ಟಾಲಿವುಡ್ ನಟ ನಾಗಚೈತನ್ಯ (Naga Chaitanya) ಮದುವೆ ಬೆನ್ನಲ್ಲೇ ಮದುವೆ ಬಗ್ಗೆ ಸಮಂತಾ (Samantha) ಸುಳಿವು ನೀಡಿದ್ದಾರೆ. ಈ ರಾಶಿಯವರು 2025ರ ವರ್ಷದಲ್ಲಿ ಏನನ್ನೆಲ್ಲ ನಿರೀಕ್ಷೆ ಮಾಡಬಹುದು ಎಂಬ ಪಟ್ಟಿಯನ್ನು ಸಮಂತಾ ಹಂಚಿಕೊಂಡು, ಹಾಗೆಯೇ ಆಗಲಿ ಎಂದು ಕ್ಯಾಪ್ಷನ್ ನೀಡಿದ್ದಾರೆ. ಮದುವೆ ಮತ್ತು ಮಕ್ಕಳ ಬಗ್ಗೆ ಇದರಲ್ಲಿ ಸೂಚನೆ ಇದೆ. ಇದನ್ನೂ ಓದಿ:ಪೂಜಾ ಹೆಗ್ಡೆಗೆ ಠಕ್ಕರ್- ನಾಗಚೈತನ್ಯಗೆ ಶ್ರೀಲೀಲಾ ಜೋಡಿ?
Advertisement
2025ರಲ್ಲಿ ಅತ್ಯಂತ ಬಿಡುವಿಲ್ಲದ ವರ್ಷವಾಗಿರುವುದು, ಹೆಚ್ಚು ಪ್ರಗತಿ ಕಾಣಬೇಕು ಹಾಗೂ ಹೆಚ್ಚಿನ ಹಣವನ್ನು ಗಳಿಸುವುದು, ನಿಮಗೆ ಮತ್ತು ನಿಮಗೆ ಆರ್ಥಿಕ ಸ್ಥಿರತೆ ಇರುವುದು, ನೀವು ಹೊಂದಿದ್ದ ದೊಡ್ಡ ಗುರಿಗಳನ್ನು ಪೂರ್ಣಗೊಳಿಸುವುದು, ಆದಾಯಕ್ಕೆ ಹಲವು ಮಾರ್ಗಗಳು, ಸ್ಥಳಾಂತರಗೊಳ್ಳಲು ಒಂದು ಅವಕಾಶ, ಉತ್ತಮ ಮಾನಸಿಕ ಮತ್ತು ದೈಹಿಕ ಆರೋಗ್ಯ, ಫಲವತ್ತತೆ, ನೀವು ಗರ್ಭಿಣಿಯಾಗಲು ಪ್ರಯತ್ನಿಸುತ್ತಿದ್ದರೆ, ಅದು ಅದ್ಭುತವಾಗಿದೆ. ಇಲ್ಲದಿದ್ದರೆ, ಜಾಗರೂಕರಾಗಿರಿ ಎಂದು ಸಮಂತಾ ಹಾಕಿರುವ ಪೋಸ್ಟ್‌ನಲ್ಲಿದೆ.
Advertisement
Advertisement
ಇದೇ ಪಟ್ಟಿಯಲ್ಲಿ ಸಮಂತಾ ಅವರು ಅತ್ಯಂತ ನಿಷ್ಠಾವಂತ ಮತ್ತು ಪ್ರೀತಿಯ ಸಂಗಾತಿ ಎಂದು ಪೋಸ್ಟ್ ಮಾಡಿರುವುದು ಪ್ರಶ್ನೆಗಳನ್ನು ಮುಂದಿಟ್ಟಿದೆ. ಅಲ್ಲದೆ, ಸಮಂತಾ ಅವರು ಮುಂದಿನ ವರ್ಷದಲ್ಲಿ ತಮ್ಮ ಹೊಸ ಸಂಗಾತಿ ಹಾಗೂ ಗರ್ಭಿಣಿಯಾಗುವ ಬಗ್ಗೆಯೂ ಸುಳಿವು ನೀಡಿದ್ದಾರೆ. ಈ ಪೋಸ್ಟ್ ಹಂಚಿಕೊಂಡ ಬೆನ್ನಲ್ಲೇ ಸಮಂತಾ ಕೂಡ 2ನೇ ಮದುವೆಯ ನಿರೀಕ್ಷೆಯಲ್ಲಿದ್ದಾರೆ ಎಂದು ಫ್ಯಾನ್ಸ್ ಊಹಿಸುತ್ತಿದ್ದಾರೆ.