ChikkaballapurCrimeDistrictsKarnatakaLatestLeading NewsMain Post

ಸರಗಳ್ಳತನಕ್ಕೆ ಯತ್ನಿಸಿ ಸಿಕ್ಕಿಬಿದ್ದ ಕಳ್ಳಿ – ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ರು

ಚಿಕ್ಕಬಳ್ಳಾಪುರ: ಯುವಕರು, ಪುರುಷರಿಂದಲೇ ಸರಗಳ್ಳತನಕ್ಕೆ (Chain Snatch) ಯತ್ನಿಸುತ್ತಿದ್ದ ದೃಶ್ಯಗಳು ಕಂಡು ಬರುವುದು ಸಾಮಾನ್ಯ. ಆದರೆ ಈಗ ಮಹಿಳೆಯೊಬ್ಬಳು (Women) ಸರ ಕದಿಯಲು ಯತ್ನಿಸಿ, ಗ್ರಾಮಸ್ಥರಿಂದಲೇ ಗೂಸಾ ತಿಂದಿರುವ ಘಟನೆ ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯಲ್ಲಿ ನಡೆದಿದೆ.

ದೊಡ್ಡಬಳ್ಳಾಪುರ ತಾಲ್ಲೂಕಿನ ಕನಸವಾಡಿ ಗ್ರಾಮದಲ್ಲಿ ವೃದ್ಧೆಯ ಬಳಿ ಮಾಂಗಲ್ಯ ಸರ ಕಸಿದು ಪರಾರಿಯಾಗಲು ಯತ್ನಿಸಿ ಸಿಕ್ಕಿಬಿದ್ದ ಕಳ್ಳಿಗೆ ಗ್ರಾಮಸ್ಥರೇ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ (Police) ಒಪ್ಪಿಸಿದ್ದಾರೆ. ಸರಗಳ್ಳಿಯನ್ನು ನಂದಿನಿ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ವಿರೋಧದ ಮಧ್ಯೆ ಮತಾಂತರ ನಿಷೇಧ ಮಸೂದೆ ಅಂಗೀಕಾರ

crime

ಮಧುರೈ-ಹೆಸರುಘಟ್ಟ ರಸ್ತೆಯಲ್ಲಿ ಬೆಳಿಗ್ಗೆಯಿಂದಲೂ ಬೈಕ್ (Bike) ಸವಾರನೊಂದಿಗೆ ಮಹಿಳೆ ಸುತ್ತಾಡುತ್ತಿದ್ದಳು. ನಂತರ ಕನಸವಾಡಿ ಗ್ರಾಮದಲ್ಲಿ ವೃದ್ಧೆಯ ಮಾಂಗಲ್ಯ ಸರಕ್ಕೆ ಕೈ ಹಾಕಿ ಕಿತ್ತುಕೊಳ್ಳಲು ಯತ್ನಿಸಿ, ಬೈಕ್‌ನಿಂದ ಕೆಳಕ್ಕೆ ಬಿದ್ದಿದ್ದಾಳೆ. ಈ ವೇಳೆ ಬೈಕ್ ಸವಾರ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಸಿಕ್ಕಿಬಿದ್ದ ಸರಗಳ್ಳಿಗೆ ಗ್ರಾಮಸ್ಥರು ಥಳಿಸಿ, ದೊಡ್ಡಬೆಳವಂಗಲ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಪ್ರೇಮ್-ಧ್ರುವ ಹೊಸ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಲಿದ್ದಾರೆ ತೌಫಿಕ್ ಖುರೇಷಿ

ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ (FIR) ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Live Tv

Leave a Reply

Your email address will not be published.

Back to top button