ಮಾಸ್ಕೋ: ಆಪಲ್ ಕಂಪನಿ ರಷ್ಯಾದಲ್ಲಿ ಐಫೋನ್, ಐಪ್ಯಾಡ್, ಮ್ಯಾಕ್ ಹಾಗೂ ಇತರ ಹಾರ್ಡ್‍ವೇರ್ ಉತ್ಪನ್ನಗಳ ಮಾರಾಟವನ್ನು ಸ್ಥಗಿತಗೊಳಿಸಿದೆ.
ವಾರದ ಹಿಂದೆ ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡಲು ಪ್ರಾರಂಭಿಸಿದಾಗಿನಿಂದ ಹಲವು ಕಂಪನಿಗಳು ಒಂದೊಂದಾಗಿಯೇ ರಷ್ಯಾದ ಕೈ ಬಿಡುತ್ತಿವೆ. ಆಪಲ್ ಹಿಂದೆ ರಷ್ಯಾದಲ್ಲಿ ಆಪಲ್ ಪೇಯನ್ನು ಸ್ಥಗಿತಗೊಳಿಸಿತ್ತು. ರಷ್ಯಾದ ಹೊರಗಿನ ದೇಶಗಳಲ್ಲಿ ಸ್ಪುಟ್ನಿಕ್ ಹಾಗೂ ಆರ್‌ಟಿ ನ್ಯೂಸ್‍ಗಳಂತಹ ಅಪ್ಲಿಕೇಶನ್‍ಗಳನ್ನೂ ಆಪ್ ಸ್ಟೋರ್‌ನಿಂದ ತೆಗೆದು ಹಾಕಲಾಗಿತ್ತು. ಇದೀಗ ಲೈವ್ ಟ್ರಾಫಿಕ್ ಅನ್ನು ನಿಷ್ಕ್ರಿಯಗೊಳಿಸುವ ಮೂಲಕ ಪರೋಕ್ಷವಾಗಿ ಉಕ್ರೇನ್‍ಗೆ ಬೆಂಬಲ ನೀಡುತ್ತಿದೆ. ಇದನ್ನೂ ಓದಿ: IGTV ಯನ್ನು ಮುಚ್ಚಲಿದೆ ಇನ್‍ಸ್ಟಾಗ್ರಾಮ್
Advertisement
Advertisement
ಆಪಲ್ ರಷ್ಯಾದಲ್ಲಿ ಎಲ್ಲಾ ಆನ್‍ಲೈನ್ ಉತ್ಪನ್ನಗಳ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದೆ. ಆಪಲ್‍ನ ರಷ್ಯನ್ ವೆಬ್‍ಸೈಟ್ ಕಾರ್ಯನಿರ್ವಹಿಸುತ್ತಿದ್ದರೂ ಆನ್‍ಲೈನ್ ಸ್ಟೋರ್ ಅನ್ನು ರಷ್ಯಾದಲ್ಲಿ ಮುಚ್ಚಲಾಗಿದೆ ಎಂದು ಆಪಲ್ ತಿಳಿಸಿದೆ. ಇದನ್ನೂ ಓದಿ: ಕಾಲಿಂದ ಕುಡಿಕೆಯೊದ್ದ ರಾಣಾ: ಪವರ್ ಸ್ಟಾರ್ ಪವನ್ ಕಲ್ಯಾಣ್ ಸಿನಿಮಾ ವಿರುದ್ಧ ದೂರು ದಾಖಲು
Advertisement
ಆಪಲ್ ಕಳೆದ ವಾರದಿಂದ ರಷ್ಯಾಗೆ ರಫ್ತುಗಳನ್ನು ನಿಲ್ಲಿಸಿದೆ. ಉಕ್ರೇನ್ ಮೇಲೆ ನಡೆಯುತ್ತಿರುವ ದಾಳಿಗೆ ವಿರೋಧವಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಆಪಲ್ ತಿಳಿಸಿದೆ. ಆಪಲ್ ಮಾತ್ರವಲ್ಲದೇ ಗೂಗಲ್, ಮೆಟಾ, ಹಾಗೂ ನೆಟ್‍ಫ್ಲಿಕ್ಸ್ ನಂತಹ ದೈತ್ಯ ಟೆಕ್ ಕಂಪನಿಗಳು ರಷ್ಯಾದಲ್ಲಿ ತಮ್ಮ ಉತ್ಪನ್ನಗಳಿಗೆ ವಿವಿಧ ರೀತಿಯ ನಿರ್ಬಂಧಗಳನ್ನು ಹೇರಿವೆ.