ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಾಜಿ ಸಚಿವ ಪಾರ್ಥ ಚಟರ್ಜಿ ಅವರ ಸಹಾಯಕಿ ಅರ್ಪಿತಾ ಮುಖರ್ಜಿಯವರನ್ನು ಇಂದು ನ್ಯಾಯಾಲಯದ ಆದೇಶದಂತೆ ವೈದ್ಯಕೀಯ ತಪಾಸಣೆಗೆಂದು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಅರ್ಪಿತಾ ಆಸ್ಪತ್ರೆ ಆವರಣದಲ್ಲಿ ಗಳಗಳನೆ ಅತ್ತು ರಾದ್ಧಾಂತ ನಡೆಸಿದ್ದಾರೆ. ಕಾರಿನಿಂದ ಇಳಿಯದೇ ಆಸ್ಪತ್ರೆಗೆ ಹೋಗಲು ನಿರಾಕರಿಸಿದ ಅರ್ಪಿತಾ ಅವರನ್ನು ಬಳಿಕ ಬಲವಂತವಾಗಿ ಕರೆದೊಯ್ಯಲಾಗಿದೆ.
ಅಮಾನತುಗೊಂಡಿರುವ ತೃಣಮೂಲ ಕಾಂಗ್ರೆಸ್ ನಾಯಕ ಪಾರ್ಥ ಚಟರ್ಜಿ ಹಾಗೂ ಅವರ ಆಪ್ತೆ ಅರ್ಪಿತಾ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ(ಇಡಿ) ಬಂಧನಕ್ಕೊಳಗಾಗಿದ್ದಾರೆ. ಅವರನ್ನು ನ್ಯಾಯಾಲಯದ ಆದೇಶದಂತೆ ಪ್ರತಿ 42 ಗಂಟೆಗಳಿಗೊಮ್ಮೆ ವೈದ್ಯಕೀಯ ತಪಾಸಣೆಗೆ ಒಳಪಡಿಸಬೇಕಾಗುತ್ತದೆ.
Advertisement
Advertisement
ಶುಕ್ರವಾರ ಇಡಿ ಅಧಿಕಾರಿಗಳು ಜೋಕಾದಲ್ಲಿರುವ ಇಎಸ್‌ಐ ಆಸ್ಪತ್ರೆಗೆ ಅರ್ಪಿತಾ ಮುಖರ್ಜಿ ಅವರನ್ನು ಕಾರಿನಲ್ಲಿ ಕರೆತಂದಿದ್ದರು. ಆದರೆ ಮೊದಲಿಗೆ, ಅರ್ಪಿತಾ ಕಾರಿನಿಂದ ಇಳಿಯಲು ನಿರಾಕರಿಸಿದರು. ಅತ್ತುಕೊಂಡೇ ಅಧಿಕಾರಿಗಳೊಂದಿಗೆ ಜಗಳವಾಡಿದರು. ಅವರನ್ನು ಅಧಿಕಾರಿಗಳು ಬಲವಂತವಾಗಿ ಕಾರಿನಿಂದ ಇಳಿಸಲು ಪ್ರಯತ್ನಿಸಿದಾಗ ಅರ್ಪಿತಾ ನೆಲದ ಮೇಲೆ ಕುಳಿತುಕೊಳ್ಳಲು ಮುಂದಾಗಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಎಂಬ ಕಾರಣಕ್ಕೆ ಫಾಝಿಲ್ ಮನೆಗೆ ಸಿಎಂ ಹೋಗಿಲ್ಲ: ಸಿಎಂ ಇಬ್ರಾಹಿಂ
Advertisement
“ED” Government formed in Maharashtra but Firecrackers in Bengal????
Look at Arpita Mukherjee’s Condition????pic.twitter.com/3Ql1OX6KW2
— The Analyzer (@Indian_Analyzer) July 29, 2022
Advertisement
ಅಧಿಕಾರಿಗಳು ಅರ್ಪಿತಾ ಅವರನ್ನು ಎಳೆದಾಡಿ, ಆಸ್ಪತ್ರೆಗೆ ನಡೆಯುವಂತೆ ಮನವೊಲಿಸಲು ಪ್ರಯತ್ನಿಸಿದ್ದಾರೆ. ಇದಕ್ಕೆ ಒಪ್ಪದ ಅರ್ಪಿತಾ ಅವರನ್ನು ಕೊನೆಗೆ ವ್ಹೀಲ್‌ಚೇರ್‌ನಲ್ಲಿ ಬಲವಂತದಿಂದ ಕೂರಿಸಿ, ಆಸ್ಪತ್ರೆಯೊಳಗೆ ಕರೆದೊಯ್ಯಲಾಯಿತು.
2016ರಲ್ಲಿ ಶಿಕ್ಷಣ ಸಚಿವರಾಗಿದ್ದ ಪಾರ್ಥ ಚಟರ್ಜಿ ಶಿಕ್ಷಕರು ಹಾಗೂ ಸಿಬ್ಬಂದಿ ನೇಮಕಾತಿ ವೇಳೆ ಲಂಚ ಪಡೆದಿರುವ ಆರೋಪದ ಮೇಲೆ ಇಡಿ ಇತ್ತೀಚೆಗೆ ಅವರ ಹಾಗೂ ಅರ್ಪಿತಾ ಮುಖರ್ಜಿ ಮನೆಯಲ್ಲಿ ರೇಡ್ ನಡೆಸಿತ್ತು. ಈ ವೇಳೆ ಅರ್ಪಿತಾ ಮನೆಯಲ್ಲಿ 50 ಕೋಟಿ ರೂ. ನಗದು ಪತ್ತೆಯಾಗಿದೆ. ಇದನ್ನೂ ಓದಿ: ನಟಿ ಅರ್ಪಿತಾ ಮುಖರ್ಜಿ ಮನೆ ಮೇಲೆ ಇಡಿ ದಾಳಿ: ‘ಸೆಕ್ಸ್ ಆಟಿಕೆ’ ಕಂಡು ಅಧಿಕಾರಿಗಳು ಗಾಬರಿ
ಒಂದು ಕಾಲದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಪ್ತರಾಗಿದ್ದ ಚಟರ್ಜಿ ಇದೀಗ ಭ್ರಷ್ಟಾಚಾರದ ಆರೋಪದಿಂದ ತೃಣಮೂಲ ಸರ್ಕಾರಕ್ಕೆ ಮುಜುಗರ ತಂದಿದ್ದಾರೆ. ಈ ಹಿನ್ನೆಲೆ ಚಟರ್ಜಿ ಅವರನ್ನು ಗುರುವಾರ ಸಚಿವ ಸ್ಥನದಿಂದ ವಜಾಗೊಳಿಸಿ, ತೃಣಮೂಲ ಕಾಂಗ್ರೆಸ್‌ನ ಎಲ್ಲಾ ಹುದ್ದೆಗಳಿಂದ ತೆಗೆದುಹಾಕಲಾಗಿದೆ.