ವಿಶ್ವಸಂಸ್ಥೆ: ರಷ್ಯಾ (Russia) ಉಕ್ರೇನ್ (Ukraine) ಮೇಲೆ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಯನ್ನು ತಕ್ಷಣವೇ ಕೊನೆಗೊಳಿಸಿ ಶಾಂತಿಯುತ ಮಾತುಕತೆಗೆ ಮರಳುವುದು ಇದೀಗ ಅಗತ್ಯವಾಗಿದೆ ಎಂದು ಭಾರತ ವಿಶ್ವಸಂಸ್ಥೆಯಲ್ಲಿ (UN) ತಿಳಿಸಿದೆ.
ರಷ್ಯಾ ಉಕ್ರೇನ್ ಮೇಲೆ ಪರಮಾಣು ಶಸ್ತ್ರಾಸ್ತ್ರವನ್ನು ಬಳಸುವ ಸಾಧ್ಯತೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಭಾರತ, ಈಗಾಗಲೇ ನರೇಂದ್ರ ಮೋದಿಯವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಇದು ಯುದ್ಧದ ಸಮಯವಲ್ಲ ಎಂದು ಹೇಳಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ (S Jaishankar) ತಿಳಿಸಿದ್ದಾರೆ. ಇದನ್ನೂ ಓದಿ: ಮೋದಿ ದೇಶದ ಹೊರಗೆ ಎಷ್ಟು ಆಸ್ತಿ ಮಾಡಿದ್ದಾರೆ?: ಪಾಕ್ ಮಾಜಿ ಪ್ರಧಾನಿ
Advertisement
Advertisement
ರಷ್ಯಾ ಉಕ್ರೇನ್‌ನ ಸಂಘರ್ಷ ಇಡೀ ವಿಶ್ವಕ್ಕೆ ಆಳವಾದ ಕಾಳಜಿಯ ವಿಷಯವಾಗಿದೆ. ಮುಖ್ಯವಾಗಿ ಪರಮಾಣು ದಾಳಿಯ ಸಾಧ್ಯತೆ ಭವಿಷ್ಯದ ದೃಷ್ಟಿಕೋನಕ್ಕೆ ಇನ್ನಷ್ಟು ಭೀತಿಯ ಸಂಗತಿಯಾಗಿದೆ. ಆದರೆ ಭಾರತ ಇದನ್ನು ಖಂಡಿಸಿಲ್ಲ. ಇದನ್ನು ಈ ಕೂಡಲೇ ರಾಜತಾಂತ್ರಿಕತೆ ಹಾಗೂ ಮಾತುಕತೆಯ ಮೂಲಕ ಪರಿಹರಿಸಬೇಕು ಎಂಬುದೇ ಭಾರತದ ಉದ್ದೇಶ ಎಂದು ತಿಳಿಸಿದರು. ಇದನ್ನೂ ಓದಿ: 18-65 ವಯಸ್ಸಿನ ಪುರುಷರಿಗೆ ಟಿಕೆಟ್ ಮಾರಾಟ ನಿಲ್ಲಿಸಲು ರಷ್ಯಾದ ಏರ್‌ಲೈನ್ಸ್ ಆದೇಶ