DistrictsKarnatakaLatestLeading NewsMain PostShivamogga

ಅನ್ನಭಾಗ್ಯ ಕೊಡ್ತೀವಿ ಅಂತ ಸಿದ್ದರಾಮಯ್ಯ ಕನ್ನ ಹಾಕಿದ್ದಾರೆ – ಸಿಎಂ ವಾಗ್ದಾಳಿ

ಶಿವಮೊಗ್ಗ: ಸಿದ್ದರಾಮಯ್ಯ (Siddaramaiah) ಅವರ ಅವಧಿಯಲ್ಲಿ ರಾಜ್ಯ ಅಧೋಗತಿಗೆ ಹೋಯಿತು. ಅನ್ನಭಾಗ್ಯ (Anna Bhagya Scheme) ಕೊಡುತ್ತೇವೆ ಎಂದು ಹೇಳಿ ಕನ್ನ ಹಾಕಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ವಾಗ್ದಾಳಿ ನಡೆಸಿದ್ದಾರೆ.

ಜಿಲ್ಲೆಯ ಸೊರಬ ತಾಲೂಕಿನ ಆನವಟ್ಟಿಯಲ್ಲಿ ನಡೆದ ಬಿಜೆಪಿ (BJP) ಜನಸಂಕಲ್ಪ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿಯವರು ಕೇವಲ ಮಾತನಾಡುತ್ತಾರೆ ಕೆಲಸ ಮಾಡೋದಿಲ್ಲ ಎಂದು ಕಾಂಗ್ರೆಸ್ ನವರು ಆರೋಪ ಮಾಡ್ತಾರೆ. ಬಿಜೆಪಿ ವಿರುದ್ಧ ಆರೋಪ ಮಾಡುವುದೇ ಅವರ ಕೆಲಸವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಹೆಣ್ಮಕ್ಳು ಮನೆಯಲ್ಲಿರೋಕೆ ಲಾಯಕ್ಕು – ಚಹಾ ಅಂಗಡಿ ಬಂದ್ ಆಗಿದ್ದಕ್ಕೆ ಬಿಕ್ಕಿ, ಬಿಕ್ಕಿ ಅತ್ತ ಚಾಯ್‌ವಾಲಿ

ಸಿದ್ದರಾಮಯ್ಯ ಅವರ ಅವಧಿಯಲ್ಲಿ ರಾಜ್ಯ ಅಧೋಗತಿಗೆ ಹೋಯಿತು. ಭ್ರಷ್ಟಾಚಾರ ಅಂದ್ರೆನೇ ಕಾಂಗ್ರೆಸ್. ಎಸ್ಸಿ – ಎಸ್ಟಿ (SCST Community) ಮಕ್ಕಳ ಹಾಸಿಗೆ, ದಿಂಬಿನಲ್ಲು ಬಿಡಲಿಲ್ಲ. ಅದರಲ್ಲೂ ಹಣ ತಿಂದು ತೇಗಿದರು. ಕೆಲಸವನ್ನೇ ಮಾಡದೇ ಹಣ ಹೊಡೆದಿದ್ದಾರೆ. ಅನ್ನಭಾಗ್ಯ ಕೊಡುತ್ತೀವಿ ಅಂತೇಳಿ ಕನ್ನ ಹಾಕಿದ್ದಾರೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಬೆಂಗ್ಳೂರು ಬಳಿ ಟಾಟಾ ಐಫೋನ್ ಉತ್ಪಾದನಾ ಘಟಕ – 60 ಸಾವಿರ ಮಂದಿಗೆ ಉದ್ಯೋಗ

ಜನ ನಿಮ್ಮನ್ನು ಸಂಪೂರ್ಣ ತಿರಸ್ಕಾರ ಮಾಡಿದ್ದಾರೆ. ಕೊಟ್ಟ ಕುದುರೆ ಸರಿಯಾಗಿ ಏರಲಿಲ್ಲ. ಜನಪರವಾದ ಕೆಲಸ ಮಾಡಲಿಲ್ಲ. ಇವರು ಅಜ್ಞಾನಿಗಳು, ಅವಿವೇಕಿಗಳು ಇಂತಹವರ ಕೈಗೆ ಅಧಿಕಾರ ಕೊಟ್ಟರೆ ಏನಾಗುತ್ತದೆ ಎಂಬುದನ್ನು ಯೋಚಿಸಬೇಕಿದೆ. ಕೇವಲ ಅಧಿಕಾರಯುತ ರಾಜಕಾರಣವನ್ನು ಕಾಂಗ್ರೆಸ್ ಮಾಡುತ್ತಿದೆ. ಅಭಿವೃದ್ಧಿ ಪರವಾದ ರಾಜಕಾರಣ ಬಿಜೆಪಿ ಮಾಡುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಿದ್ದು ಸಿಎಂ ಅಂತಾ ಡಿಕೆಶಿ ಹೇಳಲಿ:
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು ಎನ್ನುತ್ತಿದ್ದಾರೆ. ಸಿದ್ದರಾಮಯ್ಯ ಅವರೇ ನೀವು ಸಿಎಂ ಆಗಲು ಡಿಕೆಶಿ ಬೆಂಬಲ ಕೊಡುತ್ತಾರೋ, ಇಲ್ಲವೋ ಎಂಬುದನ್ನು ಮೊದಲು ಕೇಳಿ. ಡಿಕೆಶಿ (Dk Shivakumar) ಅವರಿಂದ ಈ ಬಗ್ಗೆ ಬಹಿರಂಗವಾಗಿ ಹೇಳಿಸಿ ನೋಡೋಣ ಎಂದು ಸವಾಲ್ ಹಾಕಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button