CinemaDistrictsKarnatakaLatestMain PostSandalwood

ರಕ್ಷಿತ್ ಶೆಟ್ಟಿ ಚಿತ್ರಕ್ಕಾಗಿ ಎದುರು ನೋಡುತ್ತಿದ್ದಾರಂತೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಈಗೀಗಂತೂ ಸಿನಿಮಾ ರಂಗದ ಅನೇಕ ಚಟುವಟಿಕೆಗಳಲ್ಲಿ ಸಕ್ರೀಯರಾಗುತ್ತಿದ್ದಾರೆ. ಅದರಲ್ಲೂ ಸಿನಿಮಾ ನಟ ನಟಿಯರ ಟ್ವಿಟ್ ಗಳಿಗೆ ನಿಯಮಿತವಾಗಿ ಉತ್ತರಿಸುತ್ತಿದ್ದಾರೆ. ಟ್ರೇಲರ್ ರಿಲೀಸ್, ಸಿನಿಮಾ ಕಾರ್ಯಕ್ರಮದಲ್ಲೂ ಪದ್ಮಾವತಿ ಕಾಣಿಸಿಕೊಳ್ಳುವುದರ ಮೂಲಕ ಕುತೂಹಲ ಮೂಡಿಸಿದ್ದಾರೆ. ಇದು ರಮ್ಯಾ ಸಿನಿಮಾ ರಂಗಕ್ಕೆ ವಾಪಸ್ಸಾಗುವ ಮುನ್ಸೂಚನೆ ಎಂದೇ ಬಿಂಬಿಸಲಾಗುತ್ತಿದೆ. ಇದನ್ನೂ ಓದಿ : ಬೆಸ್ಟ್ ಆಕ್ಟರ್ ಅವಾರ್ಡ್ ಪಡೆದಿದ್ದ ‘ನಾನು ಮತ್ತು ಗುಂಡ’ ಸಿನಿಮಾದ ‌ಶ್ವಾನ ನಿಧನ

ಇಂದು ಕೂಡ ರಮ್ಯಾ ಟ್ವಿಟರ್ ನಲ್ಲಿ ರಕ್ಷಿತ್ ಶೆಟ್ಟಿ ಅವರ ಸಿನಿಮಾಗೆ ಹಾರೈಸಿದ್ದಾರೆ. ಇದೇ ಮೇ 16 ರಂದು ರಕ್ಷಿತ್ ಶೆಟ್ಟಿ ನಟನೆಯ ಚಾರ್ಲಿ 777 ಸಿನಿಮಾದ ಟ್ರೇಲರ್ ರಿಲೀಸ್ ಆಗುತ್ತಿದ್ದು, ರಕ್ಷಿತ್ ಈ ಕುರಿತು ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಟ್ವಿಟ್ ಗೆ ಪ್ರತಿಕ್ರಿಯಿಸಿರುವ ರಮ್ಯಾ, ಈ ಸಿನಿಮಾಗಾಗಿ ನಾನು ಕಾಯುತ್ತಿದ್ದೇನೆ ರಕ್ಷಿತ್ ಎಂದು ತಮ್ಮ ಮನದಾಳದ ಸಂತೋಷವನ್ನು ಹೊರ ಹಾಕಿದ್ದಾರೆ. ಇದನ್ನೂ ಓದಿ: ಫಸ್ಟ್ ಟೈಮ್ ಮಗಳ ಫೋಟೋ ಶೇರ್ ಮಾಡಿದ ಪ್ರಿಯಾಂಕಾ ಚೋಪ್ರಾ

ರಕ್ಷಿತ್ ಮತ್ತು ರಮ್ಯಾ ಒಟ್ಟಿಗೆ ಸಿನಿಮಾ ಮಾಡಬೇಕು ಎನ್ನುವುದು ಅವರ ಅಭಿಮಾನಿಗಳ ಆಸೆಯಾಗಿದೆ. ಇಬ್ಬರೂ ಆತ್ಮೀಯರು ಆಗಿರುವುದರಿಂದ ಆದಷ್ಟು ಬೇಗ ಸಿನಿಮಾ ಮಾಡಿ ಎನ್ನುವುದು ಅಭಿಮಾನಿಗಳ ಬೇಡಿಕೆ. ಆದರೆ, ತಾವು ಸಿನಿಮಾ ರಂಗಕ್ಕೆ ವಾಪಸ್ಸಾಗುವ ಕುರಿತು ರಮ್ಯಾ ಖಚಿತವಾದ ಮಾಹಿತಿಯನ್ನು ಕೊಡುತ್ತಿಲ್ಲ. ಆದರೆ, ಇವತ್ತಲ್ಲ ನಾಳೆ ಬಂದೇ ಬರುತ್ತೇನೆ ಎನ್ನುವಂತಿದೆ ಅವರ ನಡೆ. ಇದನ್ನೂ ಓದಿ : ಜೂನ್ 9ಕ್ಕೆ ನಯನತಾರಾ ಮದುವೆ ಫಿಕ್ಸ್ – ತಿರುಪತಿಯಲ್ಲಿ ವಿವಾಹ

ಪುನೀತ್ ರಾಜ್ ಕುಮಾರ್ ಅವರ ಸಿನಿಮಾದ ಮೂಲಕ ರಮ್ಯಾ ಕಮ್ ಬ್ಯಾಕ್ ಆಗಬೇಕಿತ್ತು. ಅದನ್ನು ಸ್ವತಃ ರಮ್ಯಾ ಅವರೇ ಹೇಳಿಕೊಂಡಿದ್ದರು. ಪುನೀತ್ ಜತೆ ಒಂದು ಹಂತದಲ್ಲಿ ಮಾತುಕತೆ ಕೂಡ ಆಗಿತ್ತು ಎನ್ನುವುದನ್ನೂ ರಮ್ಯಾ ಬಹಿರಂಗ ಪಡಿಸಿದರು. ಆದರೆ, ಅಪ್ಪು ಇನ್ನಿಲ್ಲವಾದರು. ಈ ನಂತರವೂ ರಮ್ಯಾ ಸಿನಿಮಾಗಳ ಕಾರ್ಯಕ್ರಮದಲ್ಲಿ ಭಾಗಿ ಆಗುವುದು, ಸಿನಿಮಾ ತಂಡಗಳಿಗೆ ಸಹಾಯಕ್ಕೆ ನಿಲ್ಲುವುದು ಮಾಡುತ್ತಿದ್ದಾರೆ. ಹೀಗಾಗಿ ರಮ್ಯಾ ಸಿನಿಮಾ ರಂಗಕ್ಕೆ ವಾಪಸ್ಸಾಗುತ್ತಾರೆ ಎನ್ನುತ್ತಿದೆ ಚಿತ್ರರಂಗ.

Leave a Reply

Your email address will not be published.

Back to top button