-ದುಬೈನಿಂದ ಭಾರತಕ್ಕೆ ಬೈಸೋಯಾ ಕರೆತಂದ ಎನ್‌ಸಿಬಿ

ಮುಂಬೈ: 6,000 ಕೋಟಿ ರೂ. ಮೌಲ್ಯದ ಬೃಹತ್ ಡ್ರಗ್ಸ್ ದಂಧೆಯ ಪ್ರಮುಖ ರೂವಾರಿಯನ್ನು ಹೆಡೆಮುರಿಕಟ್ಟುವಲ್ಲಿ ಮಾದಕ ವಸ್ತು ನಿಗ್ರಹ ದಳ (NCB) ಯಶಸ್ವಿಯಾಗಿದೆ. ದುಬೈನಲ್ಲಿ (Dubai) ತಲೆಮರೆಸಿಕೊಂಡಿದ್ದ ಕುಖ್ಯಾತ ಡ್ರಗ್ ಕಿಂಗ್‌ಪಿನ್‌ನನ್ನು ಭಾರತಕ್ಕೆ (India) ಕರೆತಂದಿದೆ.
ನಾರ್ಕೋಟಿಕ್ಸ್ ಕಂಟ್ರೋಲ್ ಬೋರ್ಡ್ (ಎನ್‌ಸಿಬಿ) ಆರೋಪಿ ವಿಕ್ರಮ್ ಬೈಸೊಯಾ (Virender Baisoya) ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿತ್ತು. ಕೇಂದ್ರ ಸರ್ಕಾರ ಪ್ರಯತ್ನದಿಂದ ಆರೋಪಿಯನ್ನು ದುಬೈನಲ್ಲಿ ಬಂಧಿಸಿ, ಗಡೀಪಾರು ಮಾಡಲಾಗಿದೆ. ಸದ್ಯ ಏರ್ ಇಂಡಿಯಾ ವಿಮಾನ ಸಂಖ್ಯೆ 4310ರಲ್ಲಿ ಭಾರತಕ್ಕೆ ಕರೆತರಲಾಗಿದೆ. ಇದನ್ನೂ ಓದಿ: ಸ್ವಾತಂತ್ರ್ಯೋತ್ಸವಕ್ಕೂ ಮುನ್ನಾ ದಿನವೇ ದೆಹಲಿ ಹೈಕೋರ್ಟ್, ಏರ್‌ಪೋರ್ಟ್ ಸೇರಿ 5 ಸ್ಥಳಗಳಿಗೆ ಬಾಂಬ್ ಬೆದರಿಕೆ
ಮೂಲಗಳ ಪ್ರಕಾರ, 13,000 ಪ್ರಕರಣಗಳೊಂದಿಗೆ ನಂಟು ಹೊಂದಿದ್ದ ದೆಹಲಿ ಪೊಲೀಸರ ದೊಡ್ಡ ಡ್ರಗ್ಸ್ ಜಾಲದ ಪ್ರಮುಖ ಆರೋಪಿ ಸಂದೀಪ್ ಧುನಿಯಾನ ಆಪ್ತ ವಿಕ್ರಮ್ ಬೈಸೊಯಾ ಆಗಿದ್ದು, ದುಬೈನಿಂದ ಪಾಕಿಸ್ತಾನಕ್ಕೆ ಪರಾರಿಯಾಗಲು ಯಶಸ್ವಿಯಾಗಿದ್ದ ಎಂದು ತಿಳಿದುಬಂದಿದೆ.ಇದನ್ನೂ ಓದಿ: ಕರ್ನಾಟಕದ 18 ಮಂದಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ರಾಷ್ಟ್ರಪತಿ ಪದಕ ಘೋಷಣೆ
Modi govt is relentlessly tracking down drug traffickers hiding abroad and destroying their entire ecosystem with a ruthless approach.
Creating a new milestone in the policy of zero tolerance against narcotics, the NCB secured the return of fugitive drug kingpin Virender Singh…
— Amit Shah (@AmitShah) August 14, 2026
ಈ ಕುರಿತು ಗೃಹ ಸಚಿವ ಅಮಿತ್ ಶಾ (Amit Shah) ಅವರು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಬೈಸೊಯಾನನ್ನು ಭಾರತಕ್ಕೆ ವಾಪಸ್ ಕರೆತಂದಿರುವುದು, ಮಾದಕ ವಸ್ತುಗಳ ವಿರುದ್ಧದ ಹೋರಾಟದಲ್ಲಿ ಭಾರತ ಸರ್ಕಾರ ಸಾಧಿಸಿದ ದೊಡ್ಡ ಯಶಸ್ಸು ಎಂದು ಬಣ್ಣಿಸಿದ್ದಾರೆ. ವಿದೇಶಗಳಲ್ಲಿ ತಲೆಮರೆಸಿಕೊಂಡಿರುವ ಡ್ರಗ್ಸ್ ಕಳ್ಳಸಾಗಣೆದಾರರನ್ನು ಪತ್ತೆಹಚ್ಚಲು ಮತ್ತು ಅವರ ಜಾಲವನ್ನು ಬೇಧಿಸಲು ಸರ್ಕಾರವು “ನಿರ್ದಾಕ್ಷಿಣ್ಯ ಧೋರಣೆಯನ್ನು” ಅನುಸರಿಸುತ್ತಿದೆ ಎಂದಿದ್ದಾರೆ.ಇದನ್ನೂ ಓದಿ: ಹಿಪ್ಪರಗಿ ಕಾರು ಸ್ಫೋಟ ಪ್ರಕರಣ| ಬಯಲಾಯ್ತು ಕೊಲೆಯ ಮಹಾಸಂಚು; ನಾಲ್ವರು ಆರೋಪಿಗಳ ಬಂಧನ
ಮಾದಕ ವಸ್ತುಗಳ ಕಳ್ಳಸಾಗಣೆ ವಿರುದ್ಧ ಸರ್ಕಾರದ ಶೂನ್ಯ ಸಹಿಷ್ಣುತೆ ನೀತಿಯಲ್ಲಿ ಇದು ಹೊಸ ಮೈಲಿಗಲ್ಲು. ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಯುಎಇಯಿಂದ ತಲೆಮರೆಸಿಕೊಂಡಿದ್ದ ಡ್ರಗ್ ಕಿಂಗ್‌ಪಿನ್ ವಿಕ್ರೇಂದರ್ ಸಿಂಗ್ ಬಸೊಯಾವನ್ನು ವಾಪಸ್ ಕರೆತಂದಿದೆ. ಡ್ರಗ್ಸ್ ಕಳ್ಳಸಾಗಣೆದಾರರು ಎಲ್ಲಿಯೇ ಅಡಗಿಕೊಂಡರೂ ಭಾರತೀಯ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಇದನ್ನೂ ಓದಿ: ಕೇಂದ್ರ ಆರೋಗ್ಯ ಸಚಿವ ಜೆ.ಪಿ ನಡ್ಡಾ ಆಸ್ಪತ್ರೆಗೆ ದಾಖಲು
