ವಾಷಿಂಗ್ಟನ್: ಉಕ್ರೇನ್‍ನ ಮೇಲೆ ರಷ್ಯಾದ ಆಕ್ರಮಣದ ಬೆದರಿಕೆ ಹೆಚ್ಚಿದ್ದು, ಮುಂದಿನ ದಿನಗಳಲ್ಲಿ ರಷ್ಯಾ ದಾಳಿ ಮಾಡಬಹುದು ಎಂದು ಯುಎಸ್ ಅಧ್ಯಕ್ಷ ಜೋ ಬೈಡನ್ ಆತಂಕ ವ್ಯಕ್ತಪಡಿಸಿದರು.
ಬೈಡನ್ ಅವರು ಶ್ವೇತಭವನದಲ್ಲಿ ಈ ಕುರಿತು ಮಾತನಾಡಿದ್ದು, ನಮಗೆ ಬೆದರಿಕೆಯು ಹೆಚ್ಚಿದೆ. ಏಕೆಂದರೆ ಅವರು ತಮ್ಮ ಯಾವುದೇ ಸೈನ್ಯವನ್ನು ಹೊರಗೆ ಸ್ಥಳಾಂತರಿಸಿಲ್ಲ. ಅದರ ಬದಲು ನಮ್ಮ ರಾಷ್ಟ್ರದ ಒಳಗೆ ಇರಿಸಿದ್ದಾರೆ. ಅವರು ಸುಳ್ಳು ಧ್ವಜವನ್ನು ತೋರಿಸಿ ರಹಸ್ಯ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಇದನ್ನು ನಂಬುದಕ್ಕೆ ನಮಗೆ ಬಲವಾದ ಕಾರಣವಿದೆ ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗಕ್ಕೆ ಸಮಿತಿ ರಚನೆ: ಬೊಮ್ಮಾಯಿ
Advertisement
Advertisement
ನಮ್ಮಲ್ಲಿರುವ ಪ್ರತಿಯೊಂದು ಸೂಚನೆ ಮತ್ತು ಮಾಹಿತಿಗಳ ಪ್ರಕಾರ ರಷ್ಯಾವು ಉಕ್ರೇನ್‍ಗೆ ಹೋಗಲು, ಉಕ್ರೇನ್ ಮೇಲೆ ದಾಳಿ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ದಾಳಿಯನ್ನು ಅವರು ಮುಂದಿನ ಕೆಲವು ದಿನಗಳಲ್ಲಿ ಮಾಡುತ್ತಾರೆ ಎಂಬುದು ನನ್ನ ಭಾವನೆ ಎಂದು ವಿವರಿಸಿದರು.
Advertisement
Advertisement
ಎನ್‍ಎಟಿಒ ಗೆ ಸೇರ್ಪಡೆಗೊಳ್ಳುವ ದೀರ್ಘಾವಧಿಯ ಗುರಿಯೂ ಸೇರಿದಂತೆ, ದೇಶದ ಪಾಶ್ಚಿಮಾತ್ಯ-ಆಧಾರಿತ ನೀತಿಗಳನ್ನು ರದ್ದುಗೊಳಿಸುವ ಪ್ರಯತ್ನದ ಭಾಗವಾಗಿ ರಷ್ಯಾದ ಮಿಲಿಟರಿಯು ಉಕ್ರೇನ್‍ನ ಹೆಚ್ಚಿನ ಗಡಿಗಳನ್ನು ಸುತ್ತುವರೆದಿದೆ. ಇದರಲ್ಲಿ ‘ರಾಜತಾಂತ್ರಿಕ ಮಾರ್ಗ’ ಇದೆ ಎಂದು ಹೇಳಿದರು ಇದನ್ನೂ ಓದಿ: ಹಿಜಬ್ ವಿವಾದ: ಬುರ್ಕಾನೇ ಮುಖ್ಯ, ಸಿಂಧೂರ ತೆಗೆಸಿ ಎಂದ ವಿದ್ಯಾರ್ಥಿನಿಯರು!
ಇಂದು ವಿಶ್ವಸಂಸ್ಥೆಯಲ್ಲಿ ಮಾಡಿದ ಭಾಷಣದಲ್ಲಿ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಸಹ ಮಾತನಾಡಿದ್ದರು.