ಬೆಂಗಳೂರು: ಒಂದೇ ಆಧಾರ್ ಕಾರ್ಡ್ (Aadhar Card) ಬಳಸಿ ಶಕ್ತಿ ಯೋಜನೆಯ ಲಾಭ ಪಡೆಯಲು ಮುಂದಾಗಿದ್ದ ಇಬ್ಬರು ಬುರ್ಖಾಧಾರಿ ಮಹಿಳೆಯರು ರೆಡ್‌ಹ್ಯಾಂಡಾಗಿ ನಿರ್ವಾಹಕನ (Conductor) ಕೈಗೆ ಸಿಕ್ಕಿ ಬಿದ್ದಿದ್ದಾರೆ.
ಇಬ್ಬರಿಗೂ ಒಂದೇ ಆಧಾರ್ ಕಾರ್ಡ್ – ನಿರ್ವಾಹಕನ ಕೈಯಲ್ಲಿ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದ ಬುರ್ಖಾಧಾರಿ ಮಹಿಳೆಯರು – ವಿಡಿಯೋ ವೈರಲ್
#KSRTC #FreeBus #ShaktiScheme #Bus #Ticket @RLR_BTM pic.twitter.com/f5V4lqu0g0
— PublicTV (@publictvnews) December 10, 2023
Advertisement
ನಿರ್ವಾಹಕರು ಎಂದಿನಿಂತೆ ಟಿಕೆಟ್ ಕೊಡುವ ಮುನ್ನ ದಾಖಲೆ ಕೇಳಿದ್ದಾರೆ. ಈ ವೇಳೆ ಮಹಿಳೆಯರು ಆಧಾರ್ ಕಾರ್ಡ್ ತೋರಿಸಿದ್ದಾರೆ. ಇಬ್ಬರ ಕಾರ್ಡ್‌ನಲ್ಲಿ ಒಂದೇ ನಂಬರ್ ಇರುವುದನ್ನು ನೋಡಿ ಇದು ಹೇಗೆ ಎಂದು ಪ್ರಶ್ನಿಸಿದ್ದಾರೆ. ಕೊನೆಗೆ ಒಬ್ಬರು ಟಿಕೆಟ್ ಪಡೆದು ಪ್ರಯಾಣಿಸಿದ್ದಾರೆ. ಇದನ್ನೂ ಓದಿ: ಉಡುಪಿ ವೀಡಿಯೋ ಪ್ರಕರಣ – ಬೆಂಗಳೂರು, ಹೈದರಾಬಾದ್ ಬಳಿಕ ಅಹಮದಾಬಾದ್‍ನ ಎಫ್‍ಎಸ್‍ಎಲ್‍ಗೆ ಮೊಬೈಲ್ ರವಾನೆ
Advertisement
ನಿರ್ವಾಹಕನೇ ಈ ವಿಡಿಯೋ ಮಾಡಿ ಯಾವ ರೀತಿ ಮಹಿಳೆಯರು ಮೋಸ ಮಾಡುತ್ತಾರೆ ಎಂದು ವಿವರಿಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Advertisement
Behind the veil of Burqa, many wrong things can be done. Matter of High security risk, two Aadhar card with same number was being used by burqa clad woman to avail free Bus ride in Karnataka. This is how they cause severe assault to Nation’s economy.
— Oxomiya Jiyori ???????? (@SouleFacts) December 10, 2023
Advertisement
ಕರ್ನಾಟಕ ರಾಜ್ಯಕ್ಕೆ ಸೇರಿದ ಮಹಿಳೆಯರು ಮಾತ್ರ ಶಕ್ತಿ ಯೋಜನೆಯ ಲಾಭ ಪಡೆಯಲು ಅರ್ಹರಾಗಿರುತ್ತಾರೆ. ಬೇರೆ ರಾಜ್ಯದವರಿಗೆ ಈ ಯೋಜನೆಯ ಲಾಭ ಸಿಗುವುದಿಲ್ಲ.