ಕಿಚ್ಚನ ವಿವಾಹ ವಾರ್ಷಿಕೋತ್ಸವಕ್ಕೆ ವಿಶೇಷ ಕವನ

Public TV
2 Min Read
sudeep 4

ಬೆಂಗಳೂರು: ಸ್ಯಾಂಡಲ್‍ವುಡ್ ನಟ ಸುದೀಪ್ ಮತ್ತು ಪ್ರಿಯಾ ದಾಂಪತ್ಯಕ್ಕೆ 20 ವರ್ಷ ತುಂಬಿದೆ. ಈ ಸಂಭ್ರಮವನ್ನು ಅವರು ಒಟ್ಟಾಗಿ ಆಚರಿಸಿದ್ದಾರೆ. ಆತ್ಮೀಯರು ಬರೆದ ಕವನವನ್ನು ಪ್ರಿಯಾ ಶೇರ್ ಮಾಡಿಕೊಂಡಿದ್ದಾರೆ. ಸುದೀಪ್ ಈ ಕವನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

ಸುದೀಪ್ ಮತ್ತು ಪ್ರಿಯಾ ಅವರ ವಿವಾಹ ವಾರ್ಷಿಕೋತ್ಸವಕ್ಕೆ ಆತ್ಮೀಯರು ಬರೆದ ಕವನವನ್ನು ಪ್ರಿಯಾ ಶೇರ್ ಮಾಡಿಕೊಂಡಿದ್ದಾರೆ. ಇಂಗ್ಲಿಷ್‍ನಲ್ಲಿರುವ ಈ ಕವನವನ್ನು ಅವರು ಟ್ವಿಟರ್‍ನಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಕಿಚ್ಚ ಸುದೀಪ್ ಮೆಚ್ಚುಗೆ ಸೂಚಿಸಿದ್ದಾರೆ. ಅಭಿಮಾನಿಗಳು, ಸ್ನೇಹಿತರು ಮತ್ತು ಸೆಲೆಬ್ರಿಟಿಗಳು ಈ ಜೋಡಿಗೆ ವೆಡ್ಡಿಂಗ್ ಆ್ಯನಿವರ್ಸರಿಯ ಶುಭಾಶಯ ಕೋರುತ್ತಿದ್ದಾರೆ. ಇದನ್ನೂ ಓದಿ: ಸುದೀಪ್ ದಂಪತಿಗೆ 20ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ – ಅಪ್ಪ, ಅಮ್ಮನಿಗೆ ಸಾನ್ವಿ ಹೇಳಿದ್ದೇನು?

ಈಗಾಗಲೇ 20 ವರ್ಷ ಆಯ್ತು. ಸಮಯ ತುಂಬ ಬೇಗ ಸಾಗುತ್ತಿದೆ. ಖುಷಿಯ 20 ವರ್ಷಗಳು. ಧನ್ಯವಾದಗಳು ಪ್ರಿಯಾ. ಈ ಪ್ರೀತಿಯ ಕವನಕ್ಕೂ ಧನ್ಯವಾದ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ. ಪತ್ನಿಯ ಜೊತೆಗಿರುವ ಫೋಟೋವನ್ನು ಅವರು ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ನಟಿ ಶ್ರೀಲೀಲಾ ನನ್ನ ಮಗಳಲ್ಲ – ವಿವಾದಾತ್ಮಕ ಹೇಳಿಕೆ ಕೊಟ್ಟ ಉದ್ಯಮಿ

2001ರ ಅಕ್ಟೋಬರ್‌ನಲ್ಲಿ ಸುದೀಪ್ ಮತ್ತು ಪ್ರಿಯಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅವರಿಗೆ 2004ರಲ್ಲಿ ಸಾನ್ವಿ ಜನಿಸಿದರು. ಅಪ್ಪ-ಅಮ್ಮನ ವಿವಾಹ ವಾರ್ಷಿಕೋತ್ಸವಕ್ಕೆ ಮಗಳು ಸಾನ್ವಿ ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಳ್ಳುವ ಮೂಲಕ ವಿಶ್ ಮಾಡಿದ್ದಾರೆ. ವೆಡ್ಡಿಂಗ್ ಆ್ಯನಿವರ್ಸರಿ ಸಂಭ್ರಮಕ್ಕೆ ಕೇಕ್ ಕತ್ತರಿಸಲಾಗಿದೆ. ಆಪ್ತರ ಜೊತೆ ಸೇರಿ ಸಂಭ್ರಮಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *