ಮಾಸ್ಕೋ: ರಷ್ಯಾ (Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಹತ್ಯೆಗೆ ಯತ್ನ ನಡೆದಿದ್ದು, ಪುಟಿನ್ ಪ್ರಯಾಣಿಸುತ್ತಿದ್ದ ಕಾರ್ ಮೇಲೆ ಬಾಂಬ್ ದಾಳಿ (Bomb Attack) ನಡೆದಿದೆ.
ಅದೃಷ್ಟವಶಾತ್ ಪುಟಿನ್ ಅಪಾಯದಿಂದ ಪಾರಾಗಿದ್ದಾರೆ. ಪುಟಿನ್ ತಮ್ಮ ನಿವಾಸಕ್ಕೆ ವಾಪಸ್ ಆಗುವಾಗ, ಅವರು ಪ್ರಯಾಣಿಸುತ್ತಿದ್ದ ಲಿಮೋಸಿನ್ ಕಾರ್‌ನ (Car) ಮುಂದಿನ ಎಡಗಡೆಯ ಚಕ್ರ ಸ್ಫೋಟಗೊಂಡಿದೆ. ಕೂಡಲೇ ಭದ್ರತಾ ಸಿಬ್ಬಂದಿ (Security Guard) ಅಧ್ಯಕ್ಷರನ್ನು ಕಾರಿಂದ ಹೊರಗೆ ಎಳೆದು, ಬೆಂಗಾವಲು ಪಡೆಯಲ್ಲಿದ್ದ ಹೆಚ್ಚುವರಿ ಕಾರಿನಲ್ಲಿ ಕಳುಹಿಸಿ ಕೊಟ್ಟಿದ್ದಾರೆ. ಇದನ್ನೂ ಓದಿ: ಸರಗಳ್ಳತನಕ್ಕೆ ಯತ್ನಿಸಿ ಸಿಕ್ಕಿಬಿದ್ದ ಕಳ್ಳಿ – ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ರು
Advertisement
Advertisement
ಅಧ್ಯಕ್ಷರ ಭದ್ರತೆ ವಿಚಾರದಲ್ಲಿ ರಾಜಿಯಾದ ಆರೋಪದ ಮೇಲೆ ಪುಟಿನ್ ಭದ್ರತಾ ಪಡೆಯ ಕೆಲವರನ್ನು ಬಂಧಿಸಲಾಗಿದೆ. ಇನ್ನೂ ಕೆಲವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಬೇರೊಬ್ಬನ ಜೊತೆ ಸಂಗ – ಪ್ರಿಯಕರನಿಂದ ಮಹಿಳೆ ಹತ್ಯೆ
Advertisement
Advertisement
ಇದೇ ಹೊತ್ತಲ್ಲಿ, ಕಾಕತಾಳಿಯ ಎಂಬಂತೆ ಉಕ್ರೇನ್ ಅಧ್ಯಕ್ಷರ ಕಾರು ಅಪಘಾತಕ್ಕೀಡಾಗಿದೆ. ಅಧ್ಯಕ್ಷರ ಕಾರಿಗೆ ಪ್ಯಾಸೆಂಜರ್ ಕಾರೊಂದು ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಸಣ್ಣ ಪುಟ್ಟ ಗಾಯಗಳೊಂದಿಗೆ ಝೆಲೆನ್ಸ್ಕಿ (Volodymyr Zelensky) ಪಾರಾಗಿದ್ದಾರೆ. ಘಟನೆ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.