ಟಾಲಿವುಡ್ ಪ್ರಿನ್ಸ್ ಜೊತೆ ಕಿರಿಕ್ ಬೆಡಗಿ ರೊಮ್ಯಾನ್ಸ್!

Public TV
1 Min Read
Rashmika Mandanna 2

ಬೆಂಗಳೂರು: ಸ್ಯಾಂಡಲ್‍ವುಡ್‍ನ ಕಿರಿಕ್ ಬೆಡಗಿ ರಶಿಕಾ ಮಂದಣ್ಣ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಜೊತೆಗೆ ನಟಿಸಲು ಅವಕಾಶವನ್ನು ಪಡೆದುಕೊಂಡಿದ್ದಾರೆ.

ಹೌದು, ರಶ್ಮಿಕಾ ಗೀತಗೋವಿಂದಂ ಸಿನಿಮಾದ ಮೂಲಕ ಟಾಲಿವುಡ್‍ನಲ್ಲಿ ಸಖತ್ ಸದ್ದು ಮಾಡಿದ್ದರು. ಆ ಸಿನಿಮಾದ ಸಕ್ಸಸ್‍ನಿಂದ ಬಹಳ ಆಫರ್‌ಗಳು ರಶ್ಮಿಕಾರನ್ನು ಹುಡುಕಿ ಬಂದಿದ್ದುಂಟು. ಇದೀಗ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅವರೊಂದಿಗೆ ರಶ್ಮಿಕಾ ಅವರು ಅಭಿನಯಿಸಲು ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ.

BJP LOGO

ಮಹೇಶ್ ಬಾಬು ಮತ್ತು ರಶ್ಮಿಕಾ ಜೋಡಿಗೆ ಸುಕುಮಾರ್ ಅವರು ಆಕ್ಷನ್ ಕಟ್ ಹೇಳಲಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ಯೋಜನೆಯಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಶೀಘ್ರದಲ್ಲೇ ಸಿನಿಮಾದ ಅಧಿಕೃತ ಘೋಷಣೆ ಆಗಲಿದ್ದು, ಮುಂದಿನ ವರ್ಷ ಚಿತ್ರ ಸೆಟ್ಟೇರಲಿದೆ. ಸುಕುಮಾರ್ ಸದ್ಯ ಸಿನಿಮಾದ ಸ್ಕ್ರಿಪ್ಟ್ ಬರೆಯುತ್ತಿದ್ದಾರೆ.

rashmika mandanna devdas

ಸದ್ಯಕ್ಕೆ ಮಹೇಶ್ ಬಾಬು ‘ಮಹರ್ಶಿ’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯೂಸಿಯಾಗಿದ್ದು, ಈ ಫಿಲ್ಮ್ ಮುಗಿಯುತ್ತಿದ್ದಂತೆ ಸುಕುಮಾರ್ ಅವರು ಜೊತೆಗಿನ ಚಿತ್ರದಲ್ಲಿ ಬ್ಯೂಸಿಯಾಗಲಿದ್ದಾರೆ. ಇನ್ನೂ ಕರ್ನಾಟಕ ಕ್ರಶ್ ಎಂದೇ ಕರೆಸಿಕೊಂಡಿರುವ ರಶ್ಮಿಕಾ ಸದ್ಯಕ್ಕೆ ಟಾಲಿವುಡ್ ಹಾಗೂ ಸ್ಯಾಂಡಲ್ ವುಡ್‍ನಲ್ಲಿ ಮಿಂಚುತ್ತಿದ್ದಾರೆ.

ಮಹೇಶ್ ಹಾಗೂ ಸುಕುಮಾರ್ ಅವರ ಸಹಯೋಗದಲ್ಲಿ ‘1-ನೆನೊಕಾಡಿನ್’ ಸಿನಿಮಾ ಮೂಡಿಬಂದಿತ್ತು. ಅದು ಬಾಕ್ಸ್ ಆಫೀಸ್‍ನಲ್ಲಿ ಸಖತ್ ಸದ್ದು ಮಾಡಿತ್ತು. ಇದೀಗ ಮತ್ತೊಮ್ಮೆ ಈ ಜೋಡಿ ಟಾಲಿವುಡ್ ಬಾಕ್ಸ್ ಆಫೀಸ್‍ನಲ್ಲಿ ಧೂಳೆಬ್ಬಿಸಲು ರೆಡಿಯಾಗುತ್ತಿದ್ದಾರೆ.

happy birthday mahesh babu 0001

 

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *