ಬೆಂಗಳೂರು: ಕೇವಲ 2 ತಿಂಗಳಲ್ಲಿ ಸ್ಯಾಂಡಲ್ವುಡ್ ನಟ ಚಂದನ್ ಕುಮಾರ್ ದೇಹದ ಟ್ರಾನ್ಸ್ಫಾರ್ಮೇಷನ್ ನೋಡಿ ಫ್ಯಾನ್ಸ್ ಅಚ್ಚರಿಗೊಂಡಿದ್ದಾರೆ.
ಕೊರೊನಾ ಲಾಕ್ಡೌನ್ ಸಮಯದಲ್ಲಿ ಅನೇಕರು ಮನೆಯಲ್ಲೇ ಇರಬೇಕಾದ ಪರಿಸ್ಥಿತಿ ಎದುರಾಗಿದ್ದರಿಂದ ಫಿಟ್ನೆಸ್ ಕಳೆದುಕೊಂಡಿದ್ದಾರೆ. ಇದರಲ್ಲಿ ಚಂದನ್ ಕುಮಾರ್ ಕೂಡ ಒಬ್ಬರು. ಆದರೆ ಕೇವಲ ಎರಡೇ ತಿಂಗಳಲ್ಲಿ ಅವರ ದೇಹದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ.
View this post on Instagram
ಜೂನ್ 21ರ ಫೋಟೋದಲ್ಲಿ ಚಂದನ್ಗೆ ಹೊಟ್ಟೆ ಬಂದಿತ್ತು. ಆದರೆ ಆಗಸ್ಟ್ 26ರ ಫೋಟೋದಲ್ಲಿ ಅವರು ಸಖತ್ ಫಿಟ್ ಆಗಿದ್ದಾರೆ. ಈ ಫೋಟೋ ನೋಡಿದ ಫ್ಯಾನ್ಸ್ ಅಚ್ಚರಿ ಹೊರ ಹಾಕಿದ್ದಾರೆ. ಇನ್ನೂ ಕೆಲವರು ನೀವೇ ನಮಗೆ ಸ್ಫೂರ್ತಿ ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಫೋಟೋ ಸಾಕಷ್ಟು ವೈರಲ್ ಆಗುತ್ತಿದೆ. ಇದನ್ನೂ ಓದಿ: ಮಹಿಳೆಯರ ವಿರುದ್ಧದ ಅಪರಾಧಗಳತ್ತ ಕಣ್ಣು ಮುಚ್ಚಬೇಡಿ, ಮಾತನಾಡಿ: ರಮ್ಯಾ
View this post on Instagram
ಚಂದನ್ ಕುಮಾರ್ ತೆಲುಗು ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಕೊರೊನಾ ಎರಡನೇ ಅಲೆ ಬರುವುದಕ್ಕೂ ಕೆಲ ತಿಂಗಳ ಮೊದಲು ಅವರ ಮದುವೆ ನಿಗದಿ ಆದ ಕಾರಣ ನಟನೆಯಿಂದ ಒಂದು ಬ್ರೇಕ್ ತೆಗೆದುಕೊಂಡರು. ಈ ಕಾರಣಕ್ಕೆ ತೆಲುಗು ಧಾರಾವಾಹಿಯಿಂದ ಹೊರ ಬಂದರು. ಹೀಗಾಗಿ ಚಂದನ್ ಮನೆಯಲ್ಲೇ ಇರಬೇಕಾದ ಪರಿಸ್ಥಿತಿ ಎದುರಾಗಿತ್ತು. ಅಲ್ಲದೆ ಅವರಿಗೆ ಜಿಮ್ಗೆ ತೆರಳೋಕು ಸಾಧ್ಯವಾಗಿರಲಿಲ್ಲ. ಹೀಗಾಗಿ ಅವರ ದೇಹ ಶೇಪ್ ಕಳೆದುಕೊಂಡಿತ್ತು. ಆದರೆ ಸತತ ಎರಡು ತಿಂಗಳು ಜಿಮ್ನಲ್ಲಿ ಬೆವರು ಹರಿಸಿದ್ದಾರೆ. ಈ ಮೂಲಕ ಅವರ ಬಾಡಿಯನ್ನು ಕರಗಿಸಿದ್ದಾರೆ.