Bengaluru CityCinemaKarnatakaLatestMain PostSandalwood

ಬೀದಿ ನಾಯಿ ರಾನುಗೆ ʻಐ ಲವ್‌ ಯೂʼ ಹೇಳಿದ ರಮ್ಯಾ: ರಾನು ಜೊತೆಗಿನ ವರ್ಷದ ನೆನಪು

ಮೋಹಕತಾರೆ ರಮ್ಯಾ(Actress Ramya) ತೆರೆಯ ಮೇಲೆ ಕಾಣಿಸಿಕೊಳ್ಳುತ್ತಾರೆ ಎಂದು ಕಾತರದಿಂದ ಕಾಯುತ್ತಿದ್ದ ಪ್ಯಾನ್ಸ್‌ಗೆ ಶಾಕ್ ಕೊಟ್ಟಿದ್ದಾರೆ. ಇನ್ನೂ ಶ್ವಾನದ ಬಗ್ಗೆ ವಿಶೇಷ ಪ್ರೀತಿಯಿರುವ ರಮ್ಯಾ ಇದೀಗ ಬೀದಿ ನಾಯಿಯ ವೀಡಿಯೋವೊಂದನ್ನ ಶೇರ್ ಮಾಡಿ, ನೋಟ್ ಕೂಡ ಬರೆದಿದ್ದಾರೆ. ಈ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.

`ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ಮೂಲಕ ಕಂಬ್ಯಾಕ್ ಆಗುತ್ತಾರೆ ಎಂದು ಕಾಯ್ತಿದ್ದ ಫ್ಯಾನ್ಸ್ಗೆ ನಿರಾಸೆಯಾಗಿದೆ. ಕೊನೆಯ ಹಂತದಲ್ಲಿ ನಾಯಕಿಯ ಬದಲಾವಣೆಯಾಗಿದೆ. ಸದ್ಯ ನಿರ್ಮಾಣದ ಹೊಣೆ ಹೊತ್ತಿರುವ ನಟಿ ರಮ್ಯಾ, ಶ್ವಾನದ(Dog) ಬಗ್ಗೆ ವಿಶೇಷ ಪೋಸ್ಟ್‌ವೊಂದನ್ನ ಶೇರ್ ಮಾಡಿದ್ದಾರೆ.

 

View this post on Instagram

 

A post shared by Ramya|Divya Spandana (@divyaspandana)

ರಾಣಿ ನಮ್ಮ ಜೊತೆಗಿರುವುದು ಒಂದು ವರ್ಷವಾಗುತ್ತಾ ಬಂತು. ರಾಣಿ ಮೇಲೆ ಕಾರು ಹರಿದು ಹೋಗಿ ರಸ್ತೆಯಲ್ಲಿ ಬಿದ್ದಿತ್ತು. ಗೋವಾದಲ್ಲಿ ಶೆಲ್ಟರ್ ಹೌಸ್ ಒಂದರಲ್ಲಿ ಒಂದು ತಿಂಗಳ ಕಾಲ ಚಿಕಿತ್ಸೆ ನೀಡಿದ ನಂತರ ರಾಣಿ ಚೇತರಿಸಿಕೊಂಡಳು. ನಮ್ಮಲ್ಲಿ ವಯಸ್ಸಾದ ಎರಡು ನಾಯಿಗಳಿದ್ದವು. ಹಾಗಾಗಿ ರಾಣಿಯನ್ನು ಸಾಕಬಹುದು ಎನ್ನುವ ಬಗ್ಗೆ ನನಗೆ ಖಚಿತವಿರಲಿಲ್ಲ. ಆದರೆ ರಾಣಿ ನಮ್ಮನೆಗೆ ಬಂದಳು. ನಾನು ಜೀವನದಲ್ಲಿ ಏನನ್ನೂ ನಿರ್ಧರಿಸಬೇಕಾಗಿಲ್ಲ, ಜೀವನವೇ ಎಲ್ಲವನ್ನೂ ನಿರ್ಧರಿಸುತ್ತದೆ ಎಂದು ಪೋಸ್ಟ್‌ನಲ್ಲಿ ಬರೆದಿದ್ದಾರೆ. ಮೈ ರಾನು, ಮೈ ಬೇಬಿ ಗರ್ಲ್, ನನ್ನ ಹೃದಯ ತೆರೆದಿದ್ದಕ್ಕೆ ಧನ್ಯವಾದಗಳು. ಐ ಲವ್ ಯೂ ಲವ್ ಯೂ ಲವ್ ಯೂ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ಅಪ್ಪುಗೆ ಅರ್ಪಿಸಿದ ಪುನೀತ್ ಪತ್ನಿ ಅಶ್ವಿನಿ

 

View this post on Instagram

 

A post shared by Ramya|Divya Spandana (@divyaspandana)

ಪ್ರಾಣಿಗಳ ಮೇಲೆ ಅದರಲ್ಲೂ ಶ್ವಾನಗಳ ಮೇಲೆ ವಿಶೇಷ ಕಾಳಜಿಯಿರುವ ರಮ್ಯಾ ನಡೆ ನೋಡಿ ಫ್ಯಾನ್ಸ್ ಕೂಡ ಭೇಷ್ ಅಂತಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button