ಚಾಮರಾಜನಗರ: ಹಲವು ಕಲಾವಿದರು ಐತಿಹಾಸಿಕ, ಪೌರಾಣಿಕ, ಸಾಮಾಜಿಕ ಚಿತ್ರಗಳಲ್ಲಿ ನಟಿಸಿ ಕನ್ನಡ ನಾಡು, ನುಡಿ, ಭಾಷೆ, ಸಂಸ್ಕೃತಿಯ ಪ್ರತೀಕವಾಗಿ ಅಭಿನಯಿಸಿದ್ದಾರೆ. ಆದರೆ, ಕನ್ನಡ ಚಿತ್ರರಂಗದ ಇತಿಹಾಸವನ್ನೇ ಅರಿಯದೆ ನಿನ್ನೆ, ಮೊನ್ನೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಸ್ಯಾಂಡಲ್‍ವುಡ್ ನಟಿ ರಚಿತಾ ರಾಮ್ ಅಸಭ್ಯವಾಗಿ ಮಾತನಾಡಿ ಚಿತ್ರರಂಗದ ಇತಿಹಾಸಕ್ಕೆ ಧಕ್ಕೆ ಉಂಟು ಮಾಡಿದ್ದಾರೆ. ಈ ಬಗ್ಗೆ ಕ್ಷಮೆಯಾಚಿಸಬೇಕೆಂದು ಕನ್ನಡ ಕ್ರಾಂತಿದಳ ಆಗ್ರಹಿಸಿದೆ.
Advertisement
ಸ್ಯಾಂಡಲ್‍ವುಡ್ ನಟಿ ರಚಿತಾ ರಾಮ್ ಅವರು ಫಸ್ಟ್ ನೈಟ್ ಹೇಳಿಕೆಗೆ ಬಹಿರಂಗ ಕ್ಷಮೆ ಕೇಳಬೇಕು ಎಂದು ಕನ್ನಡ ಕ್ರಾಂತಿದಳ ಆಗ್ರಹಿಸಿದೆ. ರಚಿತಾ ರಾಮ್ ಅವರು ಇತ್ತೀಚಿಗೆ ನಡೆದ ಲವ್ ಯೂ ರಚ್ಚು ಚಿತ್ರದ ಸುದ್ದಿಗೋಷ್ಠಿಯಲ್ಲಿ ಸಿಬಿಮಾದ ಹಾಡೊಂದರಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದ ಬಗ್ಗೆ ಪ್ರಶ್ನೆ ಕೇಳಿದಾಗ ರಚಿತಾ ರಾಮ್, ಫಸ್ಟ್ ನೈಟ್ ಬಗ್ಗೆ ಪ್ರಶ್ನೆ ಎತ್ತಿದರು. ಆಮೇಲೆ ಉತ್ತರವನ್ನೂ ಅವರೇ ನೀಡಿದರು ಫಸ್ಟ್ ನೈಟ್ ನಲ್ಲಿ ರೊಮ್ಯಾನ್ಸ್ ಮಾಡ್ತಾರೆ, ಫಸ್ಟ್ ನೈಟ್ ಕಾನ್ಸೆಪ್ಟ್ ನಲ್ಲಿರುವ ಈ ಹಾಡಿನಲ್ಲೂ ನಾನು ಲೈಟಾಗಿ ರೊಮ್ಯಾನ್ಸ್ ಮಾಡೋ ದೃಶ್ಯದಲ್ಲಿ ಕಾಣಿಸಿಕೊಂಡಿದ್ದೆ ಎಂದಿದ್ದರು. ಇದನ್ನೂ ಓದಿ: ಶಾಂಪೇನ್ ಅಲ್ಲ ಅದು ನಾನ್ ಅಲ್ಕೋಹಾಲಿಕ್ ಬಾಟಲ್: ರಕ್ಷಿತಾ
Advertisement
Advertisement
ಕನ್ನಡ ನಾಡಿನ ಸಂಸ್ಕೃತಿಗೆ ಧಕ್ಕೆಯಾಗುವ ರೀತಿ ನೀಡಿರುವ ಹೇಳಿಕೆಗೆ ಕನ್ನಡ ಕ್ರಾಂತಿದಳ ಮತ್ತು ರಾಜ್ಯಾದ್ಯಂತ ಇರುವ ಸಂಘಟನೆಗಳು ತೀವ್ರವಾಗಿ ಖಂಡಿಸುತ್ತವೆ ಎಂದು ಕನ್ನಡ ಕ್ರಾಂತಿದಳ ಗುಡುಗಿದೆ. ಕನ್ನಡ ಚಿತ್ರರಂಗಕ್ಕೆ ತನ್ನದೇ ಆದ ಪರಂಪರೆಯಿದೆ. ಡಾ.ರಾಜ್‍ಕುಮಾರ್ ಹಾಕಿಕೊಟ್ಟಿರುವ ಭವ್ಯ ಬುನಾದಿಯನ್ನು ಈವರೆಗೂ ಮುಂದುವರೆಸಿಕೊಂಡು ಬರಲಾಗಿದೆ. ಕನ್ನಡ ಚಿತ್ರರಂಗದಲ್ಲಿ ಹಿರಿಯರಾದ ಕಲ್ಪನಾ, ಜಯಂತಿ, ಭಾರತಿ, ಆರತಿ, ಲೀಲಾವತಿ, ಮಾಲಾಶ್ರೀ, ಶೃತಿ, ತಾರಾ ಸೇರಿದಂತೆ ಇನ್ನು ಅನೇಕ ನಟಿಯರು ಗೌರಯುತವಾಗಿ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ. ಐತಿಹಾಸಿಕ, ಪೌರಾಣಿಕ, ಸಾಮಾಜಿಕ ಚಿತ್ರಗಳಲ್ಲಿ ನಟಿಸಿ ಕನ್ನಡ ನಾಡು, ನುಡಿ, ಭಾಷೆ, ಸಂಸ್ಕೃತಿಯ ಪ್ರತೀಕವಾಗಿ ಅಭಿನಯಿಸಿದ್ದಾರೆ. ಆದರೆ, ಕನ್ನಡ ಚಿತ್ರರಂಗದ ಇತಿಹಾಸವನ್ನೇ ಅರಿಯದೆ ನಿನ್ನೆ, ಮೊನ್ನೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ರಚಿತಾ ರಾಮ್ ಅಸಭ್ಯವಾಗಿ ಮಾತನಾಡಿ ಚಿತ್ರರಂಗದ ಇತಿಹಾಸಕ್ಕೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಏಕ್ ಲವ್ ಯಾ ಸಿನಿಮಾ ತಂಡದಿಂದ ಅಪ್ಪುಗೆ ಅವಮಾನ- ಶಾಂಪೇನ್ ಚಿಮ್ಮಿಸಿ ಸಂಭ್ರಮ
Advertisement