ಬೆಂಗಳೂರು: ಸ್ಯಾಂಡಲ್ವುಡ್ನ ಮೋಹಕ ತಾರೆ ರಮ್ಯಾ ಸಿನಿಮಾದಿಂದ ದೂರ ಉಳಿದಿದ್ದಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಸಖತ್ ಆ್ಯಕ್ಟಿವ್ ಆಗಿರುತ್ತಾರೆ. ದಸರಾ ಹಬ್ಬಕ್ಕೆ ಕ್ಯೂಟ್ ಆಗಿರುವ ಫೋಟೋವನ್ನು ಹಂಚಿಕೊಳ್ಳುವ ಮೂಲಕವಾಗಿ ಸುದ್ದಿಯಾಗಿದ್ದಾರೆ.
ದಸರಾ ಅಥವಾ ದೀಪಾವಳಿ ಹಬ್ಬಕ್ಕೆ ಈ ಫೋಟೋಶೂಟ್ ಮಾಡಿಸಿದ್ದೇವಾ ಎಂದು ನನಗೆ ಸರಿಯಾಗಿ ನೆನೆಪು ಆಗುತ್ತಿಲ್ಲ. 2016 ರಲ್ಲಿ ತೆಗೆದಿರುವ ಫೋಟೋ ಎನ್ನಿಸುತ್ತದೆ. ನನಗೆ ಯಾವಾಗ ಎಂದು ಸರಿಯಾಗಿ ಗೊತ್ತಾಗುತ್ತಿಲ್ಲ ಎಂದು ಬರೆದುಕೊಂಡು ಅವರು 2016ರಲ್ಲಿ ತೆಗೆಸಿರುವ ಮುದ್ದಾದ ಒಂದು ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಭರ್ಜರಿಯಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ತಾಯಿ ಆಗಲು ಸಮಂತಾ ಬಯಸಿದ್ರು-ನಿರ್ದೇಶಕರ ಪುತ್ರಿ ಬಿಚ್ಚಿಟ್ಟರು ವಿಚ್ಛೇದನದ ಗುಟ್ಟು
View this post on Instagram
ವಾಸುಕಿ ವೈಭವ್, ಅದ್ವಿತಿ ಶೆಟ್ಟಿ, ಚೈತ್ರಾ ರೈ ಸೇರಿದಂತೆ ಹಲವು ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು ಸೇರಿದಂತೆ ಅಭಿಮಾನಿಗಳು ಕ್ಯೂಟ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ರಮ್ಯಾ ಅವರು ಸಿನಿಮಾದಿಂದ ದೂರವಾಗಿ ಹಲವು ವರ್ಷ ಕಳೆದಿದೆ. ಆದರೆ ಇವರ ಅಭಿಮಾನಿಗಳ ಬಳಗ ಮಾತ್ರ ಸ್ವಲ್ಪವೂ ಕಡಿಮೆ ಆಗಿಲ್ಲ. ಪದ್ಮಾವತಿಯನ್ನು ತೆರೆ ಮೇಲೆ ನೋಡಲು ಸಿನಿಮಾ ಅಭಿಮಾನಿಗಳು ಕಾತುರರಾಗಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು.
ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಅವರು ನಟನೆಯಿಂದ ದೂರ ಉಳಿದುಕೊಂಡಿದ್ದಾರೆ. ಅವರನ್ನು ಮತ್ತೆ ತೆರೆಮೇಲೆ ನೋಡಬೇಕು ಎಂದು ಅಪಾರ ಸಂಖ್ಯೆಯ ಅಭಿಮಾನಿಗಳ ಬಳಗ ಕಾಯುತ್ತಿದೆ. ಆದರೂ ಕೂಡ ಅವರು ಯಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಆದರೆ ಕನ್ನಡ ಚಿತ್ರರಂಗಕ್ಕೆ ಸಂಬಂಧಿಸಿದ ಅನೇಕ ಘಟನೆಗಳಿಗೆ ಅವರು ಪ್ರತಿಕ್ರಿಯೆ ನೀಡುತ್ತಾ ಅಭಿಮಾನಿಗಳ ಜೊತೆಯಲ್ಲಿ ನಿರಂತರ ಸಂಪರ್ಕದಲ್ಲಿ ಇರುತ್ತಾರೆ.