ಶಿಮ್ಲಾ: ಅತ್ತ ಉಕ್ರೇನ್ ಮೇಲೆ ರಷ್ಯಾ ಯುದ್ಧ ನಡೆಸುತ್ತಿದ್ದರೆ, ಇತ್ತ ಭಾರತದಲ್ಲಿ ಉಕ್ರೇನ್ ಯುವತಿ ಹಾಗೂ ರಷ್ಯಾ ಯುವಕ ಸಪ್ತಪದಿ ತುಳಿದಿದ್ದಾರೆ. ಹಿಂದೂ ಸಂಪ್ರದಾಯದಂತೆ ಇಬ್ಬರೂ ಮದುವೆಯಾಗಿದ್ದಾರೆ.
ಇಸ್ರೇಲ್‌ನಲ್ಲಿ ನೆಲೆಸಿರುವ ರಷ್ಯಾದ ಸೆರ್ಗೆಯ್ ನೊವಿಕೋವ್ ಅವರು ತಮ್ಮ ಗೆಳತಿ ಉಕ್ರೇನ್‌ನ ಎಲೋನಾ ಬ್ರಮೋಕಾ ಅವರನ್ನು ಹಿಮಾಚಲ ಪ್ರದೇಶದ ಧರ್ಮಶಾಲಾ ಬಳಿಯ ದಿವ್ಯ ಆಶ್ರಮ ಖರೋಟಾದಲ್ಲಿ ಮಂಗಳವಾರ ಸನಾತನ ಧರ್ಮದ ಸಂಪ್ರದಾಯಗಳ ಪ್ರಕಾರ ವಿವಾಹವಾದರು. ಇದನ್ನೂ ಓದಿ: 750 ಶಾಲಾ ವಿದ್ಯಾರ್ಥಿನಿಯರಿಂದ ತಯಾರಾಯ್ತು ಆಜಾದಿ ಸ್ಯಾಟಲೈಟ್
Advertisement
Advertisement
ಈ ಜೋಡಿ ಭಾರತ ಸಂಪ್ರದಾಯದ ಉಡುಗೆ ತೊಟ್ಟು ವಿವಾಹವಾದರು. ಮದುವೆ ಸಂಭ್ರಮಕ್ಕೆ ಸ್ಥಳೀಯ ಜನತೆ ಸಾಕ್ಷಿಯಾದರು. ಅಲ್ಲದೇ ಹಿಮಾಚಲ ಪ್ರದೇಶದ ಜಾನಪದ ಹಾಡುಗಳಿಗೆ ನೃತ್ಯ ಮಾಡಿ ಎಲ್ಲರೂ ಸಂಭ್ರಮಿಸಿದರು.
Advertisement
ಸೆರ್ಗೆಯ್ ನೊವಿಕೋವ್ ಮತ್ತು ಎಲೋನಾ ಬ್ರಮೋಕಾ ಕಳೆದ ಎರಡು ವರ್ಷಗಳಿಂದ ಸಂಬಂಧ ಹೊಂದಿದ್ದರು. ರಷ್ಯಾ ಮತ್ತು ಉಕ್ರೇನ್ ನಡುವಿನ ಭೀಕರ ಯುದ್ಧದ ನಡುವೆಯೂ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿದರು. ಹಿಂದೂ ಸಂಪ್ರದಾಯದಂತೆ ಮದುವೆಯಾಗಲು ಒಪ್ಪಿ ಧರ್ಮಶಾಲಾದಲ್ಲಿ ಸಪ್ತಪದಿ ತುಳಿದಿದ್ದಾರೆ. ಇದನ್ನೂ ಓದಿ: ಆಜಾದಿ ಕಾ ಅಮೃತ ಮಹೋತ್ಸವಕ್ಕೆ ಉಗ್ರರ ಕರಿ ನೆರಳು – ಕೆಂಪುಕೋಟೆಯ ಸುತ್ತ 1,000 ಅಧಿಕ ಸಿಸಿಟಿವಿ ಕ್ಯಾಮೆರಾ
Advertisement
ಸೆರ್ಗೆಯ್ ಮತ್ತು ಎಲೋನಾ ಕಳೆದ ಒಂದು ವರ್ಷದಿಂದ ಧರ್ಮಶಾಲಾ ಬಳಿಯ ಧರ್ಮಕೋಟ್‌ನಲ್ಲಿ ತಂಗಿದ್ದರು. ನಮ್ಮ ಪಂಡಿತ್ ರಮಣ್ ಶರ್ಮರು ಇವರ ವಿವಾಹವನ್ನು ನೆರವೇರಿಸಿದರು. ಸನಾತನ ಧರ್ಮದ ಸಂಪ್ರದಾಯಗಳ ಪ್ರಕಾರ ವಿವಾಹ ನಡೆಸಿಕೊಟ್ಟರು ದಿವ್ಯ ಆಶ್ರಮ ಖರೋಟಾದ ಪಂಡಿತ್ ಸಂದೀಪ್ ಶರ್ಮಾ ತಿಳಿಸಿದ್ದಾರೆ.