ಟಾಲಿವುಡ್ (Tollywood) ನಟ ನಾಗಚೈತನ್ಯ (Nagachaitanya) 2ನೇ ಮದುವೆಯಾಗ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗ್ತಿದ್ದಂತೆ ಸಮಂತಾ ಖಾಸಗಿ ಖಾತೆಯಲ್ಲಿ ನಾಗಚೈತನ್ಯ ಜೊತೆಗಿನ ಮದುವೆ ಫೋಟೋವನ್ನ ನಟಿ ಶೇರ್ ಮಾಡಿದ್ದಾರೆ. ಇಬ್ಬರ ಮದುವೆಯ ಹಳೆಯ ಫೋಟೋ ವೈರಲ್ ಆಗುತ್ತಿದ್ದಂತೆ ಈ ಜೋಡಿ ಮತ್ತೆ ಒಂದಾಗಲಿದ್ದಾರೆ ಎಂಬ ವಿಚಾರ ಚರ್ಚೆಗೆ ಗ್ರಾಸವಾಗಿದೆ.
Advertisement
ಖ್ಯಾತ ಉದ್ಯಮಿ ಪುತ್ರಿ ಜೊತೆ ನಾಗಚೈತನ್ಯ 2ನೇ ಮದುವೆಯಾಗುತ್ತಿದ್ದಾರೆ. ಆದರೆ ವಧು ನಟಿ ಶೋಭಿತಾ ಜೊತೆ ಅಲ್ಲ ಎಂದು ಹಬ್ಬಿತ್ತು. ಈ ಸುದ್ದಿ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಸ್ಯಾಮ್ ಮತ್ತು ಚೈ ಮದುವೆ ಫೋಟೋ ಮತ್ತೆ ಸಮಂತಾ ಇನ್ಸ್ಟಾಗ್ರಾಂ ಖಾತೆಯಲ್ಲಿ ಕಾಣಿಸಿಕೊಂಡಿದೆ. ಫ್ಯಾನ್ಸ್ ಈ ಪೋಸ್ಟ್ ನೋಡ್ತಿದ್ದಂತೆ ಸಮಂತಾ- ಚೈತನ್ಯ ಮತ್ತೆ ಜೊತೆಯಾಗುತ್ತಾರೆ ಎಂದು ಸುದ್ದಿಯಾಗುತ್ತಿದೆ. ಇದನ್ನೂ ಓದಿ:‘ಕುದ್ರು’ ಸಿನಿಮಾದಲ್ಲಿ ಕ್ಲಾಸ್ ಬಂಕ್ ಹಾಡು
Advertisement
View this post on Instagram
Advertisement
ಹಲವು ವರ್ಷಗಳ ಡೇಟಿಂಗ್ ನಂತರ ಮದುವೆಯಾಗಿದ್ದ ಈ ಜೋಡಿ, 2021ರಲ್ಲಿ ಸಮಂತಾ- ನಾಗಚೈತನ್ಯ ಡಿವೋರ್ಸ್ (Divorce) ಪಡೆದುಕೊಂಡರು. ಆಗಲೇ ಮಾಜಿ ಪತಿ ಜೊತೆಗಿನ ಒಂದೊಂದೇ ಫೋಟೋಗಳನ್ನ ಸಮಂತಾ ಇನ್ಸ್ಟಾಗ್ರಾಂನಲ್ಲಿ ಮರೆ ಮಾಚಿದ್ರು. ನಟಿಯ ನಡೆ ನೋಡಿ ಫ್ಯಾನ್ಸ್ ಡಿವೋರ್ಸ್ ಸಂಶಯ ವ್ಯಕ್ತಪಡಿಸಿದ್ದರು. ಇದಾದ ಕೆಲ ದಿನಗಳ ಬಳಿಕ ಡಿವೋರ್ಸ್ ಆಗಿರುವ ಬಗ್ಗೆ ಅಧಿಕೃತ ಸ್ಪಷ್ಟನೆ ನೀಡಿದ್ದರು.
Advertisement
ಅಂದು ಕಣ್ಮರೆಯಾಗಿದ್ದ ಫೋಟೋಗಳು ಈಗ ಮತ್ತೆ ಸ್ಯಾಮ್ ಖಾತೆಯಲ್ಲಿ ಕಾಣಿಸಿಕೊಂಡಿರುವುದರಿಂದ ಈ ಜೋಡಿ ಮತ್ತೆ ಒಂದಾಗಲಿ ಎಂದು ಫ್ಯಾನ್ಸ್ ಆಶಿಸುತ್ತಿದ್ದಾರೆ. ಇದನ್ನೂ ಓದಿ:ನಟಿ ಪರಿಣಿತಿ ಚೋಪ್ರಾ ಮದುವೆ : ಭರ್ಜರಿ ಸಿದ್ಧತೆ
ಡಿವೋರ್ಸ್ ಬಳಿಕ ಇಬ್ಬರು ಕೆರಿಯರ್‌ನತ್ತ ಮುಖ ಮಾಡಿದ್ದರು. ಸಮಂತಾ ಮತ್ತಷ್ಟು ಸ್ಟ್ರಾಂಗ್ ಆಗಿ ನಿಂತುಕೊಂಡರು. ಮತ್ತೆ ಈ ಜೋಡಿ ಗುಡ್ ನ್ಯೂಸ್ ಕೊಡುತ್ತಾರಾ ಎಂದು ಕಾಯಬೇಕಿದೆ.