ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ಒತ್ತುವರೆ ಮಾಡಿಕೊಂಡ ಜಾಗಗಳನ್ನು ತೆರವುಗೊಳಿಸುವ ಕಾರ್ಯವನ್ನು ಬಿಬಿಎಂಪಿ ಮಾಡುತ್ತಿದೆ. ಈಗಾಗಲೇ ಹಲವು ಕಟ್ಟಡಗಳನ್ನು, ಗೋಡೆಗಳನ್ನು ಮತ್ತು ಕಾಂಪೌಂಡ್ ಕೆಡುವುವ ಕೆಲಸದಲ್ಲಿ ಅಧಿಕಾರಿಗಳು ಬ್ಯುಸಿಯಾಗಿದ್ದಾರೆ. ಬಿಬಿಎಂಪಿ ಬಿಟ್ಟ ಬುಲ್ಡೋಜರ್ ಕೇವಲ ಸಾಮಾನ್ಯ ಜನರ ಮನೆಗಳನ್ನು ಮಾತ್ರ ಕೆಡುವುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಅದಕ್ಕೆ ನಟಿ ರಮ್ಯಾ ಕೂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಅವರಿಗೆ ಪ್ರಶ್ನೆ ಕೇಳಿದ್ದಾರೆ.
Advertisement
ಈಗಾಗಲೇ ಪ್ರತಿಷ್ಠಿತ ಕಂಪನಿಗಳು, ಶಾಲಾ, ಕಾಲೇಜುಗಳು ಮತ್ತು ಪ್ರತಿಷ್ಠಿತ ಬಿಲ್ಡರ್ಸ್ ಮನೆಗಳು ಹಾಗೂ ಶಾಸಕರು ಮತ್ತು ಮಂತ್ರಿಗಳ ಒಡೆತನದ ಬಿಲ್ಡಿಂಗ್ ಗಳು ಕೂಡ ರಾಜಕಾಲುವೆಯನ್ನು (Rajkaluve) ಒತ್ತುವರೆ ಮಾಡಿಕೊಂಡಿವೆ. ಹಾಗಾಗಿ ರಮ್ಯಾ (Ramya) ತಮ್ಮ ಟ್ವಿಟ್ ಮೂಲಕ ‘ಕಾನೂನು ರೂಪಿಸುವವರೇ ಕಾನೂನು ಮುರಿದಿದ್ದಾರೆ, ಬುಲ್ಡೋಜರ್ ಅಲ್ಲಿಗೂ ನುಗ್ಗುತ್ತದೆ ಎಂದು ನಾನು ಸಿಎಂ ಮೇಲೆ ಭರವಸೆ ಇಟ್ಟಿದ್ದೇನೆ. ಕಾನೂನು ಎಲ್ಲರಿಗೂ ಒಂದೇ’ ಎಂದು ನೆನಪಿಸಿದ್ದಾರೆ. ಇದನ್ನೂ ಓದಿ:‘ಹನಿಮೂನ್’ ಗೂ ಮುನ್ನ ಮನೆದೇವರ ಆಶೀರ್ವಾದ ಪಡೆದ ನಟಿ ಮಹಾಲಕ್ಷ್ಮಿ ಹಾಗೂ ರವೀಂದರ್
Advertisement
Advertisement
ಮೊನ್ನೆಯಷ್ಟೇ ಮಳೆಯಿಂದಾಗಿ ಬೆಂಗಳೂರಿನ (Bangalore) ಹಲವು ಬಡಾವಣೆಗಳು ಮುಳುಗಿದಾಗ, ಸರಕಾರ ಸರಿಯಾದ ರೀತಿಯಲ್ಲಿ ಸ್ಪಂದಿಸದೇ ಇರುವುದನ್ನೂ ರಮ್ಯಾ ಕಟುವಾಗಿ ಟೀಕಿಸಿದ್ದರು. ಇದೀಗ ಬುಲ್ಡೋಜರ್ ಕುರಿತಾಗಿಯೂ ಮುಖ್ಯಮಂತ್ರಿಗಳಿಗೆ ನೆನಪಿಸಿದ್ದಾರೆ. ಸಾಮಾನ್ಯರ ಮನೆಗಳನ್ನಷ್ಟೇ ಒಡೆಯಲಾಗುತ್ತಿದೆ. ಉಳ್ಳವರ ಮನೆಗೂ ಬುಲ್ಡೋಜರ್ (Bulldozer) ನುಗ್ಗಲಿ ಎಂದು ರಮ್ಯಾ ಸಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.