`ಪುಷ್ಪ’ ಬ್ಯೂಟಿ ಸಮಂತಾ ನಾಗಚೈತನ್ಯ ಜೊತೆಗಿನ ವಿಚ್ಛೇದನದ ನಂತರ ಸಖತ್ ಸುದ್ದಿಯಲ್ಲಿದ್ದಾರೆ. ಜತೆಗೆ ಸಾಲು ಸಾಲು ಅವಕಾಶಗಳು ಹರಿದು ಬರುತ್ತಿದೆ. ʻಪುಷ್ಪʼ ಚಿತ್ರದ ಹಾಡಿಗೆ ಸಮಂತಾ ಹೆಜ್ಜೆ ಹಾಕಿದ ಮೇಲಂತೂ ಈಕೆಗೆ ಭರ್ಜರಿ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಸದ್ಯ ಐಟಂ ಹಾಡಿಗೆ ಹೆಜ್ಜೆ ಹಾಕಲು ಬಾಲಿವುಡ್‌ನಿಂದ ಸಮಂತಾಗೆ ಬುಲಾವ್ ಬಂದಿದೆ.
Advertisement
ಸಮಂತಾ ಸೌತ್ ಸಿನಿ ಅಂಗಳದ ಬಹುಬೇಡಿಕೆಯ ನಟಿ, ಟಾಲಿವುಡ್, ಬಾಲಿವುಡ್, ಹಾಲಿವುಡ್‌ನಿಂದ ನಾಯಕಿಯಾಗಿ ನಟಿಸಲು ಸ್ಯಾಮ್‌ಗೆ ಬಂಪರ್ ಆಫರ್‌ಗಳು ಹರಿದು ಬರುತ್ತಿದೆ. ಈ ಬೆನ್ನಲ್ಲೇ ರಣ್‌ಬೀರ್ ಕಪೂರ್ ಸಿನಿಮಾಗೆ ಹೆಜ್ಜೆ ಹಾಕಲು ಸಮಂತಾರನ್ನು ಚಿತ್ರತಂಡ ಕೇಳಲಾಗಿದೆಯಂತೆ. `ಪುಷ್ಪ’ ಚಿತ್ರಕ್ಕೆ ಸೊಂಟ ಬಳುಕಿಸಿರೋ ಸಮಂತಾ ಬೋಲ್ಡ್‌ನೆಸ್ ನೋಡಿ ಫ್ಯಾನ್ಸ್ ಫಿದಾ ಅಗಿದ್ದಾರೆ. ಈಗ ಸಮಂತಾ ಟ್ಯಾಲೆಂಟ್ ಜತೆ ಆಕೆಯ ಮೇಲಿರುವ ಕ್ರೇಜ್ ನೋಡಿ ರಣ್‌ಬೀರ್ ಮತ್ತು ರಶ್ಮಿಕಾ ನಟನೆಯ `ಅನಿಮಲ್’ ಚಿತ್ರತಂಡ ಮತ್ತೆ ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕಲು ಕೇಳಿದ್ದಾರೆ. ಇದನ್ನೂ ಓದಿ:ಪಿಂಕ್ ಕಲರ್ ಸೀರೆಯಲ್ಲಿ ಹಾಟ್ ಆಗಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ
Advertisement
Advertisement
ವೃತ್ತಿರಂಗದಲ್ಲಿ ಮಿಂಚ್ತಿರುವ ಸಮಂತಾ ಏಳಿಗೆ ನೋಡಿ ಫ್ಯಾನ್ಸ್ ಖುಷಿಪಡ್ತಿದ್ದಾರೆ. ಇನ್ನು ರಣ್‌ಬೀರ್ ನಟನೆಯ ಸಿನಿಮಾಗೆ ಸಮಂತಾ ಗ್ರೀನ್ ಸಿಗ್ನಲ್ ಕೊಡುತ್ತಾರಾ ಅಂತಾ ಕಾದುನೋಡಬೇಕಿದೆ.
Advertisement
Live Tv