Bengaluru CityKarnatakaLatestMain Post

ಕನ್ನಡ ಭಾಷಾ ಕಡ್ಡಾಯ ಬಳಕೆಗೆ ವಿಧಾನಸಭೆಯಲ್ಲಿ ವಿಧೇಯಕ ಮಂಡನೆ – ದಂಡ ವಿಧಿಸಲು ಅವಕಾಶ

ಬೆಂಗಳೂರು: ಕರ್ನಾಟಕದಲ್ಲಿ (Karnataka) ಕನ್ನಡ (Kannada) ಭಾಷೆ ಬಳಕೆ ಕಡ್ಡಾಯ ಮಾಡಲು ರಾಜ್ಯ ಸರ್ಕಾರ ಕಾಯ್ದೆ ತಂದಿದೆ. ಕಳೆದ ವಾರ ವಿಧಾನಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಘೋಷಿಸಿದಂತೆ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ತರಲಾಗಿದೆ. ವಿಧಾನಸಭೆಯಲ್ಲಿ ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ (Sunil Kumar) ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ 2022 ಅನ್ನು ಮಂಡಿಸಿದರು.

ಮಸೂದೆ ಪ್ರಕಾರ ನ್ಯಾಯಾಲಯ, ಬ್ಯಾಂಕುಗಳು ಸೇರಿದಂತೆ ಸರ್ಕಾರದ ಸಂಸ್ಥೆಗಳು, ಅಂಗ ಸಂಸ್ಥೆಗಳಲ್ಲಿಯೂ ಕನ್ನಡ ಭಾಷಾ ಬಳಕೆ ಕಡ್ಡಾಯಗೊಳಿಸಿದ್ದು, ಉಲ್ಲಂಘನೆ ಮಾಡಿದ್ರೆ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಅಷ್ಟೇ ಅಲ್ಲ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ಎಲ್ಲ ಕೈಗಾರಿಕೆಗಳಿಗೂ ತೆರಿಗೆ ವಿನಾಯ್ತಿ ಪ್ರೋತ್ಸಾಹ ನೀಡಲು ವಿಧೇಯಕದಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ಕನ್ನಡದಲ್ಲೂ ಉದ್ಯೋಗ ಪೋರ್ಟಲ್ ಅನ್ನು ತೆರೆಯುವಂತೆ, ಕನ್ನಡ ಭಾಷಾ ಕಲಿಸಲು ಕನ್ನಡ ಕಲಿಕಾ ಘಟಕ ಸ್ಥಾಪನೆಗೂ ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಗಾಗಿ ಹನುಮಾನ್ ದೇವಾಲಯ ಸ್ಥಳಾಂತರ – ಹಿಂದೂ ಸಂಘಟನೆಗಳ ವಿರೋಧ

ವಿಧೇಯಕದ ಹೈಲೈಟ್ಸ್:
ಉನ್ನತ ತಾಂತ್ರಿಕ/ ವೃತ್ತಿ ಶಿಕ್ಷಣದಲ್ಲಿ, ಕನ್ನಡವನ್ನು ಒಂದು ಭಾಷೆಯನ್ನಾಗಿ ಪರಿಚಯಿಸುವುದು. ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿದವರಿಗೆ ಉನ್ನತ, ತಾಂತ್ರಿಕ ಮತ್ತು ವೃತ್ತಿ ಶಿಕ್ಷಣದಲ್ಲಿ ಮೀಸಲಾತಿ ಒದಗಿಸುವುದು. ರಾಜ್ಯ ಸರ್ಕಾರ, ರಾಜ್ಯದಲ್ಲಿನ ಸ್ಥಳೀಯ ಪ್ರಾಧಿಕಾರಗಳು, ಶಾಸನಬದ್ಧ ಮತ್ತು ಶಾಸನೇತರ ಸಂಸ್ಥೆಗಳು ಮತ್ತು ಸಹಕಾರಿ ಸಂಘಗಳು ಹಾಗೂ ಇತರ ಸಂಘಗಳಲ್ಲಿ ಉದ್ಯೋಗವನ್ನು ಪಡೆಯಲು ಕನ್ನಡ ಭಾಷೆಯನ್ನು ಅತ್ಯವಶ್ಯಕ ಭಾಷೆ ಎಂದು ಪರಿಗಣಿಸುವುದು. ಅಧೀನ ನ್ಯಾಯಾಲಯಗಳಲ್ಲಿ, ನ್ಯಾಯಾಧೀಕರಣಗಳಲ್ಲಿ, ಬ್ಯಾಂಕುಗಳಲ್ಲಿ, ಮತ್ತು ಇತರ ಹಣಕಾಸು ಸಂಸ್ಥೆಗಳಲ್ಲಿ ಕನ್ನಡ ಭಾಷೆಯನ್ನು ಬಳಸುವುದು. ಕನ್ನಡ ಭಾಷೆಯ ವ್ಯಾಪಕ ಬಳಕೆ ಮತ್ತು ಪ್ರಚಾರಕ್ಕಾಗಿ ಸಾಮಾನ್ಯ ಕ್ರಮಗಳನ್ನು ತೆಗೆದುಕೊಳ್ಳುವುದು. ಇದನ್ನೂ ಓದಿ: ದಸರಾ ಮಹೋತ್ಸವಕ್ಕೆ ರಾಷ್ಟ್ರಪತಿಗಳಿಗೆ ಅಧಿಕೃತ ಆಹ್ವಾನ

ಮಾಹಿತಿ ತಂತ್ರಜ್ಞಾನ ಮತ್ತು ತಂತ್ರಾಂಶ ಅಭಿವೃದ್ಧಿಯಲ್ಲಿ ಕನ್ನಡ ಭಾಷೆಯ ಬಳಕೆಗಾಗಿ ಕ್ರಮಗಳನ್ನು ತೆಗೆದುಕೊಳ್ಳುವುದು. ರಾಜ್ಯದಲ್ಲಿ ಅಧಿಸೂಚಿಸಿರುವ ಕೈಗಾರಿಕಾ ನೀತಿಯ ಪ್ರಕಾರ ಕನ್ನಡಿಗರಿಗೆ ಮೀಸಲಾತಿ ಒದಗಿಸುವ ಎಲ್ಲ ಕೈಗಾರಿಕೆಗಳು ಸರ್ಕಾರದಿಂದ ತೆರಿಗೆ ರಿಯಾಯತಿ ಇತರೆ ಸೌಲಭ್ಯಗಳನ್ನು ಪಡೆದುಕೊಳ್ಳುವ ಹಕ್ಕನ್ನು ನೀಡುವುದು. ಕನ್ನಡ ಭಾಷೆ ಕಾಯ್ದೆ ಅನುಷ್ಠಾನ ಮಾಡದಿದ್ದರೆ ಮೇಲ್ವಿಚಾರಣೆಗೆ ಅಧಿಕಾರ ಉಲ್ಲಂಘನೆಗಾಗಿ ದಂಡವನ್ನು ವಿಧಿಸಲು ಅವಕಾಶ. ಮೊದಲನೇ ಸಾರಿ ತಪ್ಪು ಮಾಡಿದ್ರೆ 5 ಸಾವಿರ ದಂಡ, ಎರಡನೇ ಸಾರಿ ತಪ್ಪು ಮಾಡಿದ್ರೆ 10 ಸಾವಿರ ದಂಡ, ಮೂರನೇ ಸಾರಿ ತಪ್ಪು ಮಾಡಿದ್ರೆ 20 ಸಾವಿರ ದಂಡ. ಕನ್ನಡದಲ್ಲೂ ಉದ್ಯೋಗ ಪೋರ್ಟಲ್ ತೆಗೆಯಬೇಕು. ಕನ್ನಡ ಭಾಷೆಯ ಯಾರಿಗೆ ಬಾರದವರಿಗೆ ಕನ್ನಡ ಕಲಿಕಾ ಘಟಕ ಸ್ಥಾಪಿಸಿ ಕನ್ನಡ ಭಾಷೆ ಪರಿಚಯಿಸಬೇಕು ಎಂಬ ನಿರ್ಣಯ ಮಾಡಲಾಗಿದೆ.

Live Tv

Leave a Reply

Your email address will not be published.

Back to top button