ಕೀವ್/ಮಾಸ್ಕೋ: ರಷ್ಯಾಪಡೆಗಳು ಉಕ್ರೇನಿನ ಇಂಧನ ಮೂಲ ಸೌಕರ್ಯಗಳನ್ನು (Energy Infrastructure) ಗುರಿಯಾಗಿಸಿ ದಾಳಿ ನಡೆಸಿದ್ದು, ಏಕಾ-ಏಕಿ 100 ಕ್ಷಿಪಣಿಗಳನ್ನು ಉಡಾಯಿಸಿವೆ.
ಇದರಿಂದ ಉಕ್ರೇನಿನ (Ukraine) ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇದು ಅಕ್ಟೋಬರ್ 10 ಅಂದು ನಡೆಸಿದ ದಾಳಿಗಿಂತಲೂ ಮಾರಕವಾಗಿದೆ ಎಂದು ವಾಯುಪಡೆಯ ವಕ್ತಾರ ಯೂರಿ ಇಗ್ನಾಟ್ ಉಕ್ರೇನಿಯನ್ ತಿಳಿಸಿದ್ದಾರೆ. ಇದನ್ನೂ ಓದಿ: ರಷ್ಯಾದಿಂದ ಮತ್ತೆ ಡೆಡ್ಲಿ ಡ್ರೋನ್ ದಾಳಿ – ಉಕ್ರೇನ್‌ನಲ್ಲಿ ಅಲ್ಲೋಲ ಕಲ್ಲೋಲ
Advertisement
Advertisement
ರಷ್ಯಾ ಪಡೆಗಳು ಉಕ್ರೇನಿನ ನಿರ್ಣಾಯಕ ಮೂಲ ಸೌರ್ಯಕಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿವೆ. ಅಲ್ಲದೇ ಉಕ್ರೇನಿನ ಕೆಲವು ಕ್ಷಿಪಣಿಗಳನ್ನು ಹೊಡೆದುರುಳಿದೆ. ನಿಖರ ಮಾಹಿತಿಯನ್ನು ಉಕ್ರೇನ್ ಸೇನೆ ಅಥವಾ ರಕ್ಷಣಾಲಯ ಸ್ಪಷ್ಟಪಡಿಸಬೇಕಿದೆ. ಇದನ್ನೂ ಓದಿ: ಅನ್ನಭಾಗ್ಯ ಕೊಡ್ತೀವಿ ಅಂತ ಸಿದ್ದರಾಮಯ್ಯ ಕನ್ನ ಹಾಕಿದ್ದಾರೆ – ಸಿಎಂ ವಾಗ್ದಾಳಿ
Advertisement
Advertisement
ಇತ್ತೀಚೆಗಷ್ಟೇ ಉಕ್ರೇನ್ ರಷ್ಯಾದ ಕ್ರಿಮಿಯಾ ಸೇತುವೆಯನ್ನು (Crimean Bridge) ಧ್ವಂಸಗೊಳಿಸಿದ ನಂತರ ಪ್ರತೀಕಾರವಾಗಿ ರಷ್ಯಾ ದಾಳಿ ನಡೆಸಿತು. ಸತತವಾಗಿ 75 ಕ್ಷಿಪಣಿಗಳು, 5 ಡೆಡ್ಲಿ ರಾಕೆಟ್‌ಗಳನ್ನು ಉಕ್ರೇನ್ ಮೇಲೆ ಹಾರಿಬಿಟ್ಟಿತ್ತು. ಇದಾದ ಒಂದು ವಾರದಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಉಕ್ರೇನ್ ವಿರುದ್ಧ ಕ್ಷಿಪಣಿ ದಾಳಿ ಅಂತ್ಯಗೊಳಿಸುವುದಾಗಿ ಹೇಳಿದ್ದರು. ಮತ್ತೆ 84 ಡೆಡ್ಲಿ ಡ್ರೋನ್‌ಗಳಿಂದ ದಾಳಿ ನಡೆಸಿತ್ತು. ಅದಕ್ಕಾಗಿ ಇರಾನಿ ಡ್ರೋನ್‌ಗಳನ್ನು ಬಳಸಲಾಗಿತ್ತು. ಇಂದು ಏಕಾಏಕಿ ನೂರು ಕ್ಷಿಪಣಿಗಳಿಂದ ದಾಳಿ ನಡೆಸಿದ್ದು, ಉಕ್ರೇನ್ ಜನರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.