BollywoodCinemaLatestMain Post

ಒಂದೇ ಪ್ರಾಜೆಕ್ಟ್‌ನಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ ಸಮಂತಾ- ರಣ್‌ವೀರ್ ಸಿಂಗ್

`ಪುಷ್ಪ’ ಬ್ಲಾಕ್ ಬಸ್ಟರ್ ಸಕ್ಸಸ್ ನಂತರ ಸಮಂತಾಗೆ ಭರ್ಜರಿ ಡಿಮ್ಯಾಂಡ್ ಸೃಷ್ಟಿಯಾಗಿದೆ. ಒಂದೇ ಪ್ರಾಜೆಕ್ಟ್‌ನಲ್ಲಿ ಸಮಂತಾ ಮತ್ತು ರಣ್‌ವೀರ್ ಸಿಂಗ್ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಬಿಟೌನ್ ಸ್ಟಾರ್ ರಣ್‌ವೀರ್ ಸಿಂಗ್ ಈ ಹಿಂದೆ, `ಪುಷ್ಪ’ ಚಿತ್ರದ ಸಮಂತಾ ನಟನೆಯ `ಊ ಅಂಟಾವ ಮಾಮ’ ಸಾಂಗ್ ತುಂಬಾ ಇಷ್ಟ ಅಂತಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಇದೀಗ ಸಮಂತಾ ಮತ್ತು ರಣ್‌ವೀರ್ ಸಿಂಗ್ ಒಟ್ಟಿಗೆ ನಟಿಸುವ ಅವಕಾಶವೊಂದು ಸಿಕ್ಕಿದ್ದು, ಆಡ್‌ಶೂಟ್‌ವೊಂದರಲ್ಲಿ ಇಬ್ಬರು ಒಟ್ಟಿಗೆ ನಟಿಸಿ ಬಂದಿದ್ದಾರೆ.

ಜಾಹೀರಾತೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿರುವ ಸಮಂತಾ ಮತ್ತು ರಣ್‌ವೀರ್ ಸಿಂಗ್, ಇದೀಗ ತಾವು ಒಟ್ಟಿಗೆ ಇರುವ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಈ ಫೋಟೋ ನೋಡಿ ಫ್ಯಾನ್ಸ್ ಕೂಡ ಇಷ್ಟಪಟ್ಟಿದ್ದಾರೆ. ಒಟ್ನಲ್ಲಿ ದಿನೇ ದಿನೇ ಸಮಂತಾಗೆ ಒಳ್ಳೆಯ ಅವಕಾಶಗಳು ಅರಸಿ ಬರುತ್ತಿದೆ. ಈಗಾಗಲೇ ಎಲ್ಲಾ ವುಡ್‌ಗಳಲ್ಲೂ ಸಮಂತಾ ಬ್ಯುಸಿಯಾಗಿದ್ದಾರೆ. ಇನ್ನು ಸಮಂತಾ ಅವರ ಮುಂಬರುವ ಸಿನಿಮಾಗಾಗಿ ಕಾಯ್ತಿದ್ದಾರೆ.

Leave a Reply

Your email address will not be published.

Back to top button