ಕೀವ್/ಮಾಸ್ಕೋ: ಉಕ್ರೇನ್ (Ukraine) ವಿರುದ್ಧ ಕ್ಷಿಪಣಿ ದಾಳಿ ಅಂತ್ಯಗೊಳಿಸುವುದಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಹೇಳಿದ ನಂತರ ಈಗ ಡ್ರೋನ್ (Drone) ದಾಳಿ ನಡೆಯುತ್ತಿದೆ.
ಉಕ್ರೇನ್ ಮೇಲೆ ಕ್ಷಿಪಣಿ ದಾಳಿ ಅಂತ್ಯಗೊಳಿಸಿದ ರಷ್ಯಾ (Russia) ಇದೀಗ ಕಾಮಿಕೇಜ್ ಡ್ರೋನ್ ದಾಳಿಯನ್ನು ಮುಂದುವರಿಸಿದೆ.
Advertisement
Advertisement
ಮೊಪೆಡ್ ಸೌಂಡ್ ಕೇಳಿಬಂದ್ರೇ ಉಕ್ರೇನ್ ಜನ ಬೆಚ್ಚಿ ಬೀಳ್ತಿದ್ದಾರೆ. ಭಾರೀ ಶಸ್ತ್ರಾಸ್ತ್ರ ಬಳಸಿ ಸಿಕ್ಕಾಪಟ್ಟೆ ನಷ್ಟ ಹೋಗಿರುವ ರಷ್ಯಾ ಇದೀಗ ಅಗ್ಗದ ಬೆಲೆ ಅಸ್ತ್ರಗಳನ್ನು ಉಕ್ರೇನ್ ವಿರುದ್ಧ ಬಳಸತೊಡಗಿದೆ. ಇರಾನ್‌ನಿಂದ (Iranian Drones) ಆಮದು ಮಾಡಿಕೊಂಡ ಶಾಹಿದ್ ಸರಣಿಯ ಡ್ರೋನ್‌ಗಳನ್ನು ಬಳಸಿ ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತಿದೆ. ಇದನ್ನೂ ಓದಿ: ನ.11ರಂದು ಕೆಂಪೇಗೌಡ ಪ್ರತಿಮೆ ಲೋಕಾರ್ಪಣೆ – ಆದಿಚುಂಚನಗಿರಿ ಶ್ರೀಗಳ ಜತೆ ಸಚಿವರ ಸಮಾಲೋಚನೆ
Advertisement
https://twitter.com/Euan_MacDonald/status/1582056362200031236
Advertisement
ಕೀವ್‌ನಲ್ಲಿಂದು (Kyiv) ಕೆಲವೇ ನಿಮಿಷಗಳ ಅಂತರದಲ್ಲಿ 3 ಡ್ರೋನ್ ದಾಳಿ ನಡೆದಿವೆ. ಈ ಡ್ರೋನ್‌ಗಳಲ್ಲಿ ಮೊಪೆಡ್‌ಗಳಲ್ಲಿ ಬಳಸುವ 50 ಹಾರ್ಸ್ ಪವರ್‌ನ 2 ಸ್ಟ್ರೋಕ್ ಎಂಜಿನ್‌ಗಳನ್ನು ಬಳಸಲಾಗುತ್ತದೆ. ಇವು 40 ಕೆಜಿ ಸ್ಫೋಟಕ ಹೊತ್ತು ಗಾಳಿಯಲ್ಲಿ ಎಗರುವಾಗ ಮೊಪೆಡ್ ಸೌಂಡ್ ಬರುತ್ತದೆ. ಇವುಗಳನ್ನು ಟ್ರಕ್ ಮೇಲ್ಭಾಗ ನಿಂತು ಹಾರಿಸಲಾಗುತ್ತದೆ. ಇದನ್ನೂ ಓದಿ: ದರೋಡೆಗೆ ಬಂದವನಿಗೆ ಕಟ್ಟಿಂಗ್ ಪ್ಲೆಯರ್ ತೋರಿಸಿ ಓಡಿಸಿದ ಲೇಡಿ ಬ್ಯಾಂಕ್ ಮ್ಯಾನೇಜರ್
Photograph of moment of impact of Russian fighter jet with multistory building in the city of Yeysk, across the Gulf of Taganrog from Ukraine's Russian-occupied Mariupol. Pilot ejected (you can see his parachute) after engine caught fire. Secondary explosions from ammunition. pic.twitter.com/qqg53WUJzE
— Euan MacDonald (@Euan_MacDonald) October 17, 2022
ಇತ್ತೀಚೆಗಷ್ಟೇ ಉಕ್ರೇನ್ ರಷ್ಯಾದ ಕ್ರಿಮಿಯಾ ಸೇತುವೆಯನ್ನು (Crimean Bridge) ಧ್ವಂಸಗೊಳಿಸಿದ ನಂತರ ಪ್ರತೀಕಾರವಾಗಿ ರಷ್ಯಾ ದಾಳಿ ನಡೆಸಿತು. ಸತತವಾಗಿ 75 ಕ್ಷಿಪಣಿಗಳು, 5 ಡೆಡ್ಲಿ ರಾಕೆಟ್‌ಗಳನ್ನು ಉಕ್ರೇನ್ ಮೇಲೆ ಹಾರಿಬಿಟ್ಟಿತ್ತು. ಇದಾದ ಒಂದು ವಾರದಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಉಕ್ರೇನ್ ವಿರುದ್ಧ ಕ್ಷಿಪಣಿ ದಾಳಿ ಅಂತ್ಯಗೊಳಿಸುವುದಾಗಿ ಹೇಳಿದ್ದರು. ಇದೀಗ ಮತ್ತೆ ಡ್ರೋನ್ ದಾಳಿಯನ್ನು ಮುಂದುವರಿಸಿದೆ.
Live Tv
[brid partner=56869869 player=32851 video=960834 autoplay=true]