ಬೆಂಗಳೂರು ರಸ್ತೆಗಳು ಬೆಂಗಳೂರಿನ ಮರ್ಯಾದೆಯನ್ನೇ ರಾಷ್ಟ್ರ ಮಟ್ಟದಲ್ಲಿ ಹರಾಜು ಹಾಕುತ್ತಿವೆ ಎನ್ನುವ ಸುದ್ದಿಯನ್ನು ನಿನ್ನೆಯಿಂದ ಪಬ್ಲಿಕ್ ಟಿವಿ ಬಿತ್ತರಿಸುತ್ತಿದೆ. ಅದರಲ್ಲೂ ಬೆಂಗಳೂರು ಮೈಸೂರು ರಸ್ತೆಯ ಒಂದೇ ಜಾಗದಲ್ಲಿ ಸುಮಾರು 30ಕ್ಕೂ ಅಧಿಕ ಗುಂಡಿಗಳು ಬಿದ್ದಿರುವ ಕುರಿತು ಸತತವಾಗಿ ಪಬ್ಲಿಕ್ ಟಿವಿ ವರದಿ ಮಾಡುತ್ತಿದೆ. ಇದನ್ನೂ ಓದಿ : ನಯನತಾರಾ ಮದುವೆಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಜರ್?
ರಸ್ತೆಯ ಗುಂಡಿಗಳನ್ನು ಮುಚ್ಚಿ, ಸುಗಮ ಸಂಚಾರಕ್ಕೆ ದಾರಿ ಮಾಡಿಕೊಡಿ ಎನ್ನುವ ಪಬ್ಲಿಕ್ ಟಿವಿಯ ಕಳಕಳಿಗೆ ಸ್ಯಾಂಡಲ್ ವುಡ್ ನಟರಾದ ಡಾ.ವಿಷ್ಣುವರ್ಧನ್ ಅಳಿಯ, ನಟ ಅನಿರುದ್ಧ, ನಟಿಯರಾದ ಸಂಯುಕ್ತ ಹೊರನಾಡು, ಮಯೂರಿ ಸೇರಿದಂತೆ ಹಲವರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಈ ಸರಕಾರ ಕೂಡಲೇ ರಸ್ತೆಗಳನ್ನು ಸರಿ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಸನ್ನಿ ಲಿಯೋನ್ ಫುಲ್ ಗರಂ: ಓರ್ವ ವ್ಯಕ್ತಿಗೆ ಸನ್ನಿ ಕೊಟ್ರು ಚಪ್ಪಲಿ ಏಟು
ಒಂದೇ ಜಾಗದಲ್ಲಿ 30 ಗುಂಡಿಗಳನ್ನು ಕಂಡ ಖ್ಯಾತ ಚಿತ್ರಸಾಹಿತಿ, ನಿರ್ದೇಶಕ ಕವಿರಾಜ್ ಕೂಡ ತಮ್ಮ ಫೇಸ್ ಬುಕ್ ವಾಲ್ ನಲ್ಲಿ ಈ ಕುರಿತು ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ತಗೊಳ್ಳೊ ಪ್ರತೀ ವಾಹನದ ಮೇಲೆ ಡಿಸೈನ್ ಡಿಸೈನ್ ಟ್ಯಾಕ್ಸ್ . ಪೆಟ್ರೋಲ್ ಡಿಸೇಲ್ ಮೇಲಂತು ಮೂಲಬೆಲೆಗೂ ಮೂರುಪಟ್ಟು ಟ್ಯಾಕ್ಸ್, ಹೆಲ್ಮೆಟ್ ಹಾಕದಿದ್ರೆ ಇಷ್ಟು , ಇನ್ಶೂರೆನ್ ಇಲ್ಲಾಂದ್ರೆ ಅಷ್ಟು , ಬೆಲ್ಟ್ ಹಾಕದಿದ್ರೆ ಇಷ್ಟು ಇತ್ಯಾದಿ ಇತ್ಯಾದಿ ಫೈನ್ ಗಳನ್ನು ರಸ್ತೇಲಿ ಅಡ್ಡಗಟ್ಟಿ ವಸೂಲಿ ಮಾಡಲಾಗುತ್ತೆ. ಇಷ್ಟೆಲ್ಲಾ ಕಿತ್ತು ತಿಂದ ಮೇಲೆ ನಮಗೆ ಕನಿಷ್ಠ ಮೂಲಭೂತ ಸೌಲಭ್ಯ ಕೊಡದ ಆಳುವವರ ಮೇಲೆ ನಾವು ಯಾವ ದಂಡ ವಿಧಿಸಬೇಕು ? ಎಷ್ಟು ದಂಡ ವಿಧಿಸಬೇಕು ಹಾಗಾದರೆ ? ರಸ್ತೆ ಗುಂಡಿಗೆ ಬಿದ್ದು ಮೂಳೆ ಮುರಿದು ಕೊಳ್ಳುವವರೆಷ್ಟೋ? ಪ್ರಾಣ ತೆತ್ತವರೆಷ್ಟೋ? ಅದರ ಹೊಣೆಯೆಲ್ಲಾ ಹೊರುವವರು ಯಾರು? ಎಂದು ಕೇಳಿದ್ದಾರೆ.
ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ಈಗಾಗಲೇ ವ್ಯಾಪಾಕವಾಗಿ ಟೀಕೆ ವ್ಯಕ್ತವಾಗುತ್ತಿದ್ದು, ಸರಕಾರಕ್ಕೆ ಜನರು ಛೀಮಾರಿ ಹಾಕುತ್ತಿದ್ದಾರೆ. ಈ ಕುರಿತು ಕೂಡಲೇ ಕ್ರಮ ತಗೆದುಕೊಳ್ಳುವಂತೆ ಆಗ್ರಹಿಸುತ್ತಿದ್ದಾರೆ. ಅಲ್ಲದೇ, ಸೋಷಿಯಲ್ ಮೀಡಿಯಾದಲ್ಲಿ ಬೆಂಗಳೂರು ಗುಂಡಿಗೆ ಬಿದ್ದ ರಸ್ತೆಗಳನ್ನು ಟ್ರೋಲ್ ಮಾಡಲಾಗುತ್ತಿದೆ.