BollywoodCinemaLatestMain Post

ನಟಿ ಅರ್ಪಿತಾ ಮುಖರ್ಜಿ ಮನೆ ಮೇಲೆ ಇಡಿ ದಾಳಿ: ‘ಸೆಕ್ಸ್ ಆಟಿಕೆ’ ಕಂಡು ಅಧಿಕಾರಿಗಳು ಗಾಬರಿ

Advertisements

ಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈಗಾಗಲೇ ಹಗರಣದ ರೂವಾರಿ, ಪಶ್ಚಿಮ ಬಂಗಾಳದ ಸಚಿವರಾಗಿದ್ದ ಪಾರ್ಥ ಚಟರ್ಜಿಯನ್ನು ಬಂಧಿಸಲಾಗಿದೆ. ಸಚಿವ ಸ್ಥಾನದಿಂದಲೂ ವಜಾ ಮಾಡಲಾಗಿದೆ. ಅಲ್ಲದೇ, ಸಚಿವರಿಗೆ ಆಪ್ತೆಯಾಗಿದ್ದ, ನಟಿ ಅರ್ಪಿತಾ ಮುಖರ್ಜಿ ಮನೆಯ ಮೇಲೆ ದಾಳಿ ಮಾಡಿ ಅಪಾರ ಚಿನ್ನಾಭರಣ ಮತ್ತು 21 ಕೋಟಿ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಆ ಸಮಯದಲ್ಲಿ ನಟಿಯ ಮನೆಯಲ್ಲಿ ಅಪಾರ ಪ್ರಮಾಣದಲ್ಲಿ ಸೆಕ್ಸ್ ಟಾಯ್ಸ್ ಪತ್ತೆಯಾಗಿವೆಯಂತೆ.

ಅರ್ಪಿತಾ ಅವರ ಮನೆಯ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ಮಾಡಿದಾಗ ಬರೋಬ್ಬರಿ 21 ಕೋಟಿ ರೂಪಾಯಿ ನಗದು ಸಿಕ್ಕಿದೆ. ಜೊತೆಗೆ ಲೈಂಗಿಕ ಕ್ರಿಯೆಗೆ ಬಳಸುವಂತಹ ಆಟಿಕೆಗಳು ಕೂಡ ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಟಿಕೆಗಳು ಮಾತ್ರವಲ್ಲ, ಸಾಕಷ್ಟು ಪ್ರಮಾಣದಲ್ಲಿ ಬೆಳ್ಳಿ ಬಟ್ಟಲುಗಳನ್ನು ಕೂಡ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರಂತೆ. ಸಾಮಾನ್ಯವಾಗಿ ಪಶ್ಚಿಮ ಬಂಗಾಳದಲ್ಲಿ ಮದುವೆಯ ಸಂದರ್ಭದಲ್ಲಿ ಬೆಳ್ಳಿ ಬಟ್ಟಲು ಕೊಡುವುದು ವಾಡಿಕೆ. ಹಾಗಾಗಿ ಈ ಬಟ್ಟಲು ಅಲ್ಲಿಗೆ ಬಂದಿದ್ದು ಯಾಕೆ ಎನ್ನುವ ಕುರಿತು ತನಿಖೆ ನಡೆಸಲಾಗುತ್ತಿದೆಯಂತೆ. ಇದನ್ನೂ ಓದಿ:ವಿಕ್ರಾಂತ್ ರೋಣ ಸಿನಿಮಾ ಬಗ್ಗೆ ಅಪಪ್ರಚಾರ: ಗರಂ ಆದ ಸುದೀಪ್ ಅಭಿಮಾನಿಗಳು

 

ಅರ್ಪಿತಾ ಅವರನ್ನು ಕೂಡ ಬಂಧನ ಮಾಡಲಾಗಿದ್ದು, ಸೆಕ್ಸ್ ಟಾಯ್ಸ್ ಕುರಿತಾಗಿಯೂ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತದಲ್ಲಿ ಸೆಕ್ಸ್ ಟಾಯ್ಸ್ ನಿಷೇಧ. ಹಾಗಾಗಿ ಅವುಗಳನ್ನು ಎಲ್ಲಿಂದ ತರಿಸಲಾಗಿತ್ತು ಮತ್ತು ಯಾಕೆ ಅಷ್ಟೊಂದು ಆಟಿಕೆಗಳನ್ನು ಈ ಮನೆಯಲ್ಲಿ ಇಡಲಾಗಿತ್ತು ಎನ್ನುವ ಕುರಿತಾಗಿಯೂ ತನಿಖೆ ನಡೆಸಲಾಗುತ್ತಿದೆಯಂತೆ.

Live Tv

Leave a Reply

Your email address will not be published.

Back to top button