CinemaLatestMain PostSouth cinemaTV Shows

‘ಹನಿಮೂನ್’ ಗೂ ಮುನ್ನ ಮನೆದೇವರ ಆಶೀರ್ವಾದ ಪಡೆದ ನಟಿ ಮಹಾಲಕ್ಷ್ಮಿ ಹಾಗೂ ರವೀಂದರ್

ಟಿ ಮಹಾಲಕ್ಷ್ಮಿ (Mahalakshmi) ಅವರನ್ನು ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಮದುವೆಯಾದ ನಂತರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಪ್ರತಿಯೊಂದು ಸಂಗತಿಯನ್ನೂ ಅವರು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿದ್ದಾರೆ. ಪ್ರೈವೆಟ್ ಜಟ್ ನಲ್ಲಿ ಹನಿಮೂನಿಗೆ ಹೋಗುವ ಮುನ್ನ ಅವರು ಮನೆದೇವರ ಗುಡಿಗೆ ಹೋಗಿ ಆಶೀರ್ವಾದ ಪಡೆದಿದ್ದಾರೆ. ಆ ಫೋಟೋವನ್ನೂ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಮಿಸ್ ಮ್ಯಾಚ್ ಜೋಡಿ ಎಂದೇ ಟ್ರೋಲ್ ಆಗುತ್ತಿರುವ ನಟಿ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದರ್ (Ravinder Chandrasekaran) ಜೋಡಿಯ ಹನಿಮೂನ್ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮದುವೆಯಾಗಿ ಅಚ್ಚರಿ ಮೂಡಿಸಿದ್ದ ಈ ಜೋಡಿ, ಮದುವೆಯಾದ (Wedding)ಮೂರನೇ ದಿನಕ್ಕೆ ಹನಿಮೂನ್ ಟೂರ್ ಮಾಡಿದ್ದಾರೆ. ಹನಿಮೂನ್ ಸ್ಪಾಟ್‍ ನಿಂದಲೇ ಅವರು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಆ ಫೋಟೋ ಸಖತ್ ವೈರಲ್ ಕೂಡ ಆಗಿವೆ. ಇದನ್ನೂ ಓದಿ:ನಂದಿನಿ ಔಟ್ ಆದ್ಮೇಲೆ ಸಾನ್ಯ ಜೊತೆ ಜಶ್ವಂತ್ ಲವ್ವಿ-ಡವ್ವಿ: ರೂಪೇಶ್‌ಗೆ ಟೆನ್ಷನ್ ಶುರು

ಮಹಾಲಕ್ಷ್ಮಿ ಮತ್ತು ರವೀಂದರ್ ಜೋಡಿ ಮೇಲೆ ಸಾಕಷ್ಟು ಜೋಕ್ ಗಳು ಹರಿದಾಡುತ್ತಿದ್ದರೂ, ಗಾಸಿಪ್ ಗಳು ಸೃಷ್ಟಿ ಆಗುತ್ತಿದ್ದರೂ ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳದೇ ಹನಿಮೂನ್ (Honeymoon) ಎಂಜಾಯ್ ಮಾಡುತ್ತಿದೆ ಈ ಜೋಡಿ. ಸದ್ಯ ಈ ದಂಪತಿ ಮಹಾಬಲಿಪುರಂ ಇಂಟರ್ ಕಾಂಟಿನೆಂಟಲ್ ರೆಸಾರ್ಟ್ ನಲ್ಲಿ ತಂಗಿದ್ದು, ಅಲ್ಲಿಂದಲೇ ಅಭಿಮಾನಿಗಳು ಸಂದೇಶ ರವಾನಿಸಿದ್ದಾರೆ. ಮಹಾಲಕ್ಷ್ಮಿ ‘ಲೈಫ್ ಇಸ್ ಬ್ಯೂಟಿಫುಲ್’ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರೆ, ರವೀಂದರ್ ‘ಲೈಫ್‍ ಗೆ ಪ್ರೀತಿ ಬೇಕು, ಈ ಪ್ರೀತಿಗೆ ಮಹಾಲಕ್ಷ್ಮಿ ಇರಬೇಕು’ ಎಂದು ಕಾವ್ಯಾತ್ಮಕವಾಗಿ ಭಾವನೆ ಹೊರ ಹಾಕಿದ್ದಾರೆ.

ಮಹಾಲಕ್ಷ್ಮಿ ಮತ್ತು ರವೀಂದರ್ ಜೋಡಿ ಹನಿಮೂನ್ ಅನ್ನು ಎಂಜಾಯ್ ಮಾಡುತ್ತಿದ್ದರೆ ಈ ನಡುವೆ ಮತ್ತೊಂದು ಸ್ಪೂಟಕ ಸುದ್ದಿ ಹೊರ ಬಂದಿದ್ದು, ಮಹಾಲಕ್ಷ್ಮಿಗೆ ಈ ಮೊದಲೇ ಮದುವೆ ಆಗಿತ್ತು. ಎರಡು ಮಕ್ಕಳು ಕೂಡ ಇವೆ. ಮೊದಲ ಗಂಡನಿಂದ ಡಿವೋರ್ಸ್ ಪಡೆದ ನಂತರ ತಮ್ಮೊಂದಿಗೆ ನಟಿಸುತ್ತಿದ್ದ ಸಹ ನಟ ಈಶ್ವರ್ ಎನ್ನುವವರ ಜತೆ ಅಫೇರ್ ಇಟ್ಟುಕೊಂಡಿದ್ದರು ಎಂದು ಸ್ವತಃ ಈಶ್ವರ್ ಅವರ ಪತ್ನಿಯೇ ಆರೋಪ ಮಾಡಿದ್ದಾರೆ. ನನ್ನ ಗಂಡನ ಜೊತೆ ಮಹಾಲಕ್ಷ್ಮಿ ದಿನ ರಾತ್ರಿಯೂ ವಿಡಿಯೋ ಕಾಲ್ ಮಾಡಿ ಮಾತನಾಡುತ್ತಿದ್ದಳು. ಅದಕ್ಕೆ ಬೇಕಾದ ಸಾಕ್ಷಿ ನನ್ನ ಬಳಿ ಇದೆ ಎಂದು ಈಶ್ವರ್ ಪತ್ನಿ ಜಯಶ್ರೀ ಆರೋಪ ಮಾಡಿದ್ದರು.

ರವೀಂದರ್ ಚಂದ್ರಶೇಖರನ್ ಜೊತೆ ಮಹಾಲಕ್ಷ್ಮಿ ಮದುವೆ ಆಗುತ್ತಿದ್ದಂತೆಯೇ ಈ ವಿಷಯ ತಮಿಳು ಮಾಧ್ಯಮದಲ್ಲಿ ಮತ್ತೆ ಪ್ರಮುಖ ಸುದ್ದಿಯಾಗಿದೆ. ಮಹಾಲಕ್ಷ್ಮಿ ಮತ್ತು ಈಶ್ವರ್ ಲವ್ವಿ ಡವ್ವಿ ವಿಚಾರ ರವೀಂದರ್ ಅವರಿಗೂ ಗೊತ್ತಿತ್ತು ಎಂದು ವರದಿಯಾಗಿದೆ. ಎಲ್ಲ ಗೊತ್ತಿದ್ದರೂ ಮಹಾಲಕ್ಷ್ಮಿಯನ್ನು ರವೀಂದರ್ ಮದುವೆ ಆಗಿದ್ದಾರೆ ಎಂದು ವರದಿಗಳಲ್ಲಿ ಉಲ್ಲೇಖಿಸಲಾಗುತ್ತಿದೆ. ಮದುವೆ ಅವರ ಸ್ವಂತ ವಿಚಾರ. ಅಷ್ಟಕ್ಕೂ ಇಬ್ಬರೂ ಕಾನೂನು ಬದ್ಧವಾಗಿಯೇ ಮದುವೆಯಾಗಿದ್ದಾರೆ. ಆದರೂ, ಜಯಶ್ರೀ ಆರೋಪ ಇದೀಗ ಮುನ್ನೆಲೆಗೆ ಬಂದಿದೆ.

Live Tv

Leave a Reply

Your email address will not be published.

Back to top button