ಕೀವ್: ರಷ್ಯಾ ದಾಳಿಯಿಂದ ಉಕ್ರೇನ್ ತತ್ತರಿಸಿದೆ. ಈ ಮಧ್ಯೆ ಇಸ್ಕಾನ್ ದೇವಸ್ಥಾನವು ಅಗ್ಯವಿರುವ ಜನರಿಗೆ ದೇವಾಲಯದ ದ್ವಾರಗಳನ್ನು ತೆರೆದಿದೆ. ಉಕ್ರೇನ್‍ನಾದ್ಯಂತ ಇರುವ ಇಸ್ಕಾನ್ ದೇವಾಲಯಗಳು ಉಕ್ರೇನ್ ಜನರಿಗೆ ಸೇವೆ ಸಲ್ಲಿಸುತ್ತಿದೆ. ಅವರಿಗೆ ಆಹಾರ ಪೂರೈಕೆ ಮಾಡುವ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಸದ್ಯ ಇದರ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗುತ್ತಿದೆ.
ಈ ಬಗ್ಗೆ ಕೊಲ್ಕತ್ತಾದ ಇಸ್ಕಾನ್ ಉಪಾಧ್ಯಕ್ಷ ರಾಧಾರಾಮನ್ ದಾಸ್ ಮಾತನಾಡಿ, ಇಸ್ಕಾನ್‍ನ ಭಕ್ತರು ಹಾಗೂ ದೇವಾಲಯ ಸಮಿತಿಯೂ ಸಂಕಷ್ಟದಲ್ಲಿರುವವರಿಗೆ ಸೇವೆ ಸಲ್ಲಿಸಲು ಬದ್ಧವಾಗಿದೆ. ಕಷ್ಟದಲ್ಲಿರುವವರ ಸೇವೆಗಾಗಿ ನಮ್ಮ ದೇವಾಲಯದ ಬಾಗಿಲು ತೆರೆದಿದೆ ಎಂದು ತಿಳಿಸಿದರು.
Advertisement
When life gives u lemons make lemonade. This is what Sanatan Dharma has taught these ISKCON devotees in Kiev. And they r applying what they have learnt in these difficult times.
Our ISKCON temples all over #Ukraine is ready to serve those in need. U r welcome at our temples. pic.twitter.com/Adovo5GmdC
— Radharamn Das राधारमण दास (@RadharamnDas) February 26, 2022
Advertisement
ಉಕ್ರೇನ್‍ನಲ್ಲಿ ಇಸ್ಕಾನ್ 54 ಕ್ಕೂ ಅಧಿಕ ದೇವಾಲಯಗಳನ್ನು ಹೊಂದಿದೆ. ಕಷ್ಟದಲ್ಲಿರುವವರಿಗೆ ಯಾವುದೇ ರೀತಿಯಲ್ಲಿಯಾದರೂ ಸೇವೆ ಸಲ್ಲಿಸಲು ನಾವು ಪ್ರಯತ್ನಿಸುತ್ತೇವೆ ಎಂದರು. ಇದನ್ನೂ ಓದಿ: ಉಕ್ರೇನ್‍ನಿಂದ ಜೀವ ಉಳಿಸಿಕೊಂಡು ಬಂದಿರೋ ವಿದ್ಯಾರ್ಥಿಗಳಿಗೆ ಹೊಸ ಟೆನ್ಶನ್!
Advertisement
ISKCON has over 54 temples in Ukraine & our devotees & temples r committed to serve those in distress. Our doors r open for service. Hare Krishna!
To find nearest temples near you, please visit.https://t.co/iFnZQaPoqG pic.twitter.com/zlUGF84X9f
— Radharamn Das राधारमण दास (@RadharamnDas) February 26, 2022
Advertisement
ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರಿಂದ ಹಲವಾರು ಲೈಕ್ಸ್ ಹಾಗೂ ಕಾಮೆಂಟ್‍ಗಳ ಸುರಿಮಳೆಯೇ ಹರಿದು ಬರುತ್ತಿದೆ. ಒಟ್ಟಾರೆ ಜಾಗತಿಕ ಬಿಕ್ಕಟ್ಟಿನ ಸಮಯದಲ್ಲಿ ಜನರ ಜಾತಿ, ಧರ್ಮ ಮತ್ತು ಸಾಮಾಜಿಕ ಸ್ಥಾನಮಾನವನ್ನು ಲೆಕ್ಕಿಸದೇ ಇಸ್ಕಾನ್ ಆಹಾರವನ್ನು ಹಂಚಿರುವುದು ಮಾನವೀಯತೆಯನ್ನು ಎತ್ತಿ ತೋರಿಸುವಂತಿದೆ ಎಂದರೆ ತಪ್ಪಾಗಲಾರದು. ಇದನ್ನೂ ಓದಿ: ತಲೆಕೆಳಗಾದ ರಷ್ಯಾದ ಲೆಕ್ಕಾಚಾರ – ರಾಜಧಾನಿ ಕಿವ್ ಇನ್ನೂ ಕೈವಶವಾಗಿಲ್ಲ ಯಾಕೆ?