– ಬೈಕ್ ಡಿಕ್ಕಿಯಾಗಿದ್ದಕ್ಕೆ ಪ್ರಶ್ನೆ ಮಾಡಿದ್ದಕ್ಕೆ ಇರಿದ
ಬೆಂಗಳೂರು: ಬೈಕ್ ಡಿಕ್ಕಿ ಹೊಡೆದಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ಚಂದ್ರವನ್ನು ಕೊಲೆ ಮಾಡಲಾಗಿದೆ ಎಂದು ಗೆಳೆಯ ಸೈಮನ್ ಹೇಳಿದ್ದಾರೆ.
ಚಂದ್ರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಮನ್ ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಹಳೇ ಗುಡ್ಡದ ಹಳ್ಳಿಯಲ್ಲಿ ಪುಂಡರ ಪುಂಡಾಟ ಹೇಗಿತ್ತು? ಚಂದ್ರು ಕೊಲೆ ದಿನ ನಿಜವಾಗಿಯೂ ನಡೆದಿದ್ದೇನು ಎಂಬುದನ್ನು ಸೈಮನ್ ದೂರಿನಲ್ಲಿ ಸಂಪೂರ್ಣವಾಗಿ ವಿವರಿಸಿದ್ದಾರೆ. ಇದನ್ನೂ ಓದಿ: ಬೈಕ್‍ಗೆ ಡಿಕ್ಕಿ ಹೊಡೆದಿದ್ದಕ್ಕೆ ಚಂದ್ರು ಕೊಲೆ: ಕಮಲ್ ಪಂಥ್
Advertisement
Advertisement
ದೂರಿನಲ್ಲಿ ಏನಿದೆ?
ಏಪ್ರಿಲ್ 4 ಅಂದರೆ ಕಳೆದ ಸೋಮವಾರ ಸೈಮನ್ ರಾಜ್ ಆದ ನನ್ನ ಬರ್ತಡೇ ಇತ್ತು. ರಾತ್ರಿ 12 ಗಂಟೆ ಸಮಯದಲ್ಲಿ ಚಂದ್ರು ನನ್ನ ಬರ್ತಡೇಗೆ ಕೇಕ್ ಕಟ್ ಮಾಡಿಸಿದ್ದ. ನಂತರ ಚಂದ್ರು ನಂಗೆ ಚಿಕನ್ ರೋಲ್ ತಿನ್ನಬೇಕು ಅಂತಾ ಹೇಳಿದ್ದ.
Advertisement
ಆ ವೇಳೆ ನನ್ನ ಹೋಂಡಾ ಅಕ್ಟೀವಾ ಬೈಕ್ ಕೆಎ 02-ಕೆಜೆ 4195 ರಲ್ಲಿ ಸಿಟಿ ಮಾರ್ಕೆಟ್, ಚಾಮರಾಜಪೇಟೆ ಎಲ್ಲ ಕಡೆ ಚಿಕನ್ ರೋಲ್‍ಗಾಗಿ ಹುಡುಕಾಟ ನಡೆಸಿದ್ದು, ಎಲ್ಲೂ ಕೂಡ ಚಿಕನ್ ರೋಲ್ ಸಿಕ್ಕಿರಲಿಲ್ಲ. ರಂಜಾನ್ ಇರುವ ಕಾರಣ ಗೋರಿಪಾಳ್ಯದಲ್ಲಿ ಚಿಕನ್ ರೋಲ್ ಸಿಗುತ್ತೆ ಅನ್ನೋ ಕಾರಣಕ್ಕೆ ನಸುಕಿನ ಜಾವ 2:15 ರ ಸಮಯದಲ್ಲಿ ಹಳೇ ಗುಡ್ಡದ ಹಳ್ಳಿಗೆ ಹೋಗಿದ್ವಿ.
Advertisement
ಈ ವೇಳೆ ವೇಗವಾಗಿ ಬಂದ ಬೈಕ್‍ವೊಂದು ನಮ್ಮ ಬೈಕ್‍ಗೆ ಡಿಕ್ಕಿ ಹೊಡೆದಿತ್ತು. ನಾವು ಏರುಧ್ವನಿಯಲ್ಲಿ ಯಾಕೋ ಡಿಕ್ಕಿ ಹೊಡೆದೆ ಅಂತಾ ಕೇಳಿದ್ವಿ. ಇದಕ್ಕೆ ಶಾಹೀದ್ ಎಂಬಾತ, “ಯಾರೋ ನೀವು, ತೇರಿ ಮಾಕಿ ಸೂದ್, ನಾನು ಇದೇ ಏರಿಯಾದವನು ಏನ್ ಮಾಡ್ತಿಯಾ” ಎಂದು ಪ್ರಶ್ನಿಸಿದ. ಜೊತೆಗೆ ಇತರೆ ಹುಡುಗರನ್ನು ಸೇರಿಸಿಕೊಂಡು ಗಲಾಟೆ ಶುರುಮಾಡಿದರು. ಈ ವೇಳೆ ಶಾಹೀದ್ ತನ್ನ ಚಾಕುವಿನಿಂದ ಚಂದ್ರು ತೋಡೆಗೆ ಇರಿದ. ಇದನ್ನೂ ಓದಿ: ಚಂದ್ರು ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಕೊಟ್ಟ ಜಮೀರ್
ಚಂದ್ರು ತೋಡೆಗೆ ಚಾಕು ಇರಿದ ಪರಿಣಾಮ ತೀವ್ರವಾಗಿ ರಕ್ತಸ್ತ್ರಾವ ಆಗಿದ್ದನ್ನು ನೋಡಿ ಶಾಹೀದ್ ಮತ್ತು ಸ್ನೇಹಿತರು ಅಲ್ಲಿಂದ ಓಡಿ ಹೋಗಿದ್ರು. ಈ ಗಲಾಟೆಯಿಂದ ತಪ್ಪಿಸಿಕೊಂಡು ನಾನು ಓಡಿ ಹೋದೆ. ಆಟೋದಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ನಾಲ್ಕು ಗಂಟೆ ಸಮಯದಲ್ಲಿ ಚಂದ್ರು ಸಾವನ್ನಪ್ಪಿದ್ದಾನೆ.