ಮಾಸ್ಕೋ: ಉಕ್ರೇನ್ (Ukraine) ವಿರುದ್ಧ ಸಮರ ಸಾರಿರುವ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರ ಆರೋಗ್ಯ (Health) ಮತ್ತಷ್ಟು ಕ್ಷೀಣಿಸುತ್ತಿದೆ. ದೇಹದ ಇತರ ಭಾಗಗಳು ಚುಚ್ಚುಮದ್ದು ತೆಗೆದುಕೊಳ್ಳಲು ಸ್ಪಂದಿಸದಂತಾಗಿದೆ ಎಂಬುದಾಗಿ ವೈದ್ಯರು (Doctors) ತಿಳಿಸಿದ್ದಾರೆ.
ಪುಟಿನ್ ದೇಹದ ಮೇಲೆ ವಿಚಿತ್ರ ಗುರುತುಗಳು ಪತ್ತೆಯಾಗಿದ್ದು, ಈ ಕುರಿತ ಫೋಟೋಗಳು ಜಾಲತಾಣದಲ್ಲಿ (Social Media) ಹರಿದಾಡುತ್ತಿವೆ. ಇದು ಆರೋಗ್ಯ ಕ್ಷೀಣಿಸಿರುವ ಬಗ್ಗೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಇದನ್ನೂ ಓದಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹತ್ಯೆಗೆ ಯತ್ನ
Advertisement
Advertisement
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ನಿವೃತ್ತ ಬ್ರಿಟಿಷ್ ಸೇನಾಧಿಕಾರಿ ಮತ್ತು ಹೌಸ್ ಆಫ್ ಲಾರ್ಡ್ಸ್ ಸದಸ್ಯ ರಿಚರ್ಡ್ ಡಾನಾಟ್, ಪುಟಿನ್ ಅವರ ಚಿತ್ರಗಳು ಅವರು ಎಷ್ಟು ಆರೋಗ್ಯವಾಗಿದ್ದಾರೆ ಎಂಬುದನ್ನೂ ಸೂಚಿಸುತ್ತದೆ. ಅವರ ಕೈಗಳ ಮೇಲ್ಬಾಗದಲ್ಲಿ ಕಪ್ಪು ಬಣ್ಣದ ಗುರುತುಗಳು ಕಾಣುತ್ತಿವೆ. ಅಲ್ಲದೇ ಪುಟಿನ್ ದೇಹದ ಇತರ ಭಾಗಗಳು ಇಂಜೆಕ್ಷನ್ (Injection) ತೆಗೆದುಕೊಳ್ಳಲು ಸ್ಪಂದಿಸುತ್ತಿಲ್ಲ. ಪುಟಿನ್ ಆರೋಗ್ಯವಾಗಿದ್ದಾರೆ, ಆದರೂ ಅವರ ಬಗ್ಗೆ ಎಚ್ಚರ ವಹಿಸಬೇಕಾದ ಅಗತ್ಯವಿದೆ ಎಂದು ರಿಚರ್ಡ್ ಡಾನಾಟ್ ಅವರು ಹೇಳಿದ್ದಾರೆ.
Advertisement
Advertisement
ಕ್ಯಾನ್ಸರ್ (Cancer) ಕಾಯಿಲೆಯಿಂದ ಬಳಲುತ್ತಿರುವ ರಷ್ಯಾ ಅಧ್ಯಕ್ಷ (Russia President) ಪುಟಿನ್ ಅವರ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು, ಹೆಚ್ಚೆಂದರೆ ಅವರಿನ್ನು 3 ವರ್ಷ ಬದುಕಬಹುದೆಂದು ವೈದ್ಯರು ಹೇಳಿರುವುದಾಗಿ ರಷ್ಯಾದ ಬೇಹುಗಾರಿಕಾ ಸಂಸ್ಥೆ ಎಫ್‌ಎಸ್‌ಬಿಯ ವರದಿ ಕೆಲ ದಿನಗಳ ಹಿಂದೆ ಹೇಳಿತ್ತು. ಇದನ್ನೂ ಓದಿ: ಭಾರತಕ್ಕೆ 5 ರನ್‍ಗಳ ರೋಚಕ ಗೆಲುವು – ಹರ್ಷ ತಂದ ಅರ್ಷದೀಪ್
ಪುಟಿನ್ ಅವರ ಕಣ್ಣಿನ ದೃಷ್ಟಿ ಗಂಭೀರವಾಗಿ ಹದಗೆಟ್ಟಿದೆ. ಅವರ ಬೆರಳುಗಳೂ ನಿಯಂತ್ರಿಸಲಾಗದಷ್ಟು ಅಲುಗಾಡತೊಡಗಿವೆ ಎಂದು ಗುಪ್ತಚರ ಇಲಾಖೆಯ ಮೂಲಗಳು ತಿಳಿಸಿದ್ದವು. ಬ್ರಿಟನ್ನಲ್ಲಿ ಪುಟಿನ್ ಹತ್ಯೆ ಮಾಡಲು ಸಂಚು ರೂಪಿಸಿರುವವರಿಗೆ ತಿಳಿಯದಂತೆ ಬಚ್ಚಿಡಲಾಗಿದೆ. ದುರ್ಬಲತೆಗೆ ಕಾರಣವಾಗುತ್ತದೆ ಎಂಬ ಭಯದಿಂದ ಗ್ಲಾಸ್ ಧರಿಸಲು ಪುಟಿನ್ ತಿರಸ್ಕರಿಸುತ್ತಿದ್ದಾರೆ ಎಂಬುದಾಗಿ ಗುಪ್ತಚರ ಇಲಾಖೆ ಮೂಲಗಳು ಮಾಧ್ಯಮಗಳಿಗೆ ತಿಳಿಸಿದ್ದವು.