ಕೀವ್: ಉಕ್ರೇನ್ ನಗರವನ್ನು ಕೈವಶ ಮಾಡಲೇಬೇಕೆಂದು ಹಠಕ್ಕೆ ಬಿದ್ದಿರುವ ರಷ್ಯಾ ಈಗ ಖರ್ಸನ್ ನಗರವನ್ನು ವಶಕ್ಕೆ ಪಡೆದಿದೆ. ನಗರವನ್ನು ವಶ ಪಡಿಸಿಕೊಳ್ಳಲು ಈಗ ಸರ್ಕಾರಿ ಕಟ್ಟಡದ ಮೇಲೆ ಭಾರೀ ಪ್ರಮಾಣದಲ್ಲಿ ದಾಳಿ ನಡೆಸುತ್ತಿದೆ. ಹೆರಿಗೆ ಆಸ್ಪತ್ರೆ, ಕೀವ್ ಸೇನಾ ಅಕಾಡಮಿ, ಪೊಲೀಸ್ ಹೆಡ್‍ಕ್ವಾಟರ್ಸ್ ಸೇರಿ ಉಕ್ರೇನ್‍ನ ಮೇಲೆ ರಷ್ಯಾ ಏಕಕಾಲದಲ್ಲಿ ಮೂರು ಕಡೆ ದಾಳಿ ಮಾಡಿದೆ. ದಾಳಿಯಲ್ಲಿ 21 ಜನರು ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಉಕ್ರೇನ್‍ನ ಮೇಲೆ ರಷ್ಯಾದ ಆಕ್ರಮಣ ಇಂದು 7ನೇ ದಿನಕ್ಕೆ ಕಾಲಿಟ್ಟಿದೆ. ರಷ್ಯಾ ದಾಳಿಗೆ ಉಕ್ರೇನ್‍ನ ಪ್ರಮುಖ ರಾಜ್ಯಗಳಾದ ಕೀವ್ ಮತ್ತು ಖಾರ್ಕಿವ್ ನಲುಗಿ ಹೋಗಿವೆ. ಇಂದು ರಷ್ಯಾ ಏಕಕಾಲದಲ್ಲಿ 3 ಕಡೆ ವೈಮಾನಿಕ ದಾಳಿ ನಡೆಸಿದೆ. ಕೀವ್, ಖಾರ್ಕಿವ್, ಖೇರ್ಸನ್‍ನಲ್ಲಿ ರಾಕೆಟ್, ಕ್ಷಿಪಣಿಗಳ ದಾಳಿ ನಡೆಸಿದೆ. ಏರ್‌ಪೋರ್ಟ್, ಝಿಟೋಮಿರ್ ಹೆರಿಗೆ ಆಸ್ಪತ್ರೆ, ಮಿಲಿಟರಿ ಅಕಾಡಮಿ, ಪೊಲೀಸ್ ಹೆಡ್‍ಕ್ವಾಟರ್ಸ್‍ಗಳ ಮೇಲೆ ದಾಳಿ ನಡೆಸಿದೆ. ದಾಳಿ ವೇಳೆ 21ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದು, 112 ಜನರು ಗಾಯಗೊಂಡಿದ್ದಾರೆ. ಝಿಟೋಮಿರ್ ಹೆರಿಗೆ ಆಸ್ಪತ್ರೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, 21 ಜನರಿಗೆ ಗಂಭೀರ ಗಾಯಗಳಾಗಿವೆ.
ಖೇರ್ಸನ್ ಏರ್‌ಪೋರ್ಟ್‍ನಲ್ಲಿ ಕ್ಷಿಪಣಿ ದಾಳಿ ಹಾಗೂ ಕೀವ್ ಸೆಂಟ್ರಲ್ ರೇಲ್ವೆ ಸ್ಟೇಶನ್‍ನಲ್ಲಿ ಗುಂಡಿನ ದಾಳಿ ನಡೆದಿದೆ. ಅಷ್ಟೇ ಅಲ್ಲದೇ ಜಲ ಮಾರ್ಗದಲ್ಲೂ ದಾಳಿ ತೀವ್ರಗೊಳಿಸಿದ್ದು, ಕಪ್ಪು ಸಮುದ್ರದಲ್ಲಿ ಸೇನೆಯನ್ನು ಹೆಚ್ಚಳ ಮಾಡಿದೆ. ಇದನ್ನೂ ಓದಿ: ಪಕ್ಕದಲ್ಲಿ ಬಾಂಬ್ ಬಿದ್ದರೂ ಊಟ, ವಸತಿ ನೀಡುತ್ತಿದೆ ಭಾರತೀಯ ರೆಸ್ಟೋರೆಂಟ್
ಈಗಾಗಲೇ ರಷ್ಯಾ ಪಡೆಗಳು ಉಕ್ರೇನ್‍ನ ಖೆರ್ಸನ್ ನಗರ ವಶಪಡಿಸಿಕೊಂಡಿದೆ. ನಗರದ ರೈಲ್ವೆ ನಿಲ್ದಾಣ ಮತ್ತು ಬಂದರು ವಶಕ್ಕೆ ಪಡೆದಿದೆ. ಇಡೀ ನಗರದ ಮೇಲೆ ಅಸ್ತಿತ್ವ ಸಾಧಿಸುತ್ತಿದ್ದಾರೆ. ಕೀವ್, ಚೆರ್ನಿಹಿವ್, ಒಬ್ಲಾಸ್ಟ್‍ನ ಪೈರಿಯಾಟಿನ್ ಮತ್ತು ಮೈರೋರೋಡ್ ನಗರಗಳಿಗೆ ರಷ್ಯಾ ಪಡೆಗಳು ಬಂಕರ್‌ಗೆ ತೆರಳುವಂತೆ ಜನರಿಗೆ ಸೈರನ್ ಮೂಲಕ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ರಷ್ಯಾದಲ್ಲಿ ಆನ್‍ಲೈನ್ ಮಾರಾಟ ಸ್ಥಗಿತಗೊಳಿಸಿದ ಆಪಲ್