ಇಂದು ಚೆನ್ನೈನಲ್ಲಿ ಮದುವೆ ಆಗುತ್ತಿರುವ ಖ್ಯಾತ ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಮದುವೆಗೆ ಅನೇಕ ತಾರೆಯರನ್ನು ಆಹ್ವಾನಿಸಲಾಗಿದೆ. ಈ ಸ್ಟಾರ್ ಜೋಡಿಯು ಹೊಸ ಜೀವನಕ್ಕೆ ಕಾಲಿಡುತ್ತಿರುವ ಸಂದರ್ಭಕ್ಕೆ ಸಾಕ್ಷಿಯಾಗಿ ಸಲ್ಮಾನ್ ಖಾನ್ ಇರಲಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ಸಲ್ಮಾನ್ ಖಾನ್ ಗೆ ಈ ಜೋಡಿಯು ಆಹ್ವಾನ ನೀಡಿದ್ದರಿಂದ, ಅವರು ಹಾಜರಾಗಬಹುದು ಎನ್ನವ ಸುದ್ದಿ ಇದೆ.
Advertisement
ತಮಿಳು ನಾಡಿನ ಮುಖ್ಯಮಂತ್ರಿ ಸ್ಟಾಲಿನ್, ತಮಿಳಿನ ಸೂಪರ್ ಸ್ಟಾರ್ ಗಳಾದ ರಜನಿಕಾಂತ್ ಮತ್ತು ಕಮಲ್ ಹಾಸನ್, ಕನ್ನಡದಿಂದ ಉಪೇಂದ್ರ, ತೆಲುಗಿನಿಂದ ಚಿರಂಜೀವಿ ಸೇರಿದಂತೆ ಅನೇಕ ಸ್ಟಾರ್ ಸಿಲಿಬ್ರಿಟಿಗಳು ಈ ಮದುವೆಯ ಸಮಾರಂಭದಲ್ಲಿ ಹಾಜರಿರಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನಷ್ಟೇ ಯಾರೆಲ್ಲ ಭಾಗಿ ಆಗಿದ್ದಾರೆ ಎಂದು ತಿಳಿಯಲಿದೆ. ಇದನ್ನೂ ಓದಿ: ಸನ್ನಿ ಲಿಯೋನ್ ಫುಲ್ ಗರಂ: ಓರ್ವ ವ್ಯಕ್ತಿಗೆ ಸನ್ನಿ ಕೊಟ್ರು ಚಪ್ಪಲಿ ಏಟು
Advertisement
Advertisement
ಕೆಲವೇ ನಿಮಿಷಗಳಲ್ಲಿ ತಮಿಳಿನ ಖ್ಯಾತ ಜೋಡಿ ವಿಘ್ನೇಶ್ ಶಿವನ್ ಮತ್ತು ಲೇಡಿ ಸೂಪರ್ ಸ್ಟಾರ್ ನಯನತಾರಾ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ಪ್ರಣಯ ಪಕ್ಷಿಗಳ ಮದುವೆಗೆ ಮದುವಣಗಿತ್ತಿಯಂತೆಯೇ ರೆಸಾರ್ಟ್ ಕೂಡ ಸಿಂಗಾರಗೊಂಡಿದೆ. ಅಂದಹಾಗೆ ಇಂದು ಈ ಜೋಡಿಯು ಚೆನ್ನೈನ ಮಹಾಬಲಿಪುರಂನಲ್ಲಿ ಮದುವೆಯಾಗುತ್ತಿದ್ದಾರೆ.