ಸ್ನೇಹಲೋಕ, ನಿನಗಾಗಿ, ಅಸುರ, ಗಟ್ಟಿಮೇಳ ಸಿನಿಮಾಗಳ ನಿರ್ದೇಶಕ ಎಸ್. ಮಹೇಂದರ್ (S. Mahendar) ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. ಬಹುಭಾಷಾ ನಟ ಕಿಶೋರ್‌ಗೆ (Actor Kishore) ಆ್ಯಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ.
Advertisement
ಯಾವುದೇ ಭಾಷೆ ಮತ್ತು ಪಾತ್ರವಾದರೂ ಆ ಪಾತ್ರವೇ ತಾವಾಗಿ ನಟಿಸುವ ಪ್ರತಿಭಾನ್ವಿತ ನಟ ಕಿಶೋರ್ ಜೊತೆ ‘ಸ್ನೇಹಲೋಕ’ ನಿರ್ದೇಶಕ ಎಸ್. ಮಹೇಂದರ್ ಕೈಜೋಡಿಸಿದ್ದಾರೆ. ಇಬ್ಬರ ಕಾಂಬಿನೇಷನ್ ಸಿನಿಮಾಗೆ ‘ಆಪರೇಷನ್ ಕೊಂಬುಡಿಕ್ಕಿ’ ಎಂಬ ವಿಭಿನ್ನ ಟೈಟಲ್ ಇಡಲಾಗಿದೆ.
Advertisement
ಈ ಸಿನಿಮಾದಲ್ಲಿ ಇಂದಿನ ಜನರೇಷನ್‌ಗೆ ಹೋಲುವ ವಿಭಿನ್ನ ಕಥೆಯನ್ನೇ ಎಸ್. ಮಹೇಂದರ್ ಹೆಣೆದಿದ್ದಾರೆ. ಕಥೆ ಕೇಳಿ ಥ್ರಿಲ್ ಆಗಿ ಈ ಚಿತ್ರಕ್ಕೆ ಕಿಶೋರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಚಿತ್ರವನ್ನು ಅದ್ಧೂರಿಯಾಗಿ ‘ಶಿವಾಜಿ ಸುರತ್ಕಲ್’ ನಿರ್ಮಾಪಕ ಅನುಪ್ ಹನುಮಂತೇಗೌಡ ನಿರ್ಮಾಣ ಮಾಡುತ್ತಿದ್ದಾರೆ. ಅದಷ್ಟೇ ಅಲ್ಲ, ಚಿತ್ರಕ್ಕೆ ‘ಕೆಜಿಎಫ್’ (KGF) ಖ್ಯಾತಿಯ ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡಲಿದ್ದಾರೆ.
Advertisement
Advertisement
ಸದ್ಯ ಕಿಶೋರ್ ಹೊಸ ಚಿತ್ರಕ್ಕೆ ಎಸ್.ಮಹೇಂದರ್ ನಿರ್ದೇಶನ ಮಾಡುತ್ತಿರುವ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಈ ಸಿನಿಮಾ ಕುರಿತು ಫ್ಯಾನ್ಸ್‌ಗೆ ನಿರೀಕ್ಷೆಯಿದೆ.