ಬೆಂಗಳೂರು: ಸಾಂಡಲ್‍ವುಡ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಗಳಿಗೆ ಶುಕ್ರವಾರ ತಡರಾತ್ರಿ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.
ಧ್ರುವ ಸರ್ಜಾ ನಿನ್ನೆ ತಡರಾತ್ರಿ ತಮ್ಮ 30ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಬೆಂಗಳೂರಿನ ಬನಶಂಕರಿಯ ಎರಡನೇ ಹಂತದಲ್ಲಿರುವ ತಮ್ಮ ನಿವಾಸದಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಬರ್ತ್ ಡೇ ಸೆಲೆಬ್ರೇಷನ್ ಮಾಡಿಕೊಂಡಿದ್ದಾರೆ. ಈ ವೇಳೆ ಅಭಿಮಾನಿಗಳು ಮುಗಿಬಿದ್ದ ಕಾರಣ ಸ್ಥಳದಲ್ಲಿ ನೂಕುನುಗ್ಗಲು ಉಂಟಾಗಿ ಬಂದಿದ್ದ ಅಭಿಮಾನಿಗಳಿಗೆ ಗಾಯಗಳಾದವು.
Advertisement
Advertisement
ಧ್ರುವ ತಮ್ಮ ಮುಂದಿನ ‘ಪೊಗರು’ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು, ಧ್ರುವ ಈ ಹಿಂದೆ ಇದ್ದ ಲುಕ್‍ಗಿಂತ ಈ ಲುಕ್ ನಲ್ಲಿ ಅಭಿಮಾನಿಗಳ ಮನಸ್ಸು ಸೆಳೆದಿದ್ದಾರೆ. ಧ್ರುವ ನಟಿಸಿದ ಮೂರು ಚಿತ್ರದಲ್ಲಿ ಒಂದೇ ರೀತಿ ಲುಕ್‍ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಪೊಗರು ಚಿತ್ರದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.
Advertisement
Advertisement
ಪೊಗರು ಚಿತ್ರದ ಪೋಸ್ಟರ್ ನಲ್ಲಿ ಧ್ರುವ ಉದ್ದನೆಯ ಕೂದಲು ಹಾಗೂ ಗಡ್ಡ ಬೆಳೆಸಿಕೊಂಡಿದ್ದಾರೆ. ಸದ್ಯ ಧ್ರುವ ತಮ್ಮ ನಾಲ್ಕನೇ ಚಿತ್ರದಲ್ಲಿ ಯಾವ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ನೋಡಲು ಅಭಿಮಾನಿಗಳಿಗೆ ಕುತೂಹಲ ಮೂಡಿದೆ.
ಈ ಚಿತ್ರದಲ್ಲಿ ಧ್ರುವ ಸರ್ಜಾ ಬೇರೆ ಬೇರೆ ರೀತಿಯ ಎರಡು ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಾಗಾಗಿ ಈ ಚಿತ್ರ ತಡವಾಗುತ್ತಿದೆ. ಸದ್ಯ ಚಿತ್ರದ ಎರಡನೇ ಹಂತದ ಶೂಟಿಂಗ್ ಅಕ್ಟೋಬರ್ 10ರಿಂದ ನಡೆಯಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಸದ್ಯ ಪೊಗರು ಚಿತ್ರವನ್ನು ನಿರ್ದೇಶಕ ನಂದ ಕಿಶೋರ್ ನಿರ್ದೇಶನ ಮಾಡುತ್ತಿದ್ದು, ಬಿ.ಕೆ ಗಂಗಾಧರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸದ್ಯ ಈ ಚಿತ್ರಕ್ಕೆ ನಾಯಕಿ ಆಯ್ಕೆ ಆಗಿಲ್ಲ.
Forever indebted to this family… @DhruvaSarja @akarjunofficial @meghanasraj @aishwaryaarjun @anj_arjun pic.twitter.com/p61F0CMJeU
— Chirranjeevi Sarja (@chirusarja) October 5, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv