ಬೆಂಗಳೂರು: 2 ಲಕ್ಷ ರೂ. ದೋಚಲು ಬಂದ ಕಳ್ಳರು 2 ಕೋಟಿ ರೂ. ಕಳ್ಳತನ ಮಾಡಿ ಪೊಲೀಸರಿಗೆ ಸಿಕ್ಕಿಕೊಂಡಿರುವ ಘಟನೆ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನಡೆದಿದೆ.
ಕುಮಾರಸ್ವಾಮಿ ಲೇಔಟ್ ನಿವಾಸದಲ್ಲಿ ಎರಡು ಕೋಟಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದ ಸುನೀಲ್, ದಿಲೀಪ್‍ರನ್ನು ಪೊಲೀಸರು ಬಂಧಿಸಿದ್ದಾರೆ. ಮಧ್ಯಪ್ರದೇಶ ಮೂಲದ ಸಂದೀಪ್ ಲಾಲ್ ಮನೆಯಲ್ಲಿ ಈ ಕಳ್ಳತನ ನಡೆದಿತ್ತು. ಕುಮಾರಸ್ವಾಮಿ ಲೇಔಟ್ ನಿವಾಸಿ ಸಂದೀಪ್ ಲಾಲ್ ಅವರು ಕೆಲಸದ ನಿಮಿತ್ತ ಚೆನ್ನೈಗೆ ತೆರಳಿದ್ದ ವೇಳೆ ಕಳ್ಳತನ ನಡೆದಿತ್ತು. ಪ್ರಸ್ತುತ ಪೊಲೀಸರು ಬಂಧಿತರಿಂದ 1.76 ಕೋಟಿ ರೂ. ನಗದು ಹಾಗೂ 188 ಗ್ರಾಂ ಚಿನ್ನಾಭರಣ ವಶಕ್ಕೆ ತೆಗೆದುಕೊಂಡಿದ್ದಾರೆ. ಪತ್ತೆಯಾದ ಹಣದ ಪೈಕಿ 500 ರೂ. ನೋಟುಗಳೇ ಹೆಚ್ಚಿನ ಸಂಖ್ಯೆಯಲ್ಲಿ ಸಿಕ್ಕಿರುವುದು ವಿಶೇಷ. ಇದನ್ನೂ ಓದಿ: ಬೆಂಕಿ ಬಿರುಗಾಳಿ ಎಬ್ಬಿಸಿದ ಕಂಗನಾ ಶೋ: ಪತಿ ಜತೆ ಮಲಗಿದವರ ಲಿಸ್ಟ್ ಹೇಳಿದ ನಟಿ ಮಂದರಾ
Advertisement
Advertisement
ಆರೋಪಿಗಳ ಬಳಿ ಇದ್ದ ಕಂತೆ ಕಂತೆ ಹಣ ಕಂಡು ಪೊಲೀಸರೇ ಸುಸ್ತಾಗಿದ್ದಾರೆ. ಪೊಲೀಸರು ಖತರ್ನಾಕ್ ಕಳ್ಳರಿಂದ ಕೋಟಿ ಹಣ ವಶಕ್ಕೆ ಪಡೆದುಕೊಂಡಿರುವುದನ್ನು ಠಾಣೆಯಲ್ಲಿ ನೋಡಿದ ಜನರು ಬಾಯಿ ಮೇಲೆ ಬೆರಳಿಟ್ಟು ನೋಡ್ತಿದ್ದಾರೆ.
Advertisement
ಲಾಯರ್ ಶುಲ್ಕಕ್ಕಾಗಿ ಕಳ್ಳತನ
ಐದು ತಿಂಗಳ ಹಿಂದೆ ಜೈಲಿಂದ ಹೊರಬಂದಿದ್ದ ಆರೋಪಿಗಳು ಮಾರ್ಚ್ 28 ರಂದು ಕುಮಾರಸ್ವಾಮಿ ಲೇಔಟ್ ನಿವಾಸಿ ಸಂದೀಪ್ ಲಾಲ್ ಮನೆಯಲ್ಲಿ ಆರೋಪಿಗಳು ಕಳ್ಳತನ ಮಾಡಿದ್ದಾರೆ. ಲಾಯರ್ ಶುಲ್ಕ ಕೊಡಲು ಎರಡು ಲಕ್ಷ ಆರೋಪಿಗಳು ಕಳ್ಳತನ ಮಾಡಲು ಹೋಗಿದ್ದರು. ಈ ವೇಳೆ ಮನೆಯಲ್ಲಿ ಮೂಟೆಗಳಲ್ಲಿ ಇಟ್ಟಿದ್ದ ಎರಡು ಕೋಟಿ ರೂ. ನಗದು ಸಿಕ್ಕಿದೆ. ಅದನ್ನು ತೆಗೆದುಕೊಂಡು ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.
Advertisement
ಹಣದ ಮುಂದೆ ಡ್ಯಾನ್ಸ್
ಆರಂಭದಲ್ಲಿ ಆರೋಪಿಗಳು ಸಂದೀಪ್ ಲಾಲ್ ಅವರ ಮನೆಯಲ್ಲಿ ಹುಡುಕಾಡಿದ್ದಾರೆ. ಈ ವೇಳೆ ಅವರ ಮನೆಯ ಯಾವುದೇ ಭಾಗದಲ್ಲಿ ಹಣ ಸಿಕ್ಕಿರಲಿಲ್ಲ. ಕೊನೆಗೆ ಮನೆಯ ಸಜ್ಜೆಯ ಮೇಲೆ ನಾಲ್ಕು ಚೀಲಗಳ ಮೂಟೆ ಕಾಣಿಸಿತ್ತು. ಅನುಮಾನಗೊಂಡ ಆರೋಪಿಗಳು ಚೀಲವನ್ನು ಓಪನ್ ಮಾಡಿದ ವೇಳೆ ನೋಟುಗಳ ಕಂತೆಗಳು ಕಾಣಿಸಿಕೊಂಡಿದೆ. ನಾಲ್ಕು ಚೀಲವನ್ನು ಕೆಳಗೆ ಸುರಿದು ಹಣದ ರಾಶಿಯನ್ನು ನೋಡಿ ಫುಲ್ ಖುಷಿ ಆಗಿದ್ದಾರೆ.
ಇದೇ ವೇಳೆ ಮನೆಯಲ್ಲೇ ಇದ್ದ ಫಾರಿನ್ ಎಣ್ಣೆಗೆ ನೀರು ಬೇರಸದೇ ಕುಡಿದು ಡಾನ್ಸ್ ಮಾಡಿದ್ದಾರೆ. ಆರೋಪಿಗಳು ಸಮವಾಗಿ ಒಂದು ಕೋಟಿಯನ್ನು ಹಂಚಿಕೊಂಡಿಲ್ಲ. ಮೂಟೆಯನ್ನು ಸಮವಾಗಿ ಕತ್ತರಿಸಿ ಅಂದಾಜಿನ ಮೇಲೆ ಹಣವನ್ನು ಹಂಚಿಕೊಂಡಿದ್ದಾರೆ.
ಹಣ ಕದ್ದ ವಾರದಲ್ಲಿ ಸಣ್ಣ ಪುಟ್ಟ ಸಾಲಗಳು ಸೇರಿದಂತೆ 25 ಲಕ್ಷ ಖರ್ಚು ಮಾಡಿದ್ದಾರೆ. ಪ್ರಸ್ತುತ ಪೊಲೀಸರು ಆರೋಪಿಗಳಿಂದ 1 ಕೋಟಿ 76 ಲಕ್ಷ ವಶಕ್ಕೆ ಪಡೆದಿಕೊಂಡಿದ್ದಾರೆ. ಮನೆ ಓನರ್ ಸಂದೀಪ್ ಲಾಲ್ ಮೊದಲಿಗೆ ಚಿನ್ನಾಭರಣ ಕಳುವಾಗಿದೆ ಎಂದು ದೂರು ನೀಡಿದ್ದರು. ನಂತರ ಎರಡು ಕೋಟಿ ಹಣ ಕಳುವಾಗಿದೆ ಎಂದು ತಿಳಿಸಿದ್ದಾರೆ. ಇಷ್ಟೊಂದು ಪ್ರಮಾಣದ ಹಣ ಸಂದೀಪ್ ಲಾಲ್ ಮನೆಯಲ್ಲಿ ಸಿಕ್ಕಿದ್ದು ಹೇಗೆ? ಯಾವ ಕಾರಣಕ್ಕೆ ಹಣ ಮನೆಯಲ್ಲಿ ಇಡಲಾಗಿತ್ತು ಅನ್ನೋ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಹಿನ್ನೆಲೆ ಸಂದೀಪ್ ಲಾಲ್‍ಗೆ ಸಂಕಷ್ಟ ಎದುರಾಗಿದೆ. ಇದನ್ನೂ ಓದಿ: ನಾನು ಇದೇ ಏರಿಯಾದವನು ಏನ್ ಮಾಡ್ತಿಯಾ? – ಚಂದ್ರು ಕೊಲೆ ದಿನ ನಡೆದಿದ್ದು ಏನು?
ಇಡಿ, ಐಟಿ ಎಂಟ್ರಿ ಸಾಧ್ಯತೆ
ಪೊಲೀಸರು ಸಂದೀಪ್ ಲಾಲ್ ಮನೆಯಲ್ಲಿ ಎರಡು ಕೋಟಿ ಹಣ ಸಿಕ್ಕ ವಿಚಾರವನ್ನು ಐಟಿ ಇಲಾಖೆ ಗಮನಕ್ಕೆ ತಂದಿದೆ. ಐಟಿ ಇಲಾಖೆಗೆ ಸೂಕ್ತ ದಾಖಲೆ ನೀಡಿ ಕ್ಲಿಯರೆನ್ಸ್ ಮಾಡಿದ ನಂತರ ಹಣ ತೆಗೆದುಕೊಂಡು ಹೋಗುವಂತೆ ಪೊಲೀಸರು ಸೂಚಿಸಿದ್ದಾರೆ. ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದು, ಸೂಕ್ತ ದಾಖಲೆಗಳಿವೆ ಎಂದು ಪೊಲೀಸರ ಮುಂದೆ ಸಂದೀಪ್ ಹೇಳಿಕೆಯನ್ನು ಕೊಟ್ಟಿದ್ದಾರೆ. ಐಟಿ ಅಧಿಕಾರಿಗಳು ಪರಿಶೀಲನೆ ವೇಳೆ ಎರಡು ಕೋಟಿ ಹಣಕ್ಕೆ ಸೂಕ್ತ ದಾಖಲೆ ಸಿಗದೇ ಇದ್ದಲ್ಲಿ ಜಾರಿ ನಿರ್ದೇಶನಾಲಯಕ್ಕೆ ಪ್ರಕರಣವನ್ನು ವರ್ಗಾಯಿಸುವ ಸಾಧ್ಯತೆಯಿದೆ.