InternationalLatestLeading NewsMain Post

ಮೋದಿ ದೇಶದ ಹೊರಗೆ ಎಷ್ಟು ಆಸ್ತಿ ಮಾಡಿದ್ದಾರೆ?: ಪಾಕ್ ಮಾಜಿ ಪ್ರಧಾನಿ

ಇಸ್ಲಾಮಾಬಾದ್: ಆರ್ಥಿಕ ಬಿಕ್ಕಟ್ಟು (Pakistan Economic Crisis) ಎದುರಿಸುತ್ತಿರುವ ಪಾಕ್ ಸರ್ಕಾರದ ವಿರುದ್ಧ ಸತತ ವಾಗ್ದಾಳಿ ನಡೆಸುತ್ತಿರುವ ಮಾಜಿ ಪ್ರಧಾನಿ (Prime Minister) ಇಮ್ರಾನ್ ಖಾನ್, ಇದೀಗ ಪಾಕಿಸ್ತಾನ್ ಮುಸ್ಲಿಂ ಲೀಗ್ (Pakistan Muslim League) ನಾಯಕನ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಭ್ರಷ್ಟಾಚಾರದ ವಿಚಾರದಲ್ಲಿ ಮುಸ್ಲಿಂ ಲೀಗ್ ನಾಯಕ ನವಾಜ್ ಷರೀಫ್ (Nawaz Shariff) ಅವರನ್ನ ಟೀಕಿಸಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran khan), ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರೊಂದಿಗೆ ಹೋಲಿಕೆ ಮಾಡಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷಾ ಕಡ್ಡಾಯ ಬಳಕೆಗೆ ವಿಧಾನಸಭೆಯಲ್ಲಿ ವಿಧೇಯಕ ಮಂಡನೆ – ದಂಡ ವಿಧಿಸಲು ಅವಕಾಶ

ಸಭೆಯೊಂದರಲ್ಲಿ ಮಾತನಾಡಿದ ಇಮ್ರಾನ್ ಖಾನ್ (Imran Khan), ಒಂದು ದೇಶದಲ್ಲಿ ಕಾನೂನು (Law) ನಿಯಮ ಇಲ್ಲದೇ ಹೋದರೆ ಭ್ರಷ್ಟಾಚಾರ ಹೆಚ್ಚಾಗುತ್ತದೆ, ಅದಕ್ಕೆ ಹೂಡಿಕೆಗಳು ಸಿಗುವುದಿಲ್ಲ. ತಮ್ಮ ದೇಶದ ಹೊರಗೆ ಕೋಟ್ಯಂತರ ಮೌಲ್ಯದ ಆಸ್ತಿಗಳನ್ನು ಹೊಂದಿರುವ ಒಬ್ಬನೇ ಒಬ್ಬ ನಾಯಕನಿದ್ದರೂ ಹೇಳಿ ನೋಡೋಣ. ನೆರೆಯ ರಾಷ್ಟ್ರ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಹೊರಗೆ ಎಷ್ಟು ಆಸ್ತಿ (Properties) ಹೊಂದಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಪಾಕ್‌ನ ಮಾಜಿ ಪ್ರಧಾನಿ (Pakistan PM)ನವಾಜ್ ಷರೀಫ್ (Nawaz Shariff) ಅವರಂತೆ ವಿದೇಶಗಳಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಗಳನ್ನು ಹೊಂದಿರುವ ರಾಜಕಾರಣಿ ಅಥವಾ ನಾಯಕ ಈ ಜಗತ್ತಿನಲ್ಲಿ ಮತ್ತೊಬ್ಬರಿಲ್ಲ. ಷರೀಫ್ ವಿದೇಶದಲ್ಲಿ ಎಷ್ಟು ಆಸ್ತಿ ಮತ್ತು ಸಂಪತ್ತನ್ನು ಹೊಂದಿದ್ದಾರೆ ಅನ್ನೋದನ್ನ ಕಲ್ಪನೆ ಕೂಡ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಗಾಗಿ ಹನುಮಾನ್ ದೇವಾಲಯ ಸ್ಥಳಾಂತರ – ಹಿಂದೂ ಸಂಘಟನೆಗಳ ವಿರೋಧ

ಅವಿಶ್ವಾದ ನಿರ್ಣಯದಿಂದ ಅಧಿಕಾರ ಕಳೆದುಕೊಂಡ ಇಮ್ರಾನ್ ಖಾನ್ (Imran Khan) ಸತತವಾಗಿ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ಜೊತೆಗೆ ಭಾರತದತ್ತ ಹೆಚ್ಚಿನ ಒಲವು ತೋರುತ್ತಿದ್ದಾರೆ. ಭಾರತದ ಸ್ವತಂತ್ರ ವಿದೇಶಾಂಗ ನೀತಿ ಮತ್ತು ಪಶ್ಚಿಮ ದೇಶಗಳಿಂದ ಭಾರಿ ಒತ್ತಡಗಳಿದ್ದರೂ ರಿಯಾಯಿತಿ ದರದಲ್ಲಿ ರಷ್ಯಾದಿಂದ (Russia) ತೈಲ ಖರೀದಿಸುತ್ತಿರುವ ಭಾರತದ ದಿಟ್ಟತನವನ್ನು ಶ್ಲಾಘಿಸಿದ್ದಾರೆ.

Live Tv

Leave a Reply

Your email address will not be published.

Back to top button