ದುಪ್ಪಟ್ಟು ಸಂಭಾವನೆಗೆ ಬೇಡಿಕೆಯಿಟ್ಟ ಸಮಂತಾ

Public TV
2 Min Read
samantha 1 1

ಸೌತ್ ಬ್ಯೂಟಿ ಸಮಂತಾ (Samantha) ಅವರು ಮೆಯೋಸಿಟೀಸ್ ಕಾಯಿಲೆಯಿಂದ ಬಳಲುತ್ತಿದ್ದರು. ಇದೀಗ ಗುಣಮುಖರಾಗಿ ಮತ್ತೆ ಹೊಸ ಪ್ರಾಜೆಕ್ಟ್‌ಗಳತ್ತ ಮುಖ ಮಾಡಿದ್ದಾರೆ. ಗ್ಯಾಪ್‌ನ ನಂತರ ಮತ್ತೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುತ್ತಿರುವಾಗಲೇ ಸಮಂತಾ ಸಂಭಾವನೆ ಡಬಲ್ ಮಾಡಿದ್ದಾರೆ. ದುಪ್ಪಟ್ಟು ಸಂಭಾವನೆಗೆ ಬೇಡಿಕೆ ಇಡುವ ಮೂಲಕ ನಟಿ ಸುದ್ದಿಯಲ್ಲಿದ್ದಾರೆ.

samantha 2 1

ಪ್ರಿಯಾಂಕಾ ಚೋಪ್ರಾ ನಟಿಸಿದ ‘ಸಿಟಾಡೆಲ್’ ಇಂಡಿಯನ್ ವರ್ಷನ್‌ನಲ್ಲಿ ‘ಹನಿ ಬನಿ’ (Honey Bunny) ಎಂಬ ಟೈಟಲ್‌ನೊಂದಿಗೆ ರಿಲೀಸ್ ಆಗುತ್ತಿದೆ. ವರುಣ್ ಧವನ್‌ಗೆ ನಾಯಕಿಯಾಗಿ ಸಮಂತಾ ನಟಿಸಿದ್ದಾರೆ. ಈ ವೆಬ್ ಸಿರೀಸ್ ಪ್ರಚಾರ ಕಾರ್ಯದಲ್ಲಿ ನಟಿ ಬ್ಯುಸಿಯಾಗಿದ್ದಾರೆ.

Samantha 3

ಸದ್ಯ ಕಮ್ ಬ್ಯಾಕ್ ಆಗಿರುವ ಸಮಂತಾ, ತಮ್ಮ ಮುಂಬರುವ ಸಿನಿಮಾಗಳಿಗೆ ಸಂಭಾವನೆ ದುಪ್ಪಟ್ಟು ಮಾಡಿದ್ದಾರೆ ಎನ್ನಲಾಗುತ್ತಿದೆ. ದುಬಾರಿ ಕೊಡಲು ನಟಿ ಬೇಡಿಕೆ ಇಟ್ಟಿದ್ದಾರಂತೆ. ವರುಣ್ ಧವನ್ (Varun Dhawan) ಜೊತೆ ನಟಿಸಿರುವ ವೆಬ್‌ ಸರಣಿ ‘ಹನಿ ಬನಿ’ ಪ್ರಾಜೆಕಟ್‌ಗೆ ಸಮಂತಾ 10 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ.

samantha 1

ಸಮಂತಾ ಈಗ ಯಾವುದೇ ಚಿತ್ರಗಳನ್ನು ಮಾಡುತ್ತಿಲ್ಲವಾದರೂ, ಅವರು ತಮ್ಮ ಪ್ರತಿ ಹೊಸ ಪ್ರಾಜೆಕ್ಟ್‌ಗೆ 6 ಕೋಟಿ ರೂ.ವರೆಗೆ ಬೇಡಿಕೆಯಿಡುತ್ತಿದ್ದಾರೆ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಜಾಹೀರಾತಿನಲ್ಲಿ ನಟಿಸಲು ಸಮಂತಾ 2 ಕೋಟಿ ರೂ. ಸಂಭಾವನೆ ಫಿಕ್ಸ್ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದನ್ನೂ ಓದಿ:ಮೆಗಾಸ್ಟಾರ್, ಕೀರವಾಣಿ ಜೊತೆಗಿನ ಫೋಟೋ ಹಂಚಿಕೊಂಡು ದೈವಿಕ ಕ್ಷಣ ಎಂದ ತ್ರಿಷಾ

samantha 1ಅಂದಹಾಗೆ, ವಿವಾದ, ಅನಾರೋಗ್ಯ, ಯಶಸ್ಸು ಎಲ್ಲವೂ ಅನುಭವಿಸಿರುವ ಜೀವ ಸಮಂತಾ. ನಾಗಚೈತನ್ಯ ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ ಮೇಲೆ ಸಮಂತಾ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದರು. ಎಲ್ಲಾ ವಿಚಾರಕ್ಕೂ ಸಮಂತಾ ಕಡೆಯೇ ಬೆಟ್ಟು ಮಾಡಿ ತೋರಿಸುತ್ತಿದ್ದರು. ಸಹವಾಸವೇ ಬೇಡ ಅಂತ ವೃತ್ತಿರಂಗದಲ್ಲಿ ಬ್ಯುಸಿಯಾದರು. ‘ಪುಷ್ಪ’ (Pushpa) ಚಿತ್ರದಲ್ಲಿ ಸೊಂಟ ಬಳುಕಿಸಿದ ಮೇಲೆ ಸಮಂತಾ ಲಕ್ ಬದಲಾಯ್ತು.

ಆದರೆ ‘ಯಶೋದ’ ಮತ್ತು ‘ಖುಷಿ’ (Kushi) ಸಿನಿಮಾ ಆದ್ಮೇಲೆ ಬಿಗ್ ಸ್ಕ್ರೀನ್ ಮೇಲೆ ಕಾಣಿಸಿಕೊಂಡಿರಲಿಲ್ಲ. ಎರಡೂ ಹೀನಾಯವಾಗಿ ಸೋತ ಚಿತ್ರಗಳು. ಸೋಲಿನ ಹೊಡೆತಕ್ಕೆ ಅನಾರೋಗ್ಯದ ಆಘಾತ ಎರಡನ್ನೂ ಸಹಿಕೊಳ್ಳೋಕೆ ಸ್ಯಾಮ್‌ಗೆ 8 ತಿಂಗಳು ಹಿಡಿಯಿತು. ಇದೀಗ ಮತ್ತೆ ಕೆಲಸಕ್ಕೆ ಮರಳಿದ್ದಾರೆ.

Share This Article