ಜೈಪುರ: ಅಕ್ರಮ ಗಣಿಗಾರಿಕೆಯನ್ನು ಖಂಡಿಸಿದ್ದ ಸಾಧುವೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ಸಾಧು ಬಾಬಾ ವಿಜಯ್ ದಾಸ್ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಇವರು ರಾಜಸ್ಥಾನದ ಭರತ್‍ಪುರ ಜಿಲ್ಲೆ ಸುತ್ತಮುತ್ತ ಅಕ್ರಮ ಗಣಿಗಾರಿಕೆಯನ್ನು ಖಂಡಿಸಿದ್ದರು. ಆದರೆ ಸಾಧುವೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಸಹಾಯಕ್ಕೆ ಧಾವಿಸಿದ ಪೊಲೀಸರು ಬೆಂಕಿ ಆರಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇದನ್ನೂ ಓದಿ: ಪಂದ್ಯ ಕಟ್ಟಿ ವಿದ್ಯಾರ್ಥಿನಿಯನ್ನು ಚುಂಬಿಸಿದ ವಿದ್ಯಾರ್ಥಿ
ಸಾಧು ಬಾಬಾ ವಿಜಯ್ ದಾಸ್ ಶೇ.80ರಷ್ಟು ಸುಟ್ಟಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಜಿಲ್ಲೆಯ ದೀಗ್ ಪ್ರದೇಶದ ಆದಿಬದ್ರಿ ಧಾಮ್ ಮತ್ತು ಕಂಕಂಚಲ್‍ನಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಸಾಧುಗಳು 550 ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ಆದರೆ ಈವರೆಗೂ ಯಾವುದೇ ಕ್ರಮಗಳು ಆಗಿರಲಿಲ್ಲ. ಇದರಿಂದ ಮನನೊಂದ ಸಾಧು ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ಘಟನೆ ಸಂಬಂಧಿಸಿ ಗೆಹ್ಲೋಟ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೆಚ್ಚಾಗಿದೆ. ಇದನ್ನೂ ಓದಿ: ಟೋಲ್‍ನಲ್ಲಿ ಹಸು ಮಲಗಿದ್ದೇ ಅಪಘಾತಕ್ಕೆ ಕಾರಣ – ಅಂಬುಲೆನ್ಸ್ ಚಾಲಕನ