ನನ್ನ ಲೈಫ್‌ನಲ್ಲಿ ಮಾಡಿದ ಕೆಲಸಕ್ಕೆ ಗೌರವ ಸಿಕ್ಕಿಲ್ಲ- ‘ಚಾರ್ಲಿ’ ನಟಿ ಕಣ್ಣೀರು

Public TV
2 Min Read
sangeetha sringeri

ಬಿಗ್ ಬಾಸ್ ಮನೆಗೆ ‘ಚಾರ್ಲಿ’ (Charlie) ಬ್ಯೂಟಿ ಸಂಗೀತಾ ಶೃಂಗೇರಿ (Sangeetha Sringeri) ಕಾಲಿಟ್ಟಿದ್ದಾರೆ. ವಾರಾಂತ್ಯದ ಕಾರ್ಯಕ್ರಮದಲ್ಲಿ ಕಿಚ್ಚನ (Sudeep) ಮುಂದೆ ನಟಿ ಗಳಗಳನೇ ಅತ್ತಿದ್ದಾರೆ. ನನ್ನ ಲೈಫ್‌ನಲ್ಲಿ ಮಾಡಿದ ಕೆಲಸಕ್ಕೆ ಗೌರವ ಸಿಕ್ಕಿಲ್ಲ ಎಂದು ನಟಿ ಭಾವುಕರಾಗಿದ್ದಾರೆ.

sangeetha

‘ಸಂಡೇ ವಿತ್ ಸುದೀಪ್’ (Sunday With Sudeep) ಕಾರ್ಯಕ್ರಮದಲ್ಲಿ ಮನೆ ಮಂದಿಗೆ ಕಿಚ್ಚ ಟಾಸ್ಕೊಂದನ್ನ ನೀಡಿದ್ದರು. ಮನೆಯ ಹೀರೋ, ವಿಲನ್, ಖಾಲಿ ಡಬ್ಬಾ ಯಾರು? ಎಂದು ಹೇಳುವ ಚಟುವಟಿಕೆಯೊಂದನ್ನ ಮಾಡಿಸಿದ್ದರು. ನಟಿ ಸಂಗೀತಾಗೆ 7 ಹಾರ್ಟ್ ಸಿಂಬಲ್ ಇರುವ ಬ್ಯಾಡ್ಜ್ ಸಿಕ್ಕಿತ್ತು. ಮನೆಯ ಹೀರೋ ಆಗಿ ಸಂಗೀತಾ ಹೈಲೆಟ್‌ ಆಗಿದ್ದರು. ಇತರೆ ಸ್ಪರ್ಧಿಗಳು ಕೂಡ ಬೆಂಬಲಿಸಿದ್ದರು.

sangeetha

ಇಷ್ಟೊಂದು ಹಾರ್ಟ್ ಕಂಡು ಸಂಗೀತಾ ನಿಜಕ್ಕೂ ಖುಷಿ ಪಟ್ಟರು. ಸುದೀಪ್ ಅಭಿಪ್ರಾಯ ಕೇಳಿದಾಗ, ನಾನು ಒಂದು ಸಿಗಲ್ಲ ಅಂದುಕೊಂಡಿದ್ದೆ. ನನ್ನ ಲೈಫ್‌ನಲ್ಲೂ ಅಷ್ಟೇ ಮಾಡಿದ ಕೆಲಸಕ್ಕೆ ಗೌರವ ಸಿಕ್ಕಿಲ್ಲ ಅಂತ. ಮೊನ್ನೆ ಕೂಡ ನಾನು ಮಾಡಿದ ಕೆಲಸವನ್ನು ಯಾರೂ ಗುರುತಿಸಲಿಲ್ಲ. ಅದು ಬೇಸರ ಆಗಿತ್ತು. ನಿಜಕ್ಕೂ ಅಳು ಬರುತ್ತಾ ಇದೆ. ಶ್ಯಾಮ್ ಸರ್‌ಗೆ ನಾನು ರಾಂಗ್ ವೋಟ್ ಹಾಕಿದ್ದರು ಕೂಡ ಅವರು ಅವರ ನಿರ್ಧಾರದ ಮೇಲೆ ನಿಂತಿದ್ದಾರೆ. ಥ್ಯಾಂಕ್ಯೂ ಸೋ ಮಚ್ ಎಂದಿದ್ದಾರೆ.

sudeep 3

ಸಂಗೀತಾ ಒಂದು ಸಿಗಲ್ಲ ಎಂದುಕೊಂಡಿದ್ದರು. ಹೀಗೆ ಇಷ್ಟೊಂದು ಹಾರ್ಟ್ ಸಿಕ್ಕಿದ್ದು ಆಶ್ಚರ್ಯ ಆಯ್ತು ಎಂದ ಸಂಗೀತಾಗೆ ಸುದೀಪ್ ಸಲಹೆ ನೀಡಿದ್ದಾರೆ. ಒಂದು ಸಿಕ್ಕಿಲ್ಲ ನಿಜ. ಹಾರ್ಟ್ ಬಿಟ್ರೆ ಬೇರೆ ಸಿಕ್ಕಿಲ್ಲ. ಇದು ಸಿಗುತ್ತೆ ಎಂದು ಗೊತ್ತಾಗಿ ಕೆಲಸ ಮಾಡಿದ್ದರೆ ಈ ಖುಷಿ ಇರುತ್ತಾ ಇತ್ತಾ? ಎಂದು ಸುದೀಪ್ ಪ್ರಶ್ನಿಸಿದ್ದಾರೆ. ಇದನ್ನೂ ಓದಿ:ಶೂಟಿಂಗ್ ವೇಳೆ ಹೃದಯಾಘಾತದಿಂದ ಕಲಾ ನಿರ್ದೇಶಕ ನಿಧನ

Sangeetha Sringeri 3ದೊಡ್ಮನೆಗೆ ಕಾಲಿಡುವಾಗ ನಟಿ, ಅಸಮರ್ಥರ ತಂಡದಲ್ಲಿ ಇದ್ದರು. ಟಾಯ್ಲೆಟ್‌ ಕ್ಲೀನ್ ಮಾಡೋದ್ರಿಂದ ಹಿಡಿದು ಎಲ್ಲಾ ಕೆಲಸವನ್ನು ಸಂಗೀತಾ ಮಾಡುತ್ತಿದ್ದರು. ಸಂಗೀತಾ ಜವಾಬ್ದಾರಿ, ನಡೆ- ನುಡಿ ಎಲ್ಲವೂ ಮನೆಮಂದಿಗೆ ಇಷ್ಟವಾಗಿದೆ.

ಕಾರ್ತಿಕ್ ಮಹೇಶ್ (Karthik Mahesh) ಜೊತೆಗಿನ ಸಂಗೀತಾ ಸ್ನೇಹ ಕೂಡ ದೊಡ್ಮನೆಯಲ್ಲಿ ಹೈಲೆಟ್ ಆಗಿದೆ. ಸ್ನೇಹಿತರಾಗಿರೋ ಸಂಗೀತಾ- ಕಾರ್ತಿಕ್ ಜೋಡಿ ಹಕ್ಕಿಗಳಾಗುತ್ತಾರಾ ಕಾದುನೋಡಬೇಕಿದೆ.

Share This Article