಸಿದ ಕೇಜ್ರಿವಾಲ್
ಲೋಕಸಭೆ ಅಥವಾ ರಾಜ್ಯ ವಿಧಾನಸಭೆ ಚುನಾವಣೆಗಿಂತ ಹೆಚ್ಚಿನ ಆಕಾಂಕ್ಷಿಗಳು ಇದ್ದಾರೆ. ಆದ್ದರಿಂದ ಪಕ್ಷದ ಕಾರ್ಯಕರ್ತರು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಏಕಾಂಗಿಯಾಗಿ ಹೋಗಬೇಕೆಂದು ಬಯಸಿದ್ದಾರೆಂದು ತಿಳಿಸಿದ್ದಾರೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಕಳಪೆ ಪ್ರದರ್ಶನದ ನಂತರ, MVA ಮೈತ್ರಿಯು ಭಿನ್ನಾಭಿಪ್ರಾಯದ ನಿದರ್ಶನಗಳಿಗೆ ಸಾಕ್ಷಿಯಾಗಿದೆ. ಮೈತ್ರಿ ಪಾಲುದಾರರು ಸಮನ್ವಯದ ಕೊರತೆ ಮತ್ತು ಲೋಕಸಭೆ ಚುನಾವಣೆಯ ಆವೇಗವನ್ನು ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಪರಸ್ಪರ ಆರೋಪಿಸಿಕೊಂಡಿದ್ದಾರೆ. ಹಿನ್ನಡೆಯ ನಡುವೆಯೂ ಎಂವಿಎ ಪ್ರಬಲವಾಗಿದೆ ಎಂದು ಮೈತ್ರಿ ನಾಯಕರು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ದೆಹಲಿ ಚುನಾವಣೆಗೂ ಮುನ್ನವೇ ಕೇಜ್ರಿವಾಲ್‌ಗೆ ದೊಡ್ಡ ಸಂಕಷ್ಟ – ಇಡಿ ತನಿಖೆಗೆ ರಾಜ್ಯಪಾಲರು ಅಸ್ತು
ಮುಂಬೈ ಪಾಲಿಕೆ ಚುನಾವಣೆಯ ದಿನಾಂಕವನ್ನು ರಾಜ್ಯ ಚುನಾವಣಾ ಆಯೋಗವು ಇನ್ನೂ ಘೋಷಿಸಿಲ್ಲ. 2025 ರ ಆರಂಭದಲ್ಲಿ ಚುನಾವಣೆ ನಡೆಯಲಿದೆ ಎನ್ನಲಾಗಿದೆ.