DistrictsKarnatakaLatestMain PostUdupi

ಟೋಲ್‍ನಲ್ಲಿ ಹಸು ಮಲಗಿದ್ದೇ ಅಪಘಾತಕ್ಕೆ ಕಾರಣ – ಅಂಬುಲೆನ್ಸ್ ಚಾಲಕನ

ಉಡುಪಿ: ಟೋಲ್‍ನಲ್ಲಿ ಹಸು ಮಲಗಿದ್ದೇ ಅಂಬುಲೆನ್ಸ್ ಅಪಘಾತಕ್ಕೆ ಕಾರಣ ಎಂದು ಚಾಲಕ ರೋಷನ್ ಹೇಳಿದ್ದಾರೆ.

ಜಿಲ್ಲೆಯಲ್ಲಿ ಟೋಲ್‍ಗೇಟ್‍ಗೆ ಡಿಕ್ಕಿಯಾಗಿ ಅಂಬುಲೆನ್ಸ್ ಪಲ್ಟಿಯಾದ ಹಿನ್ನೆಲೆ ನಾಲ್ವರು ಸಾವನ್ನಪ್ಪಿದ್ದರು. ಸದ್ಯ ಘಟನೆ ವೇಳೆ ಗಾಯಗೊಂಡಿರುವ ಟೋಲ್ ಸಿಬ್ಬಂದಿ ಹಾಗೂ ಇತರ ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿಸಲಾಗುತ್ತಿದೆ. ಇದನ್ನೂ ಓದಿ: ಟೋಲ್‍ಗೇಟ್‍ನಲ್ಲಿ ಅಂಬುಲೆನ್ಸ್ ಅಪಘಾತ ಪ್ರಕರಣ- ಸಾವಿನ ಸಂಖ್ಯೆ 4ಕ್ಕೆ ಏರಿಕೆ

ಈ ನಡುವೆ ಆಂಬುಲೆನ್ಸ್ ಚಾಲಕ ರೋಷನ್ ಆಂಬುಲೆನ್ಸ್‍ಗೆ ಅಡ್ಡಲಾಗಿ ದನ ಬಂದಿದ್ದೆ ಅಪಘಾತಕ್ಕೆ ಕಾರಣ ಎಂದು ಆರೋಪಿಸಿದ್ದಾರೆ. ನಾನು ಉಡುಪಿಯ ಆದರ್ಶ ಆಸ್ಪತ್ರೆಗೆ ರೋಗಿ ಒಬ್ಬರನ್ನು ಶಿಫ್ಟ್ ಮಾಡುತ್ತಿದ್ದೆ. ಶಿರೂರಿನಲ್ಲಿ ಫಸ್ಟ್ ಗೇಟ್ ಸೆಕೆಂಡ್ ಗೇಟ್ ಸಿಗುತ್ತದೆ. ಎಮರ್ಜೆನ್ಸಿ ಲೈನ್‍ನಲ್ಲಿ ಫಸ್ಟ್ ಗೇಟ್ ತೆಗೆದಿದ್ದಾರೆ. ಸೆಕೆಂಡ್ ಗೇಟ್ ತೆಗೆಯುವಾಗ ಅಡ್ಡಲಾಗಿ ದನ ಮಲಗಿತ್ತು. ಆಗ ನನಗೆ ಏನು ಮಾಡಲು ಸಾಧ್ಯವಾಗಲಿಲ್ಲ. ದನ ಮತ್ತು ಇಬ್ಬರು ಟೋಲ್ ಸಿಬ್ಬಂದಿ ಅಲ್ಲಿಯೇ ಇದ್ದರು. ಹೀಗಾಗಿ ಅಪಘಾತವಾಗಿ ವಾಹನ ಪಲ್ಟಿ ಆಗುತ್ತಿತ್ತು. ಈ ಭಯದಿಂದ ನಾನು ಹಿಂದುಗಡೆ ಬ್ರೇಕ್ ಹೊಡೆದ್ದರಿಂದ ಅಪಘಾತವಾಯಿತು ಎಂದಿದ್ದಾರೆ.

ಹೊನ್ನಾವರದಿಂದ ಕುಂದಾಪುರಕ್ಕೆ ಬರುತ್ತಿದ್ದ ಅಂಬುಲೆನ್ಸ್, ಚಾಲಕನ ಅತೀವೇಗ ಮತ್ತು ಅಜಾಗರೂಕತೆಯಿಂದ ಬೈಂದೂರು ತಾಲೂಕಿನ ಶಿರೂರು ಟೋಲ್ ಗೇಟ್‍ಗೆ ಡಿಕ್ಕಿಯಾಗಿ ಪಲ್ಟಿಯಾಗಿದೆ. ಅಂಬುಲೆನ್ಸ್ ಡಿಕ್ಕಿ ಹೊಡೆದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಈ ಭಯಾನಕ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಟೋಲ್‍ಗೇಟ್‍ಗೆ ಡಿಕ್ಕಿಯಾಗಿ ಪಲ್ಟಿಯಾದ ಅಂಬುಲೆನ್ಸ್- ಮೂವರು ಸಾವು, ಓರ್ವ ಗಂಭೀರ

Live Tv

Leave a Reply

Your email address will not be published.

Back to top button